ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸ್ವಚ್ಛತೆ ಕಾಪಾಡಲು ಅಡುಗೆ ಸಿಬ್ಬಂದಿಗೆ ಸಲಹೆ

Srinivasa Murthy VN
Updated On : 20 Dec 2013, 12:05 pm

ಕನ್ನಡಪ್ರಭವಾರ್ತೆ ಕೋಲಾರ ಡಿ.19
ಭಾರತದಲ್ಲಿ ಒಂದನೇ ಸ್ಥಾನ ಉಳಿಸಿಕೊಂಡಿರುವ ಕರ್ನಾಟಕದ ಅಕ್ಷರ ದಾಸೋಹ ಕಾರ್ಯಕ್ರಮ ಸಂಪೂರ್ಣ ಯಶಸ್ವಿಗೆ ಶ್ರಮಿಸುತ್ತಿರುವ ಅಡಿಗೆಯವರು ಸಬಲೀಕರಣಗೊಂಡು ಮಕ್ಕಳಿಗೆ ಉತ್ತಮ ಆಹಾರ ನೀಡುವಂತಾಗಬೇಕು, ಈ ನಿಟ್ಟಿನಲ್ಲಿ ಉತ್ತಮ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಬೇಕು ಎಂದು ತಾಲ್ಲೂಕು ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ಲತಾಪ್ರಮೀಳ ಸಲಹೆ ನೀಡಿದರು.
ನಗರದ ಕೆ.ಇ.ಬಿ.ಸಮುದಾಯ ಭವನದಲ್ಲಿ ತಾಲೂಕು ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಅಕ್ಷರ ದಾಸೋಹ ಯೋಜನೆಯ ವತಿಯಿಂದ ಅಡುಗೆ ಸಿಬ್ಬಂದಿಗೆ ಏರ್ಪಡಿಸಿದ್ದ ಒಂದು ದಿನದ ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸ್ವಚ್ಚ ಹಾಗೂ ರುಚಿಕರ ಊಟ ತಯಾರಿಸುವ ಕೌಶಲ್ಯಗಳನ್ನು ಕರಗತ ಮಾಡಿಕೊಂಡು ಸಮವಸ್ತ್ರವನ್ನು ಧರಿಸಿ ಆರೋಗ್ಯ ಸ್ವಚ್ಚತೆಯನ್ನು ಕಾಪಾಡಬೇಕು ಎಂದರು. ಅಗ್ನಿ ಸುರಕ್ಷತೆ ಹಾಗೂ ಇತರೆ ವಿಪತ್ತುಗಳ ಬಗ್ಗೆ ಶಾಲಾ ಮಕ್ಕಳು ಹಾಗೂ ಸಿಬ್ಬಂದಿಗಳಿಗೆ ಸಾಮೂಹಿಕ ಅರಿವು ಅಗತ್ಯವಿದ್ದು ಶಾಲೆಯಲ್ಲಿ ಅಗ್ನಿ ಸುರಕ್ಷತಾ ನಿರ್ವಹಣ ಸಮಿತಿ ರಚಿಸಿ ಅಗ್ನಿ ಅನಾಹುತಗಳು ಸಂಭವಿಸಿದ್ದಲ್ಲಿ ವಹಿಸಬೇಕಾದ ಮುಂಜಾಗ್ರತೆಗಳ ಬಗ್ಗೆ ಅಡುಗೆಯವರಿಗೆ ಪೂರ್ವ ತಿಳಿವಳಿಕೆ ಇರಬೇಕೆಂದು ಕೋಲಾರ ಅಗ್ನಿ ಶಾಮಕ ಠಾಣಾಧಿಕಾರಿ ಬಿ.ಎಂ.ರಾಘವೇಂದ್ರ ತಿಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜಗದೀಶ್ ಮಾತನಾಡಿ ಅಡುಗೆ ಮಾಡುವವರು ಸ್ವತ: ತಾವು ಶುಚಿತ್ವವನ್ನು ಕಾಪಾಡಿಕೊಳ್ಳಬೇಕು. ಶುಭ್ರವಾದ ಉಡುಪನ್ನು ಧರಿಸಿ, ಸಮಯ ಪಾಲನೆ ಮಾಡುವ ಜೊತೆಗೆ ಕೈಗಳನ್ನು ಸ್ವಚ್ಚವಾಗಿ ತೊಳೆದು ಮಕ್ಕಳಿಗೆ ಊಟ ಬಡಿಸುವಾಗ ಮುನ್ನೆಚ್ಚರಿಕೆ ವಹಿಸಬೇಕು.  
ಜಿಲ್ಲಾ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಕಣ್ಣಯ್ಯ ಮಾತನಾಡಿ ಮಕ್ಕಳಲ್ಲಿ ಪೌಷ್ಟಿಕಾಂಶವನ್ನು ಹೆಚ್ಚಿಸುವುದರ ಮೂಲಕ ಆರೋಗ್ಯ ವೃದ್ಧಿ ಪಡಿಸಲು ಅಡುಗೆಯವರ ಸೇವೆ ಶ್ಲಾಘನೀಯವಾಗಿದ್ದು, ಮಕ್ಕಳಲ್ಲಿ ಸಹಭೋಜನದಿಂದ, ಸಹಬಾಳ್ವೆ, ಸಹೋದರತ್ವ ಭಾವನೆಗಳನ್ನು ಮೈಗೂಡಿಸುವಲ್ಲಿ ಎಲ್ಲರ ಸಹಕಾರ ಅಗತ್ಯ ಎಂದರು.
ತಾಲೂಕು ಪಂಚಾಯತಿ ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕರಾದ ಕೆ.ಉಮಾ ಮಾತನಾಡಿ ಕ್ಷೀರಬಾಗ್ಯ, ಮದ್ಯಾಹ್ನ ಉಪಹಾರ ಯೋಜನೆ ಯಶಸ್ವಿ ಮಾಡಲು ಅಡುಗೆ ಸಿಬ್ಬಂದಿ, ಪೋಷಕರು, ಶಿಕ್ಷಕರ ಸಹಕಾರ ಮುಖ್ಯವಾಗಿದ್ದು ಇದನ್ನು ಯಶಸ್ವಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಆಗಬೇಕು ಎಂದರು. ಸತ್ಯನಾರಾಯಣಗೌಡ ಸ್ವಾಗತಿಸಿದರು. ಸುಭಾಷ್ ಸಂಸ್ಥೆಯ ಎಂ.ಕೃಷ್ಣೇಗೌಡ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement