ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಶ್ರದ್ಧಾ ಭಕ್ತಿಯಿಂದ ದತ್ತಾತ್ರೇಯ ಜಯಂತಿ

Srinivasa Murthy VN
Updated On : 18 Dec 2013, 12:24 pm

ಬಂಗಾರಪೇಟೆ: ಶಿರಡಿ ಸಾಯಿ ನಾಟಕ ಸೇವಾ ಸಮಿತಿಯಿಂದ ಮುನಿಯಪ್ಪ ಬಡಾವಣೆಯಲ್ಲಿ ದತ್ತಾತ್ರೇಯ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಇದೇ ವೇಳೆ ಲೋಕಕಲ್ಯಾಣಾರ್ಥವಾಗಿ ಜನವರಿ 16ರಂದು ಪಟ್ಟಣದ ಬಾಲಕರ ಜೂನಿಯರ್ ಕಾಲೇಜು ಮೈದಾನದಲ್ಲಿ ಸಾಯಿ ಬಾಬರವರ ಜೀವ ಚರಿತ್ರೆ ಆದರಿತ ನಾಟಕ ಮತ್ತು ಭಜನೆಗಳನ್ನು ಖ್ಯಾತ ಕಲಾವಿದರಿಂದ ಆಯೋಜಿಸಲಾಗಿದ್ದು ಇದರ ಪ್ರವೇಶ ಧರ ಕರಪತ್ರಗಳನ್ನು ಕನ್ನಡ ಸಂಘದ ಅಧ್ಯಕ್ಷ ಪಲ್ಲವಿಮಣಿ ಉದ್ಘಾಟಿಸಿದರು.
ಪಟ್ಟಣದಲ್ಲಿ ಮೊದಲಬಾರಿಗೆ ಸಾಯಿ ಬಾಬಾರ ಜೀವನ ಚರಿತ್ರೆ ಬಗ್ಗೆ ನಾಟಕ ಮತ್ತು ಭಜನೆಗಳ ಮೂಲಕ ಭಕ್ತರಿಗೆ ಅರಿವು ಮೂಡಿಸುವ ಅಪರೂಪದ ಕಾರ್ಯಕ್ರಮವನ್ನು ಬಾಬ ಭಕ್ತರಿಂದ ಸಂಕ್ರಾಂತಿ ಹಬ್ಬದಂದು ಹಮ್ಮಿಕೊಂಡಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೋರಿದರು.ದತ್ತಾತ್ರೇಯ ಜಯಂತಿ ಪ್ರಯುಕ್ತ ಸಾಯಿ ಬಾಬರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು ಗಣೇಶ ಹೋಮ ನಡೆಯಿತು.

ಆಸ್ತಿ ತೆರಿಗೆ: ಮಾಲೀಕರಿಗೆ ಸೂಚನೆ
ಗುಡಿಬಂಡೆ:
ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಬರುವ ಎಲ್ಲಾ ಆಸ್ತಿ ಮಾಲೀಕರು ತಮ್ಮ ಎಲ್ಲಾ ಆಸ್ತಿಗಳ ಆಸ್ತಿ ತೆರಿಗೆಯನ್ನು ಗಣಕಯಂತ್ರದಲ್ಲಿ ಕಾಲೋಚಿತಗೊಳಿಸಿಕೊಳ್ಳಿ ಎಂದು ಮುಖ್ಯಾಧಿಕಾರಿ ಶ್ರೀರಾಮರೆಡ್ಡಿ ತಿಳಿಸಿದ್ದಾರೆ.
ಪಟ್ಟಣ ಪಂಚಾಯತಿ ಪರಿಮಿತಿಯ ಎಲ್ಲಾ ಆಸ್ತಿಗಳನ್ನು ಗಣಕೀಕೃತಗೊಳಿಸಿರುವುದು ಸರಿಯಷ್ಟೇ, ಆದರೆ ಕೆಲಮೊಂದು ಆಸ್ತಿ ಮಾಲೀಕರು ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಬ್ಯಾಂಕ್‌ನಲ್ಲಿ ಪಾವತಿಸಿದ ನಂತರ ಸ್ವಯಂ ಘೋಷಣೆ ಹಾಗೂ ಚಲನ್‌ಗಳನ್ನು ಪಟ್ಟಣ ಪಂಚಾಯತಿಗೆ ನೀಡಿರುವುದಿಲ್ಲ. ಪಾವತಿಸಿರುವ ಆಸ್ತಿ ತೆರಿಗೆಯನ್ನು ಗಣಕೀಕರಣ ಮಾಡಲು ಸಾಧ್ಯವಾಗದೆ ತೆರಿಗೆ ಬಾಕಿ ಇರುತ್ತದೆ.
ಆದ್ದರಿಂದ ಆಸ್ತಿಗಳ ಮಾಲೀಕರು ಸ್ವಯಂ ಘೋಷಿತ ನಮೂನೆ ಹಾಗೂ ಚಲನ್‌ಗಳನ್ನು ಕಚೇರಿ ಸಮಯದಲ್ಲಿ ಹಾಜರು ಪಡಿಸಿ ಗಣಕಯಂತ್ರದಲ್ಲಿ ಕಾಲೋಚಿತಗೊಳಿಸಿಕೊಳ್ಳಬೇಕೆಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 08156261110 ಸಂಪರ್ಕಿಸಬಹುದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement