ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬಾವಿಗೆ ಬಿದ್ದ ಹಸು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

Srinivasa Murthy VN
Updated On : 4 Jul 2013, 11:42 am

ಕ.ಪ್ರ. ವಾರ್ತೆ ಚಿಂತಾಮಣಿ ಜು.4
ರೈತನಿಗೆ ಸೇರಿದ ಸೀಮೆ ಹಸುವೊಂದು ಹುಲ್ಲು ಮೇಯುತ್ತಾ ಆಕಸ್ಮಿಕವಾಗಿ 50 ಅಡಿ ಆಳವಿರುವ ಬಾವಿಗೆ ಬಿದ್ದ ಹಸುವನ್ನು ಅಗ್ನಿಶಾಮಕ ಸಿಬ್ಬಂದಿ ಸತತ 3 ಗಂಟೆಗಳ ಕಾಲ ಶ್ರಮವಹಿಸಿ ಜೀವಂತ ಸುರಕ್ಷಿತವಾಗಿ ಪ್ರಾಣಪಾಯವಿಲ್ಲದೆ ಮೇಲಕ್ಕೆತ್ತಿ ರಕ್ಷಿಸಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಮಡಬಹಳ್ಳಿ ಗ್ರಾಮದಲ್ಲಿ ಇಂದು ನಡೆದಿದೆ.
ತಾಲೂಕಿನ ತಳಗವಾರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಡಬಹಳ್ಳಿ ಗ್ರಾಮದ ರೈತ ರವಿ ಎಂಬುವರಿಗೆ ಸೇರಿದ ಸುಮಾರು 10 ಅಡಿ ವೃತ್ತದ 50 ಅಡಿ ಆಳವಿರುವ ಬಾವಿಗೆ ಸೀಮೆ ಹಸು ಹುಲ್ಲು ಮೇಯುತ್ತಾ ಆಕಸ್ಮಿಕವಾಗಿ ಕಾಲು ಜಾರಿ ಬಾವಿಯಲ್ಲಿ ಬಿದ್ದು ಸಾವು ನೋವಿನ ಜೊತೆ ಹೋರಾಟ ನಡೆಸುತ್ತಿದ್ದ ಹಸುವನ್ನು ರಕ್ಷಿಸಲು ಗ್ರಾಮಸ್ಥರು ಹರಸಾಹಸಪಟ್ಟರು ಪ್ರಯೋಜನವಾಗಲಿಲ್ಲ. ಕೂಡಲೇ ಚಿಂತಾಮಣಿ ಅಗ್ನಿ ಶಾಮಕ ಠಾಣೆಗೆ ಕರೆ ಮಾಡಿದಾಗ ಅಗ್ನಿಶಾಮಕ ಅಧಿಕಾರಿ ಸಿ.ಎಂ.ನಾಗೇಶ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರು.
ವಿಷಯ ತಿಳಿದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಪ್ರವೃತ್ತರಾಗಿ ಬಾವಿ ಒಳಭಾಗದಲ್ಲಿ ಕಸ ಕಡ್ಡಿ ಇತರೆ ಹಸುವಿನ ಗಂಜಲವಿದ್ದು, ಇದರಲ್ಲಿ ಹೂತ ಜೀವಂತ ರಕ್ಷಿಸಿರುವುದು ನೋಡಿ ತಿಳಿದು ಹಸುವಿನ ತಳಕ್ಕೆ ಹೋಸ್ ಸಹಾಯದಿಂದ ಬಂಧಿಸಿ ಅದನ್ನು ಮರದ ತುಂಡಿಗೆ ಕಟ್ಟಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಗ್ರಾಮಸ್ಥರ ಸಹಾಯದಿಂದ 3 ಗಂಟೆಗಳ ಕಾಲ ಶ್ರಮಿಸಿ ಸೀಮೆ ಹಸುವನ್ನು ಯಾವುದೇ ಪ್ರಾಣಾಪಾಯವಿಲ್ಲದೆ ಹಸು  ಮೇಲಕ್ಕೆತ್ತಿ ರಕ್ಷಿಸಿ ಮಾಲೀಕರಿಗೆ ಹಸ್ತಾಂತರಿಸಿದರು. ಸುಮಾರು 50 ಸಾವಿರ ಮೌಲ್ಯದ ಹಸುವನ್ನು ರೈತ ಹೈನುಗಾರಿಕೆ ನಂಬಿ ಜೀವನ ನಡೆಸುತ್ತಿದ್ದ ಇವರ ಸಹಾಯಕ್ಕೆ ಕೂಡಲೇ ಪಶು ವೈದ್ಯರು ಹಸುವಿನ ಯೋಗ ಕ್ಷೇಮಾಚಾರ ಪರೀಕ್ಷಿಸಿ ಅದಕ್ಕೆ ಬೇಕಾಗಿರುವ ಉಪಚಾರ ಮಾಡಿದ ಪರಿಣಾಮ ಹಸು ಆರೋಗ್ಯದಿಂದ ಪಶು ಆಹಾರ ಸೇವಿಸಿ ಸುಗುಮವಾಗಿ ಸಂಚರಿಸುತ್ತಿದೆ. ಸಾರ್ವಜನಿಕರ ಆಸ್ತಿ-ಪಾಸ್ತಿ ಕಾಪಾಡಲು ಮುಂದಾದ ಅಗ್ನಿಶಾಮಕ ದಳದ ಸಿಬ್ಬಂದಿ ಸೋಮಶೇಖರ್, ರಾಮಚಂದ್ರಯ್ಯ,ವಿಜಯ್‌ಕುಮಾರ್, ಲೋಕೇಶ್, ವೆಂಕಟಶಿವಾರೆಡ್ಡಿ ಬಗ್ಗೆ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement