ಬೈಕ್ ಕಳವು
ಕೆಜಿಎಫ್: ಅಂಗಡಿ ಮುಂಭಾಗ ನಿಲ್ಲಿಸಿದ್ದ ಬೈಕನ್ನು ಕಳ್ಳರು ಕಳವು ಮಾಡಿರುವ ಘಟನೆ ಬೇತಮಂಗಲ ವ್ಯಾಪ್ತಿಯಲ್ಲಿ ನಡೆದಿದೆ. ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿಹಳ್ಳಿ ಗ್ರಾಮದ ನಿವಾಸಿ ಶೇಕ್ ಅಕ್ರಮ್ ಎಂಬವರು ಗುಟ್ಟಹಳ್ಳಿಯಲ್ಲಿರುವ ತಮ್ಮ ವೆಲ್ಡಿಂಗ್ ಅಂಗಡಿ ಮುಂದೆ ಸುಮಾರು 40 ಸಾವಿರ ಬೆಲೆ ಬಾಳುವ ಹೀರೋ ಹೊಂಡಾ ಬೈಕನ್ನು ನಿಲ್ಲಿಸಿದ್ದು ಅದು ನಾಪತ್ತೆಯಾಗಿದೆ. ಬೇತಮಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಟೈಲರಿಂಗ್ ತರಬೇತಿ ಮುಕ್ತಾಯ
ಟೇಕಲ್: ನೆಹರು ಯುವ ಕೇಂದ್ರ ಕೋಲಾರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ತೊರಲಕ್ಕಿ ಆಶ್ರಯದಲ್ಲಿ ಪದೆಓಬಟ್ಟಿ ಗ್ರಾಮದಲ್ಲಿ ಎರಡು ತಿಂಗಳ ಕಾಲ ಟೈಲರಿಂಗ್ ತರಬೇತಿ ಮುಕ್ತಾಯ ಸಮಾರಂಭ ನಡೆಯಿತು. ಗ್ರಾಪಂ ಸದಸ್ಯ ಸತೀಶ್, ಶಾರದಮ್ಮ, ಎಂ. ರಾಜಣ್ಣ ಭಾಗವಹಿಸಿದ್ದು ಎರಡು ತಿಂಗಳ ತರಬೇತಿ ಅವಧಿಯಲ್ಲಿ ಹನ್ನೆರಡು ಮಹಿಳಾ ಸದಸ್ಯರಿಗೆ ಅರ್ಹತಾ ಪತ್ರಗಳನ್ನು ನೀಡಿದರು.
ಮತದಾರರ ಪಟ್ಟಿಗೆ ಸೇರ್ಪಡೆ
2014ರ ಜೂನ್ನಲ್ಲಿ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ನಡೆಯಲ್ಲಿದ್ದು, ಚುನಾವಣಾ ಕಣದಲ್ಲಿರುವ ವಿದಾನ ಸಭಾ ಸದಸ್ಯರಾದ ಡಾ. ಎ.ಹೆಚ್. ಶಿವಯೋಗಸ್ವಾವು ಯವರು ಪ್ರವಾಸ ಕೈಗೊಂಡಿದ್ದು ಶಿಡ್ಲಘಟ್ಟದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಪ್ರತಿ ಚುನಾವಣೆಯಲ್ಲೂ ಮತದಾರರ ಪಟ್ಟಿ ಪರಿಷ್ಕತಗೊಳ್ಳುತ್ತಿದು,್ದ ಪ್ರತಿ ಬಾರಿಯೂ ಪದವೀದರರು ಅರ್ಜಿಗಳನ್ನು ಹಾಕಬೇಕಿತ್ತು. ಆದರೆ, ಈ ಬಾರಿ 2008ರ ಪರಿಷ್ಕತ ಮತದಾರರ ಪಟ್ಟಿ ಮುಂದುವರಿಯಲ್ಲಿದ್ದು ಚುನಾವಣಾ ಪಟ್ಟಿಯಲ್ಲಿರುವವರು ಬಿಟ್ಟು ಹೊಸದಾಗಿ ಸೇರಬಯಸುವವರು ಮಾತ್ರ ಅರ್ಜಿಗಳನ್ನು ಹಾಕಬೇಕೆಂದು ತಿಳಿಸಿದರು.
2008ರ ಪರಿಷ್ಕೃತ ಚುನಾವಣಾ ಪಟ್ಟಿಯಲ್ಲಿ ಚಿಕ್ಕಬಳ್ಳಾಪುರದ 6 ತಾಲ್ಲೂಕುಗಳಿಂದ 61,626 ಮತದಾರರರಿದ್ದು, ನ. 15, 2013ಕ್ಕೆ 4429 ಜನರು ಸೇರ್ಪಡೆಗೆ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಶಿಡ್ಲಘಟ್ಟದಿಂದ 473 ಮತದಾರರು ಪರಿಷ್ಕೃತ ಚುನಾವಣಾ ಪಟ್ಟಿಯಲ್ಲಿದ್ದು 549 ಪದವೀಧರರು ಸೇರ್ಪಡೆಗೆ ಅರ್ಜಿಗಳನ್ನು ಸಲ್ಲಿಸಿದ್ದಾರೆ.
2010ಕ್ಕೆ ಪದವಿ ಮುಗಿಸಿದವರು 3 ವರ್ಷದ ನಂತರ ಮತದಾರರ ಪಟ್ಟಿಗೆ ಹೆಸರು ಸೇರಿಸಬಹುದು. ಜನವರಿ ಮೊದಲ ವಾರದಲ್ಲಿ ಮತದಾರರ ಪಟ್ಟಿ ಬಿಡುಗಡೆಯಾಗಲಿದ್ದು ನಂತರ ಸೇರ್ಪಡೆಗೆ ಅರ್ಜಿ ಹಾಕಬಹುದೆಂದು ತಿಳಿಸಿದರು. ಸರ್ಕಾರ ಆಲಸ್ಯ ಮಾಡುತ್ತಿದ್ದು, ಖಾಸಗಿ ಅನುದಾನದಲ್ಲಿರುವ 1600 ಶಿಕ್ಷಕರಿಗೂ ಸಹ ಸೇವಾ ಭದ್ರತೆಯನ್ನು ಒದಗಿಸಬೇಕಾಗಿ ಒತ್ತಾಯಿಸಿದರು.
'ಶಿಕ್ಷಕರನ್ನು ಶಿಕ್ಷಣ ನೀಡಲು ಬಳಸಿ'
ಮಾಲೂರು: ರಾಜ್ಯ ಸರ್ಕಾರ ಸರ್ಕಾರಿ ಶಾಲೆ ಶಿಕ್ಷಕರನ್ನು ಅನ್ನ-ಕ್ಷೀರ-ಜನಗಣತಿ ಸೇರಿದಂತೆ ವಿವಿಧ ಭಾಗ್ಯಗಳಿಗೆ ನಿಯೋಜಿಸುವುದರಿಂದ ವಿಮುಕ್ತರಾಗಿ ಮಾಡಿ ಮಕ್ಕಳಿಗೆ ಶಿಕ್ಷಣ ನೀಡಲು ಮಾತ್ರ ಮೀಸಲಿಡಬೇಕು ಎಂದು ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಅಗ್ರಹಿಸಿದರು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿದ ನಂತರ ಪತ್ರಕರ್ತರೊಡನೆ ಮಾತನಾಡಿ, ಸರ್ಕಾರ ಅನುಷ್ಠಾನಗೊಳಿಸುವ ಯೋಜನೆ ಹಾಗೂ ಗಣತಿಗಳಿಗೆ ಶಿಕ್ಷಕರನ್ನೇ ಬಳಸಿಕೊಳ್ಳುತ್ತಿದ್ದು, ಗುಣಮಟ್ಟ ಶಿಕ್ಷಣ ನೀಡಲು ಅಡ್ಡಿಯಾಗುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತಮ್ಮ ಯೋಜನೆಗಳ ಅನುಷ್ಠಾನಕ್ಕೆ ಬೇರೆ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ ಎಂದರು. ಎಂಎಲ್ಸಿ ಡಿ.ಎಸ್. ವೀರಯ್ಯ, ಬಿಜೆಪಿ ಮುಖಂಡ ರಾಮೇಗೌಡ, ವೇಮನ, ತಬಲ ನಾರಾಯಣಪ್ಪ,ಪ್ರಾಂಶುಪಾಲ ರಾಮಕೃಷ್ಣ, ಬಿಇಒ ಸುಬ್ರಮಣಿ, ಕೆಂಪಣ್ಣ ಇದ್ದರು.
ವಿದ್ಯಾರ್ಥಿ ಕಾಣೆ
ಚಿಂತಾಮಣಿ: ಎಸ್ಎಸ್ಎಲ್ಸಿ ವಿದ್ಯಾರ್ಥಿ ಅನುಮಾನಾಸ್ಪದವಾಗಿ ಕಾಣೆಯಾಗಿರುವುದಾಗಿ ಪೋಷಕರು ಪೊಲೀಸರಿಗೆ ದೂರು ನೀಡಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಚಿನ್ನಸಂದ್ರ ಗ್ರಾಮದಿಂದ ವರದಿಯಾಗಿದೆ. ತಾಲೂಕಿನ ಚಿನ್ನಸಂದ್ರ ಗ್ರಾಮದ ಮೌಲಾ ಎಂಬವರ ಮಗನಾದ ಬಾಬಾಜಾನ್ ಎಂಬಾತ ಇದೇ 10 ರಂದು ಗ್ರಾಮದಿಂದ ನಗರದ ಮಹಾತ್ಮ ಗಾಂಧಿ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ಸಿ ವಿದ್ಯಾಭ್ಯಾಸವನ್ನು ಮಾಡುತ್ತಿರುತ್ತಾನೆ. ಬೆಳಿಗ್ಗೆ ಶಾಲೆಗೆಂದು ಹೋದವನು ಮರಳಿ ಗ್ರಾಮಕ್ಕೆ ಹಿಂತಿರುಗಿ ಬರಲಿಲ್ಲ. ನಾಪತ್ತೆಯಾಗಿರುವ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಭಾನುವಾರ ತಂದೆ ಮೌಲಾ ದೂರು ನೀಡಿದ್ದಾರೆ. ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕನ್ನಡ ಭಾಷೆಗೆ ದುಸ್ಥಿತಿ
ಬಾಗೇಪಲ್ಲಿ: ತಾಲೂಕು ಆಡಳಿತ ಕೇಂದ್ರ ಬಿಂದುವಾಗಿರುವಂತಹ ತಹಸೀಲ್ದಾರ್ ಕಚೇರಿ ಕನ್ನಡದ ಕಗ್ಗೊಲೆ ಮಾಡುತ್ತಿದೆ. ಡಿ.4 ರಂದು ತಹಸೀಲ್ದಾರ್ ಕಚೇರಿಯಿಂದ ಹೊರಡಿಸಿದ ಜನಸ್ಪಂದನಾ ಕಾರ್ಯಕ್ರಮದ ಪತ್ರದಲ್ಲಿ ತಹಸೀಲ್ದಾರ್ ಅವರ ಬದಲಿಗೆ ತಹಶೀಲ್ದಾರವರ, ಮಾನ್ಯರೆ ಬದಲಿಗೆ ಮಾನ್ಯಾರೇ, ಅಧ್ಯಕ್ಷತೆಯಲ್ಲಿ ಬದಲಾಗಿ ಅದಧ್ಯಕ್ಷತೆಯಲ್ಲಿ, ದಿನಾಂಕದಂದು ಬದಲಾಗಿ ದಿನಾಂಕದೊಂದು, ಮಾಹಿತಿಗಳೊಂದಿಗೆ ಬದಲಾಗಿ ಮಾಹಿತಿಗಳೂಂದಿಗೆ ಎಂದೆಲ್ಲಾ ಟೈಪ್ ಮಾಡಿರುವುದುಕನ್ನಡ ಪ್ರೇಮಿಗಳ ಕೆಂಗೆಣ್ಣಿಗೆ ಗುರಿಯಾಗಿದೆ.