ಮುಖ್ಯಮಂತ್ರಿಗಳ ಆಗಮನಕ್ಕೆ ಭರದ ಸಿದ್ಧತೆ
ಗೌರಿಬಿದನೂರು: ಜ.31ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೌರಿಬಿದನೂರಿಗೆ ಆಗಮಿಸಲಿದ್ದು, ಅಂದು ತಾಲೂಕಿನ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನಡೆಯಲಿದೆ.
ಈ ಸಂಬಂದ ಎಲ್ಲಾ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕೆಂದು ವಿಧಾನಸಭಾ ಉಪಾಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ ಹಾಗೂ ಜಿಲ್ಲಾಧಿಕಾರಿ ಡಾ. ವಿಶಾಲ್ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸೂಚಿಸಿದರು.
ಪಟ್ಟಣದ ತಾಪಂ ಆವರಣದಲ್ಲಿರುವ ಸಾಮರ್ಥ್ಯ ಸೌಧದಲ್ಲಿ ಕರೆದಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ನಡೆದಿರುವ ಕಾಮಗಾರಿಗಳ ವಿವರ ಪಡೆದು ನಿಗಧಿತ ಅವಧಿಯೊಳಗೆ ಕಾಮಗಾರಿಕ ಪೂರ್ಣಗೊಳ್ಳಲು ಬೇಕಾದ ಸಹಾಯ ಸಹಕಾರ ಪಡೆಯಬೇಕು ಎಂದರು.
ಕುಡಮಲಕುಂಟೆ ಕೈಗಾರಿಕಾ ವಸಾಹತಿನ ಕೆಐಡಿಬಿಯಿಂದ ಸುಮಾರು 3ಕೋಟಿ ಹಣ ನೀಡಿ 8 ಎಕರೆ ಜಮೀನನ್ನು ಪಡೆದು ಜಿಟಿಟಿಸಿ ಸರ್ಕಾರಿ ತರಬೇತಿ ಕೇಂದ್ರ ಸ್ಥಾಪಿಸಬೇಕು, ಚರಂಡಿ ವ್ಯವಸ್ಥೆ, ಬ್ಯಾಸ್ಕೆಟ್‌ಬಾಲ್, ವಾಲಿಬಾಲ್ ಕೋರ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಈಗಾಗಲೇ ಸುಮಾರು 2.5ಕೋಟಿ ವೆಚ್ಚದಲ್ಲಿ ಡಾ.ಎಚ್. ನರಸಿಂಹಯ್ಯ ಕಲಾಮಂದಿರ ನಿರ್ಮಿಸಲಾಗಿದ್ದು, ಇನ್ನೂ 3 ಕೋಟಿ ರು.ಗಳ ಅವಶ್ಯಕತೆ ಇರುವುದರಿಂದ ಹುಡ್ಕೋದಿಂದ 2 ಕೋಟಿ ಮತ್ತು ಮುಖ್ಯಮಂತ್ರಿಗಳ ವಿಶೇಷ ಅನುಧಾನದಿಂದ 1ಕೋಟಿ ಪಡೆದು ಕಲಾಭವನವನ್ನು ಪೂರ್ಣಗೊಳಿಸುವುದು ಎಂದು ತಿಳಿಸಿದರು.
ನಿಗಧಿತ ಅವಧಿಯೊಳಗೆ ಅಧಿಕಾರಿಗಳು ಹೆಚ್ಚಿನ ಆಸಕ್ತಿಯಿಂದ ಎಲ್ಲಾ ಕಾಮಗಾರಿಗಳನ್ನುಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಹಾಗೂ ಭೂಸೇನಾ ನಿಗಮದಿಂದ ಪೂರ್ಣಗೊಳಬೇಕೆಂದು ತಿಳಿಸಿ ಒಂದು ವಾರದೊಳಗೆ ಮತ್ತೊಂದು ಸಭೆ ಕರೆಯಲಾಗುವುದು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ತಿಳಿಸಿದರು.