ಟೊಮೆಟೋ ಬೆಳೆ ಕ್ಷೇತ್ರೋತ್ಸವ
ಚಿಂತಾಮಣಿ: ವಿವಿಧ ಹೈಬ್ರಿಡ್ ಟೊಮೆಟೋ ತಳಿ ಉಪಯೋಗಿಸುವ ಬಗ್ಗೆ ರೈತರು ಕೃಷಿ ಅಧಿಕಾರಿಗಳಿಂದ ಅಥವಾ ಖಾಸಗಿ ಕಂಪನಿಯಿಂದ ಮಾಹಿತಿ ಪಡೆದಲ್ಲಿ ರೈತರು ಉತ್ತಮ ಬೆಳೆ ತೆಗೆಯಲು ಸಾದ್ಯವೆಂದು ಪ್ರಗತಿಪರ ರೈತ ಕೆ.ಬಾಬು ವಿವರಿಸಿದರು.
ತಾ. ಕೈವಾರ ಹೋಬಳಿ ಕೊಂಗನಹಳ್ಳಿ ಗ್ರಾಮದ ರೈತ ಕೆ.ಬಾಬು ಜಮೀನಿನಲ್ಲಿ ಶ್ರೀರಾಮು ಬಯೋಸೀಡ್-90 ಕಂಪನಿಯಿಂದ ಟೊಮೆಟೋ ಬೆಳೆಯ ಕ್ಷೇತ್ರೋತ್ಸವದಲ್ಲಿ ಮಾತನಾಡಿದರು.
ಬೀಜ ಉತ್ತಮ ಗುಣಮಟ್ಟದ ಹೆಸರು ಪಡೆದಿರುವ ಖಾಸಗಿ ಸ್ವದೇಶಿ ಕಂಪನಿ ಶ್ರೀರಾಮು ಬಯೋಸೀಡ್-90 ಉತ್ತಮ ಟಮೋಟೊ ಬೆಳೆ ಬೆಳೆಯಲು ಸಾಧ್ಯವೆಂದು ಸಭೆಯಲ್ಲಿ ನೆರೆದಿದ್ದ ರೈತರ ಸಮ್ಮುಖ ತಿಳಿಸಿದರು.
ಸತೀಶ್ ಶ್ಯಾನಭೋಗ್ ಮಾತನಾಡಿ ದೇಶದಲ್ಲಿ ನೂರಾರು ಕಂಪನಿಗಳು ತಲೆಯೆತ್ತಿ ರೈತರಿಗೆ ಆಸೆಗಳನ್ನು ತೋರಿದರೂ ಸಹ ರೈತ ನಂಬಿ ಮೋಸ ಹೋಗಿರುವ ಹಲವು ಉದಾಹರಣೆಗಳು ನಮ್ಮ ಎದುರು ಇವೆ. ಆದರೆ ಸ್ವದೇಶ ಕಂಪನಿಯಾದ ಬೆರಳೆಣಿಕೆಯ ಪ್ರತಿಷ್ಠಿತ ಕಂಪನಿಗಳಲ್ಲಿ ಒಂದಾದ ಶ್ರೀರಾಮು ಬಯೋಸೀಡ್ ಕಂಪನಿ ರೈತರ ಹಿತವನ್ನು ಕಾಪಾಡಲು ಮುಂದಾಗಿದೆಂದು ಹೆಮ್ಮಯಿಂದ ನುಡಿದರು. ಮುಖ್ಯ ಅತಿಥಿ ಅಂಬರೀಷ್ ಮಾತನಾಡಿ, ಶ್ರೀರಾಮುಬಯೋಸೀಡ್-90 ನಮ್ಮ ಹೊಸ ತಳಿ. ಇದನ್ನು ಪ್ರಮುಖವಾಗಿ ಟೊಮೆಟೋ ಬೆಳೆಯುವ ದಕ್ಷಿಣ ರಾಜ್ಯಗಳಾದ ಕರ್ನಾಟಕ, ಆಂದ್ರಪ್ರದೇಶ ಮತ್ತು ತಮಿಳುನಾಡುಗಳಲ್ಲಿ ಇದನ್ನು ರೈತರಿಗೆ ಬೆಳೆಯಲು ಪ್ರೋತ್ಸಾಹಿಸಲಾಗುತ್ತಿದೆ ಎಂದರು.