ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಚಿಕ್ಕಪ್ಪನ ರುಂಡ ಕತ್ತರಿಸಿ ಶರಣಾದ ಯುವಕ

Srinivasa Murthy VN
Updated On : 4 Jul 2013, 11:42 am

ಕ.ಪ್ರ. ವಾರ್ತೆ ಕೋಲಾರ ಜು.4
ತನ್ನ ತಾಯಿ ಜತೆ ಅಸಭ್ಯವಾಗಿ ವರ್ತಿಸುತ್ತಿದ್ದ
ಸ್ವಂತ ಚಿಕ್ಕಪ್ಪನ ಶಿರಚ್ಛೇದನ ಮಾಡಿರುವ ಘಟನೆ ತಾಲೂಕಿನ ಅಣ್ಣಿಹಳ್ಳಿಯಲ್ಲಿ ನಡೆದಿದೆ.
ಚಿಕ್ಕಪ್ಪನನ್ನು ಭೀಕರವಾಗಿ ಕೊಲೆಯಾಗಿರುವ ವ್ಯಕ್ತಿಯನ್ನು ಅಣ್ಣಿಹಳ್ಳಿ ನಿವಾಸಿ ಗೋವಿಂದ ಎಂದು ಗುರುತಿಸಲಾಗಿದೆ. ಆರೋಪಿ ಶೇಖರನನ್ನು ಗ್ರಾಮಾಂತರ ಪೊಲೀಸರು ಬೆಂಗಳೂರಿನ ಪರಪ್ಪನ ಆಗ್ರಹಾರ ಜೈಲಿನಲ್ಲಿ ವಶಕ್ಕೆ ತೆಗೆದುಕೊಂಡಿದ್ದಾರೆ.
ಘಟನೆ ವಿವರ: ಕೋಲಾರ ತಾಲೂಕಿನ ಅಣ್ಣಿಹಳ್ಳಿಯ ಶ್ರೀನಿವಾಸ್ ಹಾಗೂ ಕೊಲೆಯಾಗಿರುವ ಗೋವಿಂದ ಇಬ್ಬರು ಒಡಹುಟ್ಟಿದವರು. ಕೆಲವು ವರ್ಷಗಳ ಹಿಂದೆ ಶ್ರೀನಿವಾಸ್ ಪತ್ನಿ ಹಾಗೂ ಮಗ ಶೇಖರ್ ನೊಂದಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರಿದ ಹೊಸಕೋಟೆ ತಾಲೂಕಿನ ಬೂದಿಗೆರೆಗೆ ಬಂದು ನೆಲಸಿದ್ದಾರೆ.
ಅಣ್ಣಿಹಳ್ಳಿಯಲ್ಲಿ ಇದ್ದಾಗಲೇ ಅತ್ತಿಗೆ ಜತೆ ಗೋವಿಂದ ಅಸಭ್ಯವಾಗಿ ವರ್ತಿಸುತ್ತಿದ್ದನಲ್ಲದೆ, ಊರು ಬಿಟ್ಟು ಹೋದ ಮೇಲೂ ತನ್ನ ಕೆಟ್ಟ ಚಾಳಿ ಮುಂದುವರೆಸಿದ್ದಾನೆ.
ಇದರಿಂದ ಬೇಸತ್ತ ಶೇಖರ ಚಿಕ್ಕಪ್ಪನಿಗೆ ಅನೇಕ ಸಾರಿ ಬುದ್ದಿ ಹೇಳಿದ್ದರೂ ಕಿವಿ ಮೇಲೆ ಹಾಕಿಕೊಂಡಿಲ್ಲ. ಈ ನಿಟ್ಟಿನಲ್ಲಿ ಕುಪಿತನಾಗಿ ಬುಧವಾರ ಬೂದಿಗೆರೆಯಿಂದ ಕೋಲಾರ ತಾಲೂಕಿನ ರೋಜನಹಳ್ಳಿಗೆ ಬಂದು ಸಂತೆಯಲ್ಲಿ ಮಾಂಸ ಹಾಗೂ ಮದ್ಯ ಖರೀದಿ ಮಾಡಿ, ಅಣ್ಣಿಹಳ್ಳಿಯ ಸಮೀಪದ ಕೊಂಡಸಂದ್ರದ ಮಾವಿನ ತೋಪಿಗೆ ಚಿಕ್ಕಪ್ಪನ್ನು ಕರೆಸಿಕೊಂಡು ಕಂಠಪೂರ್ತಿ ಮಾಂಸಾಹಾರ ತಿನ್ನಿಸಿ, ಮದ್ಯ ಕುಡಿಸಿ ಮತ್ತಿನಲ್ಲಿದ್ದ ಚಿಕ್ಕಪ್ಪನ ತಲೆಯನ್ನು ಮುಚ್ಚು ಮತ್ತು ಚಾಕುವಿನಿಂದ ಕತ್ತರಿಸಿ ತಲೆ ಸಮೇತ ಪಾರಾರಿಯಾಗಿದ್ದನು.
ಪರಪ್ಪನ ಆಗ್ರಹಾರ ಜೈಲಿನಲ್ಲಿ ಶರಣು: ಚಿಕ್ಕಪ್ಪನನ್ನು ಕೊಲೆ ಮಾಡಿ ತಲೆ ಸಮೇತ ಕಾರಿನಲ್ಲಿ ಬೆಂಗಳೂರಿನ ಪರಪ್ಪನ ಆಗ್ರಹಾರ ಜೈಲಿಗೆ ಬಂದು ಅಲ್ಲಿನ ಅಧಿಕಾರಿಗೆ ಶರಣಾಗಿದ್ದನು. ಬುಧವಾರ ರಾತ್ರಿ 1.30ರಲ್ಲಿ ಗೋವಿಂದನ ಕೊಲೆಗೆ ಸಂಬಂಧಿಸಿದಂತೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿತ್ತು.
ಈ ನಡುವೆ ಪರಪ್ಪನ ಆಗ್ರಹಾರ ಜೈಲಿನ ಅಧಿಕಾರಿಗಳು ನೀಡಿದ ಮಾಹಿತಿ ಮೇರೆಗೆ ಗ್ರಾಮಾಂತರ ಪೊಲೀಸರು ಪರಪ್ಪನ ಆಗ್ರಹಾರಕ್ಕೆ ತೆರಳಿ ಆರೋಪಿಯನ್ನು ಹಾಗೂ ಕೊಲೆಯಾದ ಗೋವಿಂದಪ್ಪನ ತಲೆಯನ್ನು ವಶಕ್ಕೆ ಪಡಿಸಿಕೊಂಡು ಆರೋಪಿಯನ್ನು ಅಲ್ಲಿಂದ ಕೋಲಾರಕ್ಕೆ ಕರೆತಂದು ವಿಚಾರಣೆ ಮಾಡಿದಾಗ ತನ್ನ ಚಿಕ್ಕಪ್ಪನ ಅಸಭ್ಯ ವರ್ತನೆ ನೋಡಿ ಸಹಿಸಲಾಗದೆ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಶೇಖರ್‌ಗೆ ಸಹಾಯ ಮಾಡಿದ ಆರೋಪದ ಮೇಲೆ ಸ್ನೇಹಿತ ಸಂತೋಷ್ ಎಂಬುವನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement