ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ಜನಪ್ರತಿನಿಧಿಗಳನ್ನು ಹುಡುಕಿ ಕೊಡ್ತಿರಾ'

Srinivasa Murthy VN
Updated On : 20 Dec 2013, 12:04 pm

ಕೋಲಾರ: ಜಿಲ್ಲೆಯಿಂದ ಕಾಣೆಯಾಗಿರುವ ಜಿಲ್ಲಾ ಉಸ್ತುವಾರಿ ಸಚಿವ,ಕೇಂದ್ರ ಸಚಿವ ಹಾಗೂ ಶಾಸಕರನ್ನು ಹುಡುಕಿಕೊಡಬೇಕೆಂದು ರೈತ ಸಂಘದ ಮುಖಂಡರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಲ್ಲಿ ಮೊರೆ ಹೋಗಿದ್ದಾರೆ. ಈ ಸಂಬಂಧ ರೈತ ಸಂಘದ ಹಸಿರುಸೇನೆ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ ಅವರು ಸಂಘದ ಪದಾಧಿಕಾರಿಳೊಂದಿಗೆ ಜಿಲ್ಲಾ ಎಸ್ಪಿಯನ್ನು ಭೇಟಿಯಾಗಿ ದೂರು ನೀಡಿದ್ದಾರೆ. ಜಿಲ್ಲೆಯಲ್ಲಿ ಜನಪ್ರತಿನಿಧಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲವಾದ್ದರಿಂದ ಜನತೆಯ ಸಮಸ್ಯೆ ಕೇಳುವವರು ಇಲ್ಲದಂತಾಗಿದೆ, ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸ ಸರಿಯಾಗಿ ಆಗುತ್ತಿಲ್ಲ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಜನಪ್ರತಿನಿಧಿಗಳ ಬಳಿ ಹೋಗಬೇಕೆಂದರೆ ಸಿಗುತ್ತಿಲ್ಲವಾದ್ದರಿಂದ ಕಾಣೆಯಾಗಿರುವ ಜನಪ್ರತಿನಿಧಿಗಳನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಸಂಚಾಲಕ ಕೆ. ಶ್ರೀನಿವಾಸಗೌಡ,ಹಸಿರು ಸೇನೆ ಜಿಲ್ಲಾಧ್ಯಕ್ಷ ಹುಲ್ಕೂರು ಹರಿಕುಮಾರ್, ಹೂಹಳ್ಳಿ ನಾಗರಾಜ್, ಪುರುಷೋತ್ತಮ್, ನೀಲಕಂಠಪುರ ಮುನೇಗೌಡ, ಮೂರಾಂಡಹಳ್ಳಿ ಶಿವಾರೆಡ್‌ಡಿ, ಕೆಂಬೋಡಿ ಕೃಷ್ಣೇಗೌಡ, ವಿಶ್ವನಾಥ್, ಗಣೇಶ್, ಮರಗಲ್ ಶ್ರೀನಿವಾಸ್, ಸುಬ್ರಮಣಿ, ಹೆಚ್.ವಿ ಚಂದ್ರಪ್ಪ, ಈಕಂಬಳ್ಳಿ ಮಂಜುನಾಥ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement