ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮಡಿವಾಳ ಸಮುದಾಯ ಏಳ್ಗಿಗೆಗೆ ಪ್ರಾಮಾಣಿಕ ಯತ್ನ: ಶಾಸಕ ನಾರಾಯಣಸ್ವಾಮಿ ಭರವಸೆ

Srinivasa Murthy VN
Updated On : 23 Jul 2013, 12:00 pm

ಬಂಗಾರಪೇಟೆ: ಹಿಂದುಳಿದ ವರ್ಗಗಳ ಪೈಕಿ ಮಡಿವಾಳ ಸಮುದಾಯ ಸಹ ಒಂದಾಗಿದ್ದು ಈ ಸಮುದಾಯ ಆರ್ಥಿಕವಾಗಿ ಬಲಿಷ್ಠರಾಗಲು ತಾವು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಭರವಸೆ ನೀಡಿದರು. ಕೆಲ ಹಂತದಿಂದ ರಾಜಕೀಯ ಮಾಡಿಕೊಂಡು ಇಂದು ಉತ್ತನ ಮಟ್ಟದ ಶಾಸಕ ಸ್ಥಾನಕ್ಕೆ ಏರಿರುವ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅವರನ್ನು ಅವರ ಸ್ವ ಗೃಹದಲ್ಲಿ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘದಿಂದ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕರು ಕ್ಷೇತ್ರ ಬಹಳ ಹಿಂದುಳಿದಿದೆ. ಅದರಲ್ಲಿಯೂ ಮಡಿವಾಳರ ಸಮುದಾಯದವರು ಎಲ್ಲಾ ಕ್ಷೇತ್ರಗಳಲ್ಲೂ ಹಿಂದುಳಿದಿದ್ದಾರೆ, ಈ ಸಮುದಾಯದವರು ಮೊದಲು ಶೈಕ್ಷಣಿಕವಾಗಿ ಮುಂದೆ ಬರಬೇಕು ನಂತರ ಸರ್ಕಾರ ಈ ಸಮುದಾಯ ಪ್ರಗತಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಸೌಲಭ್ಯಗಳನ್ನು ಪಡೆಯಲು ವಿದ್ಯಾವಂತರಾದರೇ ಮಾತ್ರ ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.ಪಟ್ಟಣದಲ್ಲಿ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಸ್ಥಳ ಮತ್ತು ಅನುದಾನವನ್ನು ಕಲ್ಪಿಸಿಕೊಡುವುದಾಗಿ ಇದೇ ವೇಳೆ ಭರವಸೆ ನೀಡಿದರು. ಸಮುದಾಯದ ಮಾಜಿ ಅಧ್ಯಕ್ಷ ಸಿದ್ದನಹಳ್ಳಿ ಎಸ್.ಬಿ. ವೆಂಕಟೇಶ್ ಮಾತನಾಡಿ ಶಾಸಕರು ಆಯ್ಕೆಯಾದ ಕೂಡಲೆ ಕ್ಷೇತ್ರದಲ್ಲಿ ಹಲವು ಬದಲಾವಣೆಗಳನ್ನು ತಂದಿದ್ದಾರೆ. ಇದನ್ನು ನೋಡಿದರೆ ಮುಂದಿನ ಐದು ವರ್ಷದಲ್ಲಿ ಕ್ಷೇತ್ರದಲ್ಲಿ ಯಾವುದೇ ಸಮಸ್ಯೆಗಳಿಲ್ಲದೆ ಮೂಲ ಸೌಲಭ್ಯಗಳಿಂದ ಕಂಗೊಳಿಸಲಿದೆ ಎಂದು ಶಾಸಕರ ಕಾರ್ಯವೈಖರಿ ಶೈಲಿಯನ್ನು ಶ್ಲಾಘಿಸಿ ಮಡಿವಾಳ ಸಮುದಾಯದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ವಿಶೇಷ ಒತ್ತು ನೀಡುವಂತೆ ಮನವಿ ಮಾಡಿದರು.
ಈ ವೇಳೆ ಸಮುದಾಯದ ತಾಲೂಕು ಅಧ್ಯಕ್ಷ ಜೆ.ಎಂ. ಶ್ರೀರಾಮಪ್ಪ, ಉಪಾಧ್ಯಕ್ಷ ಟಿ. ಶ್ರೀನಿವಾಸ್, ಬೇಕರಿ ಶ್ರೀನಿವಾಸ್, ಚಂದ್ರಶೇಖರ್, ಸಿದ್ದನಹಳ್ಳಿ ಎಸ್.ಬಿ. ವೆಂಕಟೇಶ್, ಜಿ. ರಂಗನಾಥ್ ಮತ್ತಿತರರು ಇದ್ದರು.

ಐಟಿ ದಾಳಿ ಖಂಡಿಸಿ ಎಬಿವಿಪಿ ಪ್ರತಿಭಟನೆ
ಚಿಂತಾಮಣಿ:
ಆದಿಚುಂಚನಗಿರಿ ಶಾಖಾ ಮಠದ ಮೇಲೆ ಐ.ಟಿ ದಾಳಿಯನ್ನು ಖಂಡಿಸಿ ಸೋಮವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಶಾಖೆ ವತಿಯಿಂದ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಪಟ್ಟಣದ ಪ್ರವಾಸಿ ಮಂದಿರದಿಂದ ಎಬಿವಿಪಿ ತಾಲೂಕು ಶಾಖಾ ಸಂಘಟನೆ ವತಿಯಿಂದ ನೂರಾರು ವಿದ್ಯಾರ್ಥ್ಥಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಆದಿಚುಂಚನಗಿರಿ ಶಾಖಾ ಮಠದ ಮೇಲೆ ಐ.ಟಿ ದಾಳಿಯನ್ನು ವಿರೋಧಿಸಿ ನೂರಾರು ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ವಿರುದ್ಧ ದಿಕ್ಕಾರಗಳನ್ನು ಕೂಗಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಎಬಿವಿಪಿ ಜಿಲ್ಲಾ ಸಂಚಾಲಕ ಮಂಜುನಾಥರೆಡ್ಡಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಆದಿಚುಂಚನಗಿರಿ ಮಠ ಉಚಿತ ವಿದ್ಯಾಭ್ಯಾಸ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಕೇಂದ್ರವಾಗಿದೆ. ಇಂತಹ ಕೇಂದ್ರದ ಮೇಲೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಐ.ಟಿ ದಾಳಿ ಮಾಡಿಸಿರುವುದು ಹಿಂದು ಸಂಪ್ರದಾಯಕ್ಕೆ ಮಾಡಿರುವ ಅವಮಾನವಾಗಿದೆಯೆಂದು ಹೇಳಿದರು. ಆದುದರಿಂದ ಈ ದಾಳಿಯ ಹಿಂದಿನ ಮರ್ಮವನ್ನು ಕೂಡಲೇ ಬಹಿರಂಗ ಪಡಿಸಬೇಕು ಹಾಗೂ ಮಠಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಪ್ರತಿಭಟನೆಯಲ್ಲಿ ಸುರೇಶ್, ಮಂಜುನಾಥ್, ವಿಜಯ್,ನರೇಶ್, ಲಕ್ಷ್ಮಣ್, ಹರ್ಷಿಯಾ, ಲಾವಣ್ಯ, ಶ್ವೇತಾ,ದೀಪ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement