ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕಾಂಗ್ರೆಸ್ ಸರ್ಕಾರ ಜನರಿಗಾಗಿ ಆಡಳಿತ ನೀಡುತ್ತಿಲ್ಲ

Srinivasa Murthy VN
Updated On : 22 Dec 2013, 12:20 pm

ಮಾಲೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜನತೆಗಾಗಿ ಆಡಳಿತ ನೀಡದೆ ಕೇವಲ ಲೋಕಸಭೆ ಚುನಾವಣೆಗಾಗಿ ರಾಜ್ಯಭಾರ ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ವೀರಯ್ಯ ಹೇಳಿದರು.
ಪಟ್ಟಣದ ಪದ್ಮಾವತಿ ಸಂಕೀರ್ಣದಲ್ಲಿ ತಾಲೂಕು ಬಿಜೆಪಿ ಆಯೋಜಿಸಿದ್ದ ಶಕ್ತಿ ಕೇಂದ್ರಗಳ ಪ್ರಮುಖರ ಕಾರ್ಯಗಾರರ ಸಭೆಯಲ್ಲಿ ಮಾತನಾಡಿ, ಲೋಕ ಸಭೆ ಚುನಾವಣೆಯ ದೃಷ್ಟಿಯಿಂದ ಪ್ರಾರಂಭಿಸಿರುವ ಅನ್ನ ಭಾಗ್ಯ, ಕ್ಷೀರ ಭಾಗ್ಯ ಯೋಜನೆಗಳು ಪೊರೈಸಲು ಸಾಧ್ಯವಾಗದೆ ಯೋಜನೆ ವಿಫಲವಾಗುತ್ತಿದೆ. ಒಂದು ಸಾಮುದಾಯ ಮತವನ್ನು ನಂಬಿ ಅನುಷ್ಠಾನಗೊಳಿಸಿರುವ ಶಾದಿ ಯೋಜನೆಗೆ ಈಗಾಗಲೇ ರಾಜ್ಯದಾದ್ಯಂತ ವಿರೋಧ ವ್ಯಕ್ತವಾಗುತ್ತಿದೆ ಎಂದರು. ಕಳೆದ ಅರವತ್ತು ವರ್ಷಗಳಲ್ಲಿ ರಾಜ್ಯವನ್ನು ಆಳಿದ ಸರ್ಕಾರಗಳಲ್ಲಿ ಕೋಲಾರ ಸೇರಿದಂತೆ ಬಯಲು ಸೀಮೆಗಾಗಿ ಪರಮಶಿವಯ್ಯ ವರದಿ ಜಾರಿ ತಂದಿರುವ ಏಕೈಕ ಸರ್ಕಾರ ಬಿಜೆಪಿದಾಗಿದ್ದು, ಎತ್ತಿನಹೊಳೆ ಸಹ ನಮ್ಮ ಸರ್ಕಾರದಲ್ಲಿ ಚಾಲನೆ ಗೂಂಡ ಯೋಜನೆಯಾಗಿದೆ  ಎಂದರು. ಮುಂದಿನ ಲೋಕಸಭೆ ಚುನಾವಣೆ ನಮ್ಮ ಜಿಲ್ಲೆಗೆ ಸವಾಲಾಗಿದ್ದು, ಪಕ್ಷದ ಕಾರ್ಯಕರ್ತರು ತಮ್ಮಲ್ಲಿರುವ ಭಿನ್ನಾಭಿಪ್ರಾಯವನ್ನು ಮರೆತು ಪಕ್ಷ ಸೂಚಿಸುವ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದರು. ಮಾಜಿ ಶಾಸಕ ಎಂ. ನಾರಾಯಣಸ್ವಾಮಿ ಮಾತನಾಡಿ, ಕಾಂಗ್ರೆಸ್ ಆಡಳಿತದ ಇತಿಹಾಸದಲ್ಲೇ ಇದೇ ಪ್ರಥಮ ಬಾರಿಗೆ ಇಂದಿನ ಸರ್ಕಾರದ 14 ಪ್ರಧಾನ ರಾಜ್ಯ ಕಾರ್ಯದರ್ಶಿಗಳು ನೋಟಿಸ್ ಪಡೆದಿದ್ದು, ಜನವಿರೋಧಿ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ ಎಂದರು. ಮಾಜಿ ಶಾಸಕ ಸಂಪಂಗಿ, ಜಿಲ್ಲಾ ಬಿಜಿಪಿ ಉಸ್ತುವಾರಿ ಶಿವಕುಮಾರ್, ಮೋಹನ್, ಜಿಲ್ಲಾಧ್ಯಕ್ಷ ಕೃಷ್ಣಾರೆಡ್ಡಿ ಮಾತನಾಡಿದರು.ಬಿಜೆಪಿ ಮುಖಂಡರಾದ ಬೀರಪ್ಪ, ರಾಮೇಗೌಡ,ವೇಮನ, ಹನುಮಂತರೆಡ್ಡಿ, ಲಿಂಗೇಶ್ವರಯ್ಯ, ಬಿ.ಆರ್. ವೆಂಕಟೇಶ್,ಬಿಜೆಪಿ ತಾಲೂಕು ಅಧ್ಯಕ್ಷ ಸೂ. ವೆಂಕಟೇಶ್,ನಾರಾಯಣಸ್ವಾಮಿ, ಶೇಷ್ ಗಿರಿ ಸೇರಿದಂತೆ ನೂರಾರು ಕಾರ್ಯಕರ್ತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement