ರಜೆ ದಿನಗಳ ಹೆಚ್ಚುವರಿ ವೇತನಾದೇಶಕ್ಕೆ ಒತ್ತಾಯ
ಕೋಲಾರ: ಸರ್ಕಾರಿ ರಜೆ ದಿನಗಳಲ್ಲಿ ಕರ್ತವ್ಯ ನಿರ್ವಹಿಸುವ ಆರೋಗ್ಯ ಇಲಾಖೆಯ ಎಲ್ಲಾ ನೌಕರರಿಗೂ 15 ದಿನಗಳ ಹೆಚ್ಚುವರಿ ವೇತನವನ್ನು ನೀಡಲು ಇಲಾಖೆಯ ರಾಜ್ಯ ನಿರ್ದೇಶಕರು ಆದೇಶಿಸಿದ್ದು, ಕೂಡಲೇ ಸರ್ಕಾರಿ ಆದೇಶವನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಮುನಿರಾಜು ನೇತೃತ್ವದಲ್ಲಿ ಡಿಹೆಚ್ಓ ಅವರಿಗೆ ಮನವಿ ಸಲ್ಲಿಸಲಾಯಿತು.
ಗುರುವಾರ ಡಿಹೆಚ್ಓ ಡಾ.ಫಯಾನ್ಖಾನ್ ಅವರನ್ನು ಭೇಟಿಯಾದ ಆರೋಗ್ಯ ಇಲಾಖೆಯ ನೌಕರರ ಸಂಘದ ಪದಾಧಿಕಾರಿಗಳ ತಂಡದ ಸದಸ್ಯರು ಇದುವರೆಗೂ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಸರ್ಕಾರಿ ರಜೆ ದಿನಗಳಂದು ಕಾರ್ಯನಿರ್ವಹಿಸುತ್ತಿದ್ದ ನೌಕರರಿಗೆ ಮಾತ್ರ ಈ ಸೌಲಭ್ಯವಿತ್ತು ಸರ್ಕಾರ ಈಗ ಎಲ್ಲಾ ನೌಕರರಿಗೂ ರಜೆ ದಿನಗಳ ಹೆತ್ತುವರಿ ವೇತನ ನೀಡಲು ಸೂಚಿಸಿರುವುದರಿಂದ ಕ್ರಮ ಕೈಗೊಳ್ಳುವಂತೆ ಎಂದು ತಿಳಿಸಿದರು. ಸಂಘದ ಮನವಿ ಸ್ವೀಕರಿಸಿದ ಡಾ.ಫಯಾಜ್ಖಾನ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿ ಕೂಡಲೇ ಈ ಕುರಿತು ಸುತ್ತೋಲೆ ಹೊರಡಿಸಿ ಈ ಸೌಲಭ್ಯವನ್ನು ಒದಗಿಸಿಕೊಡುವುದಾಗಿ ಭರವಸೆ ನೀಡಿದರು.
ಮನವಿ ಸಲ್ಲಿಕೆ ಸಂದರ್ಭದಲ್ಲಿ ಆರೋಗ್ಯ ಸಂಘದ ಅಧ್ಯಕ್ಷೆ ಎಸ್.ವಿಜಯಮ್ಮ, ಪ್ರಧಾನ ಕಾರ್ಯದರ್ಶಿ ಜಯಲಕ್ಷ್ಮಿ, ಖಜಾಂಚಿ ಆರ್.ನಾಗರಾಜ್, ಕಾರ್ಯದರ್ಶಿ ಎಲ್.ರಘುನಾಥ್, ಉಪಾಧ್ಯಕ್ಷ ಜಯಣ್ಣ, ಸಂದಪ್ಪ, ಕಮಾಲಾಕರ್, ರವಣಪ್ಪ, ವೇಣುಗೋಪಾಲ್, ಲೋಕೇಶ್ಕುಮಾರ್, ಗುರುಪ್ರಕಾಶ್, ಡಿ.ಸರಸ್ವತಿ, ಕನಕಲಕ್ಷ್ಮಿ, ಬೀರಪ್ಪ, ಜಾರ್ಜ್, ಅಹಮದ್ ಅಯೂಬ್, ನಜರುಲ್ಲಾಖಾನ್, ತನ್ವೀರ್, ಮರುಳಿಬಾಬು, ಚಲಪತಿ, ಕೃಷ್ಣಪ್ಪ, ಹೆಚ್.ನಾರಾಯಣಪ್ಪ, ವೆಂಕಟೇಶ ಬಾಬು ಇದ್ದರು.