ಜಯಕರ್ನಾಟಕ ಸಂಘದ ಪದಾಧಿಕಾರಿಗಳ ಆಯ್ಕೆ
ಕೆಜಿಎಫ್: ಕೆಜಿಎಫ್‌ನಲ್ಲಿ ಕನ್ನಡ ಅಭಿವೃದ್ಧಿಗೆ ಎಲ್ಲಾ ರೀತಿಯ ಸಂಘಟನೆಕೈಗೊಳ್ಳಬೇಕು ಎಂದು ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಕೆ.ಆರ್.ತ್ಯಾಗರಾಜ್ ಕಿವಿಮಾತು ಹೇಳಿದರು.
ಪಟ್ಟಣದ ಕನ್ನಡ ಸಂಘದಲ್ಲಿ ಆಯೋಜಿಸಿದ್ದ ಕೆಜಿಎಫ್ ವಿಧಾನಸಭಾ ಕ್ಷೇತ್ರ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಅವರು ಮಾತನಾಡಿದರು.
ಇದೆ ಸಂದರ್ಭದಲ್ಲಿ ಕೆಜಿಎಫ್ ವಿಧಾನಸಭಾ ಕ್ಷೇತ್ರ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಪಟ್ಟಿ ಬಿಡುಗಡೆ ಮಾಡಲಾಯಿತು.
ಪದಾಧಿಕಾರಿಗಳು: ಗೌರವಾಧ್ಯಕ್ಷ ಕೆ.ಶಂಷುದ್ದೀನ್, ಅಧ್ಯಕ್ಷ ಎ.ಚಂದರ್, ಕಾರ್ಯಾಧ್ಯಕ್ಷ ಮಕ್ಸೂದ್ ಉಮ್ರಾನ್, ಉಪಾಧ್ಯಕ್ಷರಾಗಿ ಎನ್.ಬಾಬು, ಸೈಯದ್ ಅಸ್ಲಾಂ, ಜಿ.ರವೀಂದ್ರಕುಮಾರ್, ಎಸ್.ಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಶಶಿಧರ್, ಕಾರ್ಯದರ್ಶಿ ಟಿ.ಎಂ.ಆನಂದಾಚಾರಿ, ಜಂಟಿ ಕಾರ್ಯದರ್ಶಿ ಡಿ.ಜಸ್ವಂತ್, ಖಜಾಂಚಿ ನಜೀರ್ ಅಹಮದ್, ಸಂಘಟನಾ ಕಾರ್ಯದರ್ಶಿಗಳಾಗಿ ಟಿ.ವಿ.ವೆಂಕಟೇಶ್, ಇಮ್ರಾನ್‌ಪಾಷಾ, ಆರ್.ಶ್ರೀನಿವಾಸ್‌ರೆಡ್ಡಿ, ಅಬ್ದುಲ್‌ಶಫಿ, ಕಾನೂನು ಸಲಹೆಗಾರ ಎನ್.ಮನೋಹರನ್ ಮತ್ತು ಸಲಹೆಗಾರ ಸೈಯದ್ ಅಪ್ಸರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಘಟಕದ ಉಪಾಧ್ಯಕ್ಷ ಆಂಜಿನಪ್ಪ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಿ.ವಿ.ಶಿವಕುಮಾರ್, ಹಾಗೂ ಗಾಂಧಿನಗರದ ರಾಜಣ್ಣ, ಜಿ.ಸುರೇಶ್‌ಬಾಬು, ಕೆ.ಎಂ.ಗೋವಿಂದರಾಜು ಮತ್ತಿತರರು ಹಾಜರಿದ್ದರು.
ವರದಕ್ಷಿಣೆ ಕಿರುಕುಳ: ಗೃಹಿಣಿ ಆತ್ಮಹತ್ಯೆ
ಗೌರಿಬಿದನೂರು: ವರದಕ್ಷಿಣೆ ಕಿರುಕುಳ ತಾಳಲಾರದೆ ಗೃಹಿಣಿಯೊಬ್ಬರು ಮನೆಯಲ್ಲಿ ನೇಣು ಹಾಕಿಕೊಂಡಿರುವ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಡಿ.ಪಾಳ್ಯ ಹೋಬಳಿ ನಾಮಗೊಂಡ್ಲು ಗ್ರಾಮದಲ್ಲಿ ಸಂಭವಿಸಿದೆ.
ಸೌಮ್ಯ(23) ಆತ್ಮಹತ್ಯೆಗೆ ಶರಣಾದವರು. ಬಾಗೇಪಲ್ಲಿ ತಾಲೂಕು ಜೂಲಪಬಾಳ್ಯ ಗ್ರಾಮದ ಸೌಮ್ಯ ಮತ್ತು ನಾಮಗೊಂಡ್ಲು ಗ್ರಾಮದ ರಾಜೇಂದ್ರ ಪ್ರಸಾದ್‌ಗೆ ಎರಡು ವರ್ಷದ ಹಿಂದೆ ವಿವಾಹವಾಗಿದ್ದು, ಇವರಿಗೆ ನಿಶ್ಚಿತಾ ಎಂಬ ಒಂದು ವರ್ಷ ಮೂರು ತಿಂಗಳ ಒಂದು ಹೆಣ್ಣು ಮಗುವಿದೆ. ಮದುವೆ ಸಮಯದಲ್ಲಿ ರಾಜೇಂದ್ರ ಪ್ರಸಾದ್‌ಗೆ ನಗನಾಣ್ಯ ನೀಡಲಾಗಿತ್ತು. ಆದರೂ, ಪದೇ ಪದೇ ತವರಿನಿಂದ ಹಣ ತರಬೇಕೆಂದು ಪತ್ನಿ ಸೌಮ್ಯರನ್ನು ಪೀಡಿಸುತ್ತಿದ್ದ ಎನ್ನಲಾಗಿದೆ. ಇದೇ ವಿಷಯವಾಗಿ ಪತಿ ಪತ್ನಿ ನಡುವೆ ಜಗಳವಾಗಿದ್ದು, ಜಗಳದಿಂದ ಜಿಗುಪ್ಸೆಗೊಂಡ ಸೌಮ್ಯ ಈ ಕೃತ್ಯವೆಸಗಿಕೊಂಡಿದ್ದಾರೆ ಎನ್ನಲಾಗಿದೆ.
ಮೃತಳ ತಂದೆ ನಾಗಭೂಷಣ ಮಂಚೇನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿ ರಾಜೇಂದ್ರ ಪ್ರಸಾದ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.