ಮಕ್ಕಳಿಗೆ ಕಲಬೆರಕೆ ಆಹಾರ: ಮುಲಾಜಿಲ್ಲದೆ ಕಠಿಣ ಕ್ರಮ
ಬಂಗಾರಪೇಟೆ: ಮಕ್ಕಳಿಗೆ ಕಲಬೆರಕೆ ಆಹಾರ ಹಾಗೂ ವಿತರಣೆಯಲ್ಲಿ ಯಾವುದೇ ತಾರತಮ್ಯ ಮಾಡುವುದು ಕಂಡು ಬಂದರೆ ಮುಲಾಜಿಲ್ಲದೆ ಕಠಿಣ ಕ್ರಮ ಜರುಗಿಸುವುದಾಗಿ ಬಿಸಿಯೂಟ ಸಿಬ್ಬಂದಿಗೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಎಚ್ಚರಿಕೆ ನೀಡಿದರು.
ಅಕ್ಷರ ದಾಸೋಹ ಯೋಜನೆಯ ಅಡುಗೆ ಸಿಬ್ಬಂದಿಗೆ ಬಯಲುರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಕಾರ್ಯಾಗಾರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಲವು ಶಾಲೆಗಳಲ್ಲಿ ಶಿಕ್ಷಕರು ಪ್ರತ್ಯೇಕವಾಗಿ ಅಡುಗೆ ಮಾಡಿಕೊಳ್ಳಲಾಗುತ್ತಿದೆ ಇದು ತಾರತಮ್ಯವಲ್ಲವೇ ಎಂದು ಪ್ರಶ್ನಿಸಿ, ಈ ತಾರತಮ್ಯವನ್ನು ಹೋಗಲಾಡಿಸಿ ಮಕ್ಕಳದೊಂದಿಗೆ ಶಿಕ್ಷಕರು ಊಟ ಮಾಡಿ ಎಲ್ಲರೂ ಒಂದೇ ಎಂಬ ಭಾವನೆ ಮೂಡಿಸಬೇಕು ಈ ಕಾರಣಕ್ಕೆ ಅಡುಗೆ ಸಹಾಯಕರಿಗೆ ಸಂಬಳ ಸಮಸ್ಯೆ ನಿವಾರಿಸಿದೆ ಎಂದರು. ಪಟ್ಟಣದ ಮೂಲಕ ದಿನ ನಿತ್ಯ ಬೆಂಗಳೂರಿಗೆ ಸಾವಿರಾರು ಸಂಖ್ಯೆಯಲ್ಲಿ ಕೆಲಸ ಕಾರ್ಯಗಲಿಗೆ ಪ್ರಯಾಣಿಸುವ ಅವರಿಗೆ ರೈಲುಗಳ ಕೊರತೆಯಿಂದ ಪರದಾಡುತ್ತಿದ್ದು ಈ ಸಮಸ್ಯೆ ನೀಗಿಸಲು ಮತ್ತಷ್ಟು ಹೊಸ ರೈಲುಗಳನ್ನು ಪಟ್ಟಣದಿಂದ ಪ್ರಾರಂಭಿಸಬೇಕೆಂದು ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆರಿಗೆ ಮನವಿ ಸಲ್ಲಿಸಲಾಗಿದ್ದು ಮುಂದಿನ ಬಜೆಟ್‌ನಲ್ಲಿ ಈಡೇರಿಸುವುದಾಗಿ ಭರವೆಸ ನೀಡಿದ್ದಾರೆಂದು ತಿಳಿಸಿದರು. ಇಒಇ ಕೆ.ಜಯರಾಜ್,ಅಕ್ಷರದಾಹೋಸ ಅಧಿಕಾರಿ ಸಿದ್ದರಾಜು,ತಾಲೂಕು ವೈದ್ಯಾಧಿಕಾರಿ ಕಮಲಾಕರ್,ಆರ್.ಶ್ರೀನಿವಾಸ್,ಪಿಎಸ್‌ಐ ಯೋಗಾನಂದ ಸೋನಾರ್ ಇತರರು ಇದ್ದರು.