ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಚರಂಡಿಗಳ ಸ್ವಚ್ಛತೆಗೆ ಆಗ್ರಹ

Srinivasa Murthy VN
Updated On : 6 Jul 2013, 12:28 pm

ಕ.ಪ್ರ. ವಾರ್ತೆ ಕೋಲಾರ ಜು.5
ತಾಲೂಕಿನ ಮಾರ್ಜೇನಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ  ಗ್ರಾಮದಲ್ಲಿ ಚರಂಡಿಗಳು ಸ್ವಚ್ಛತೆ ಕಾಣದೆ ಊರಿನಲ್ಲಿ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ ಎಂದು ಡಾ.ಬಿ.ಆರ್. ಅಂಬೇಡ್ಕರ್ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಆರ್. ಮುನಿಸ್ವಾಮಿ ಆರೋಪಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಗ್ರಾಮದ ಎಲ್ಲಾ ಚರಂಡಿಗಳು ಸ್ವಚ್ಛತೆ ಕಾಣದೆ ಕಸಕಡ್ಡಿಗಳಿಂದ ತುಂಬಿಹೋಗಿವೆ. ಮಳೆ ಬಂದರಂತೂ ಚರಂಡಿಗಳ ನೀರು ಮನೆಯೊಳಗೆ ಬರುತ್ತವೆ. ನೀರು ಸರಾಗವಾಗಿ ಹರಿಯದೇ ಇರುವುದರಿಂದ ಮನೆಗಳ ಸುತ್ತಮುತ್ತಲು ನಿಂತಿರುವುದರಿಂದ ಅದರಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಘಿ ಮತ್ತಿತರ ಸಾಂಕ್ರಾಮಿಕ ರೋಗಗಳು ಹರಡಲು ಕಾರಣವಾಗಿವೆ. ಈಗಾಗಲೇ ಗ್ರಾಮದಲ್ಲಿ ಅನೇಕರು ಜ್ವರ, ಕೈಕಾಲು ನೋವುಗಳಿಂದ ಬಳಲುತ್ತಿದ್ದಾರೆ.ಈ ಕೂಡಲೇ ಗ್ರಾಮ ಪಂಚಾಯಿತಿ ಅಧಿಕಾರಿಗಳು ಗ್ರಾಮದಲ್ಲಿ ಸ್ವಚ್ಛತೆ ಕಾಪಾಡದೇ ಹೋದರೆ ಮುಂದಿನ ದಿನಗಳಲ್ಲಿ ಪಂಚಾಯಿತಿ ಎದುರು ಉಗ್ರ ಪ್ರತಿಭಟನೆ ಮಾಡುವುದಲ್ಲದೆ ಪಂಚಾಯಿತಿಗೆ ಬೀಗ ಹಾಕಿ ಯಾಮೊಬ್ಬ ಅಧಿಕಾರಿಯು ಕೆಲಸ ಮಾಡದಂತೆ ದಿಗ್ಬಂಧನ ಹಾಕಲಾಗುವುದೆಂದು ಆರ್. ಮುನಿಸ್ವಾಮಿ ಸಂಘದ ಸದಸ್ಯರಾದ ಎನ್. ನಾರಾಯಣಸ್ವಾಮಿ, ವೈ. ನಾರಾಯಣಸ್ವಾಮಿ, ವಿ. ವೆಂಕಟರವಣಸ್ವಾಮಿ, ಅಧ್ಯಕ್ಷ ಶ್ರೀಧರ್, ಉಪಾಧ್ಯಕ್ಷ ಮಂಜುನಾಥ್ ಮತ್ತಿತರರು ಎಚ್ಚರಿಸಿದ್ದಾರೆ.

ಬಿಜೆಪಿಗೆ ಮುಖಂಡರು ಅನಿವಾರ್ಯವಲ್ಲ: ಶಿವುಕುಮಾರ್
ಮಾಲೂರು:
ಕೆಲವು ಮಹಾನ್ ನಾಯಕರಿಂದ ಪಕ್ಷಕ್ಕೆ ಆಗಿರುವ ನಷ್ಟವನ್ನು ಪಕ್ಷದ ಮೂಲಮಂತ್ರವಾದ ಸಂಘಟನೆಯ ಮೂಲಕ ಬಿಜೆಪಿಯನ್ನು ಬಲಪಡಿಸಬೇಕಾಗಿದೆ ಎಂದು ಬಿಜೆಪಿಯ ರಾಜ್ಯ ಮಾಧ್ಯಮ ಪ್ರಮುಖ್ ಶಿವು ಕುಮಾರ್ ಹೇಳಿದರು.ಅವರು ಪಟ್ಟಣದ ಕುಂಬೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಸಮನ್ವಯ ಸಮಿತಿ ಸದಸ್ಯರ ಸಭೆಯಲ್ಲಿ ಮಾತನಾಡುತ್ತ ಮಹಾನ್ ನಾಯಕರ ಸ್ವಾರ್ಥಕ್ಕಾಗಿ ಪಕ್ಷವನ್ನು ಬಲಿಕೊಟ್ಟಿರಬಹುದು. ಆದರೆ ಬಿಜೆಪಿ ಕಾರ್ಯಕರ್ತರ ಪಕ್ಷವಾಗಿರುವುದರಿಂದ ಪಕ್ಷವನ್ನು ಮುಗಿಸಬೇಕೆಂಬ ಹುನ್ನಾರ ನಡೆಯುವುದಿಲ್ಲ.ಪಕ್ಷಕ್ಕೆ ಮುಖಂಡರು ಅನಿವಾರ್ಯವಲ್ಲ. ಕಾರ್ಯಕರ್ತರೇ ಪಕ್ಷವನ್ನು ಶಕ್ತಿಯುತವಾಗಿ ಸಂಘಟಿಸಿ ಮುಖಂಡರಿಗೆ ಪಕ್ಷ ಅನಿವಾರ್ಯವಾಗುವಂತೆ ಮಾಡಿ ಎಂದರು.ಪಕ್ಷದ ನಿಯಮದಂತೆ ತಾಲೂಕು ಅಧ್ಯಕ್ಷರನ್ನು ಬದಲಾಯಿಸಬೇಕಾಗಿದೆ. ಈಗಾಗಲೇ ಅಧ್ಯಕ್ಷ ಅಕಾಂಕ್ಷಿಗಳು ಬಹಳಷ್ಟು ಇದ್ದು, ಯಾರಿಗೆ ಅಧ್ಯಕ್ಷ ಸ್ಥಾನ ಸಿಕ್ಕರೂ ಭಿನ್ನಮತ ವ್ಯಕ್ತಪಡಿಸಬೇಡಿ ಎಂದರು. ಇದೇ ಸಂದರ್ಭದಲ್ಲಿ ಸಭೆಯಲ್ಲಿ ತಾಲೂಕು ಅಧ್ಯಕ್ಷ ಸ್ಥಾನಗಳಿಗೆ ಆಕಾಂಕ್ಷಿಗಳಾಗಿ ತಾ.ಪಂ. ಮಾಜಿ ಅಧ್ಯಕ್ಷ ಗೋಪಾಲ್‌ಗೌಡ, ವೆಂಕಟೇಶ್ ಗೌಡ, ಯುವ ಬಿಜೆಪಿ ಅಧ್ಯಕ್ಷ ಶೇಷಗಿರಿ, ಆರ್. ವೆಂಕಟೇಶ್, ವೆಂಕಟೇಶ್ ರೆಡ್ಡಿ, ರಾಜೇಶ್ ರವರ ಹೆಸರುಗಳನ್ನು ರಾಜ್ಯ ಸಮಿತಿಗೆ ಶಿಫಾರಸ್ಸು ಮಾಡಲಾಯಿತು. ಪಕ್ಷದ ಚುನಾವಣಾಧಿಕಾರಿ ಲಕ್ಷಣ್ ಗೌಡ, ಪ್ರಮುಖ ಮುಳಬಾಗಿಲಿನ ಅಮರ್, ಗುಂಜೂರು ಮೋಹನ್ ರೆಡ್ಡಿ, ಎಟ್ಟುಕೋಡಿ ಕೃಷ್ಣಾ ರೆಡ್ಡಿ, ಹಾಲಿ ಅಧ್ಯಕ್ಷ ನಾರಾಯಣಗೌಡ, ರಾಜರಾಂ, ದೇವರಾಜ ರೆಡ್ಡಿ,ಬಿ.ಆರ್. ವೆಂಕಟೇಶ್, ಪುರಸಭೆ ಸದಸ್ಯ ಸಿ.ಪಿ. ನಾಗರಾಜ್, ಭಾರತಮ್ಮ ನಂಜುಂಡಪ್ಪ, ಸಾಬೂ ಸಾಬ್ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement