ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸರ್ಕಾರಿ ಭೂಮಿ ಒತ್ತುವರಿ ತೆರವು

Srinivasa Murthy VN
Updated On : 20 Dec 2013, 12:12 pm

ಗುಡಿಬಂಡೆ: ತಾಲೂಕಿನ ಮ್ಯಾಕಲಹಳ್ಳಿ ಗ್ರಾಮದ ಬಳಿ ಒತ್ತುವರಿ ಮಾಡಿಕೊಂಡಿದ್ದ ಸರ್ಕಾರಿ ಭೂಮಿಯನ್ನು ತಹಸೀಲ್ದಾರ್ ಶೈಲಜಾ ನೇತೃತ್ವದಲ್ಲಿ ಕಂದಾಯ ಅಧಿಕಾರಿಗಳು ಜೆಸಿಬಿ ಯಂತ್ರದ ಮೂಲಕ ಗುರುವಾರ ತೆರವುಗೊಳಿಸಿದರು.
ಸ.ನಂ. 12, 14, 15 ಮತ್ತು 16ರಲ್ಲಿ  ಸಾವಿತ್ರಮ್ಮ ಕೋಂ ನಂಜುಂಡಪ್ಪ ಎಂಬುವವರು ಸುಮಾರು 8 ಗುಂಟೆ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದರು. ಈ ಭೂಮಿ ಪಕ್ಕದಲ್ಲಿರುವ ಸ.ನಂ. 9 ಮತ್ತು 17ರಲ್ಲಿ ಮಹ್ಮದ್ ಹುಸೇನ್ ಎಂಬುವವರೂ ಸಹ ಎಂಟು ಗುಂಟೆ ಜಮೀನನ್ನು ಒತ್ತುವರಿ ಮಾಡಿದ್ದರು. ಗ್ರಾಮ ನಕಾಶೆ ಪ್ರಕಾರ ಸರ್ಕಾರಿ ಓಣಿ, ಕಾಲುದಾರಿ ಮತ್ತು ಬಂಡಿದಾರಿಗಳ ಉದ್ದೇಶಕ್ಕಾಗಿ ಮೀಸಲಾಗಿದೆ. ಕಾರ್ಯಾಚರಣೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳಾದ ನರಸಿಂಹಯ್ಯ, ಚೇತನ್, ಸುರೇಶ್, ನಂದಾರೆಡ್ಡಿ ಭಾಗವಹಿಸಿದ್ದರು.

ಗೌರವಧನ ಶೀಘ್ರ: ಬಿಡುಗಡೆ ಭರವಸೆ
ಕೋಲಾರ:
ರಾಜ್ಯದಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಂಥಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಾಲಯ ಮೇಲ್ವಿಚಾರಕರಿಗೆ ಬಾಕಿ ಇರುವ ಮಾಸಿಕ ಗೌರವಧನವನ್ನು ಶೀಘ್ರವೇ ಬಿಡುಗಡೆ ಮಾಡಿಸುವುದಾಗಿ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಎಂ.ಎಂ.ಬಡ್ನಿ ಭರವಸೆ ನೀಡಿದ್ದಾರೆಂದು ನರಸಾಪುರ ಗ್ರಂಥಾಲಯ ಮೇಲ್ವಿಚಾರಕ ಮುನಿ ನರಸಿಂಹ ತಿಳಿಸಿದ್ದಾರೆ.
ನರಸಾಪುರದ ಗ್ರಾಮೀಣ ಗ್ರಂಥಾಲಯಕ್ಕೆ ಇತ್ತೀಚೆಗೆ ಭೇಟಿ ನೀಡಿದ ಎಂ.ಎಂ.ಬಡ್ನಿ ಅವರ ಬಳಿ ಮಾಸಿಕ ಗೌರವ ಧನ ವಿಳಂಬದ ಬಗ್ಗೆ ಪ್ರಸ್ತಾಪಿಸಿದಾಗ ಇನ್ನು ಮುಂದೆ ಪ್ರತಿ ತಿಂಗಳು 5ನೇ ತಾರೀಕಿನ ಒಳಗೆ ಗೌರವ ಧನ ನೀಡಲು ಕ್ರಮ ಕೈಗೊಳ್ಳುವುದಾಗಿ ಹಾಗೂ ಬಾಕಿ ಹಣ ಪಾವತಿ ಮಾಡಿಸುವುದಾಗಿ ತಿಳಿಸಿದ್ದಾರೆಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದಕ್ಕೂ ಮುನ್ನ  ಗ್ರಾಂಥಾಲಯದಲ್ಲಿರುವ ಪುಸ್ತಗಳನ್ನು ವೀಕ್ಷಿಸಿದ ಅವರು, ಪುಸ್ತಗಳನ್ನು ವಿಷಯವಾರು ವಿಂಗಡಿಸಿ, ಜೋಡಣೆ ಮಾಡಿ  ಸಾರ್ವಜನಿಕರಿಗೆ ಒದಗಿಸಿ ಸಮರ್ಪಕವಾದ  ಗ್ರಂಥಾಲಯ ಸೇವೆ ನೀಡಬೇಕೆಂದು ಸೂಚಿಸಿದ್ದಾರೆ. 1994ರಿಂದ  ಇರುವ ಹಳೆ ಪುಸ್ತಕಗಳನ್ನು ಪಟ್ಟಿ ಮಾಡಿ ಪ್ರತ್ಯೇವಾಗಿ ಜೋಡಿಸುವಂತೆ ಹಾಗೂ ಹೊಸದಾಗಿ ಬಂದಿರುವ ಪುಸ್ತಗಳಗನ್ನು  ನೋಂದಣಿ ಪುಸ್ತಕದಲ್ಲಿ ದಾಖಲಿಸುವಂತೆ ಸಲಹೆ ನೀಡಿದ್ದಾರೆಂದು ಹೇಳಿದ್ದಾರೆ.
ಸಾರ್ವಜನಿಕ ಗ್ರಂಥಾಲಯ ಇಲಾಖೆಯ ವಿಶೇಷಾಕಾರಿ ಎಚ್.ಆರ್. ಚನ್ನಕೇಶವ, ಗ್ರಾಪಂ ಲೆಕ್ಕ ಸಹಾಯಕ ಕೆ. ನಾರಾಯಣಸ್ವಾಮಿ, ಗ್ರಾ.ಪಂ. ಸಿಬ್ಬಂದಿ ಪಿ. ತಿಮ್ಮರಾಯಪ್ಪ, ಕರ ವಸೂಲಿಗಾರ ಸಂತೋಷ್‌ಕುಮಾರ್ ಈ ಸಂದರ್ಭದಲ್ಲಿ ಇದ್ದರೆಂದು ವಿವರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement