ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬೇಡಿಕೆ ಈಡೇರಿಸಲು ಒತ್ತಾಯಿಸಿ ಪ್ರತಿಭಟನೆ

Srinivasa Murthy VN
Updated On : 20 Dec 2013, 12:06 pm

ಕ.ಪ್ರ.ವಾರ್ತೆ ಕೋಲಾರ ಡಿ.19
ಉದ್ಯೋಗ ಖಾತ್ರಿಯನ್ನು ಸಮರ್ಪಕವಾಗಿ ಜಾರಿ ಮಾಡಬೇಕು, ಬಾಕಿ ಇರುವ ಮನೆಗಳ ಬಿಲ್‌ಗಳನ್ನು ಶೀಘ್ರವಾಗಿ ನೀಡಬೇಕು ಮತ್ತಿತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಡಿವೈಎಫ್‌ಐ, ಜೆಎಂಎಸ್ ಹಾಗೂ ಪ್ರಾಂತ ರೈತ ಸಂಘವು ಜಂಟಿಯಾಗಿ ತಾಲೂಕಿನ ಶಾಪೂರು ಗ್ರಾಮ ಪಂಚಾಯಿತಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿತು.
ಶಾಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗರೀಕರು ಮೂಲಭೂತ ಸೌಲಭ್ಯಗಳು ಮತ್ತು ಸರ್ಕಾರದ ವಿವಿಧ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಜನಪ್ರತಿನಿಧಿಗಳು ಇತ್ತ ಕಡೆ ಗಮನ ಹರಿಸದೇ ನಿರ್ಲಕ್ಷ್ಯ ವಹಿಸಿರುವುದು ಖಂಡನೀಯ. ಮುಖ್ಯವಾಗಿ ಕಳೆದ ಮೂರು ವರ್ಷಗಳ ಕಾಲಾವಧಿಯಲ್ಲಿ 6 ಜನ ಪಂಚಾಯಿತಿ ಅಭಿವೃದ್ಧಿ ವರ್ಗಾವಣೆಯಾಗಿದ್ದಾರೆ.
 ಈ ವರ್ಗಾವಣೆ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ಸರಿಯಾದಂತಹ ರೀತಿಯಲ್ಲಿ ಕೆಲಸ ಮಾಡದೇ ಜನಸಾಮಾನ್ಯರಿಗೆ ತೊಂದರೆಯಾಗಿದೆ ಎಂದು ಸಂಘಟನೆಯ ಮುಖಂಡರು ಆರೋಪಿಸಿದರು.
ದೊಡ್ನಹಳ್ಳಿ, ಸಿರೇಸಂದ್ರ, ಯಾರಂಘಟ್ಟ, ಹಳೇಸೋಮರಸನಹಳ್ಳಿ ಮತ್ತು ನಂದಂಬಳ್ಳಿ ಗ್ರಾಮಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಲು ಕೋರಿ ಫಾರಂ 6 ಹಾಕಿದ್ದರೂ ಇದುವರೆಗೂ ಕೆಲಸ ನೀಡಲ್ಲ. ಕೂಡಲೇ ಕೆಲಸ ನೀಡಬೇಕು. ರಾಜೀವ್‌ಗಾಂಧಿ ಹೌಸಿಂಗ್ ಬೋರ್ಡ್‌ನಿಂದ ಮಂಜೂರಾಗಿ ಎರಡು ವರ್ಷಗಳು ಕಳೆದರೂ ಇಲ್ಲಿಯ ತನಕ ಫಲಾನುಭವಿಗಳಿಗೆ ಬಿಲ್‌ಗಳು ಮಂಜೂರು ಆಗದೇ ಅವರು ಮನೆಯು ಕಟ್ಟಿಕೊಳ್ಳದೇ ಬೀದಿ, ಜೋಪಡಿಗಳಲ್ಲಿ ವಾಸ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
 ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸಂಬಂಧಪಟ್ಟ ಎಲ್ಲ ಹಳ್ಳಿಗಳಲ್ಲಿ ಸಮರ್ಪಕವಾಗಿ ಬೀದಿ ದೀಪಗಳು ಅಳವಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪಂಚಾಯಿತಿ ವ್ಯಾಪ್ತಿಯ ವಸತಿ ರಹಿತರಿಗೆ ಮನೆ ನಿವೇಶನ ನೀಡಲು ಒತ್ತಾಯಿಸಿ ಸಂಘಟನೆಯ ನೇತೃತ್ವದಲ್ಲಿ ನೂರಾರು ವಸತಿಹೀನರಿಗೆ ಅರ್ಜಿ ಹಾಕಿ ಎರಡು ವರ್ಷ ಕಳೆದರೂ ಇಲ್ಲಿಯ ತನಕ ಯಾವುದೇ ಕ್ರಮ ಕೈಗೊಂಡಿಲ್ಲ.
 ಈ ಕುರಿತು ಶೀಘ್ರವಾಗಿ ಸಮೀಕ್ಷೆ ನಡೆಸಿ ಸರ್ಕಾರ ವರದಿಯನ್ನು ಕಳುಹಿಸಬೇಕು. ನೂತನ ಪಡಿತರ ಚೀಟಿಗಾಗಿ ನೂರಾರು ಮಂದಿ ಅರ್ಜಿ ಹಾಕಿದ್ದರೂ ಅಂತಿಮ ಸಮೀಕ್ಷೆ ನಡೆಸುವ ಅಧಿಕಾರ ಪಂಚಾಯಿತಿಗೆ ಇದ್ದರೂ ಅದರ ಬಗ್ಗೆ ಗಮನ ಹರಿಸದೇ ಇರುವುದರಿಂದ ಸಾರ್ವಜನಿಕರು ಪಡಿತರ ಚೀಟಿಗಾಗಿ ಅಲೆದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
 ಮತ್ತೊಂದೆಡೆ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಗುಂಡುತೋಪು ಮತ್ತು ಸ್ಮಶಾನಗಳನ್ನು ಸರ್ವೆ ಮಾಡಿಸಿ ಅವುಗಳ ಅಭಿವೃದ್ಧಿ ಕಡೆ ಗಮನ ಹರಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿದರು.
ಮನವಿ ಸ್ವೀಕರಿಸಿದ ಪಿಡಿಓ ತಾಪಂ ಇಒ ನೇತೃತ್ವದಲ್ಲಿ ಸಭೆ ನಡೆಸಿ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ವಾಪಸ್ ಪಡೆಯಲಾಯಿತು.
ಜೆಎಂಎಸ್ ರಾಜ್ಯಾಧ್ಯಕ್ಷೆ ವಿ.ಗೀತಾ, ಮುಖಂಡರಾದ ಆಂಜಿನಮ್ಮ, ಕೆ.ಎಂ.ಸುಶೀಲ, ಡಿವೈಎಫ್‌ಐ ಮುಖಂಡರಾದ ವಿಜಯಕೃಷ್ಣ, ಎ.ವಿ.ರಮೇಶ್, ಸುಬ್ರಮಣಿ, ಡಿ.ಪಿ.ನಾಗರಾಜ್, ಡಿ.ಎಸ್.ವೆಂಕಟರಮಣ, ಪ್ರಾಂತ ರೈತ ಸಂಘದ ಹೊಲ್ಲಂಬಳ್ಳಿ ವೆಂಕಟೇಶಪ್ಪ, ಅಪ್ಪಯ್ಯಣ್ಣ ಪ್ರತಿಭಟನೆಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement