ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ರೇಲ್ವೆಯಲ್ಲಿ ರಾಜ್ಯದವರಿಗೇ ಉದ್ಯೋಗ ಕಲ್ಪಿಸಿ

Srinivasa Murthy VN
Updated On : 22 Jul 2013, 11:55 am

ಸಚಿವ ಖರ್ಗೆಗೆ ರೈಲ್ವೆ ಸಲಹಾ ಸಮಿತಿ ಸದಸ್ಯ ಪ್ರೇಮ್‌ಚಂದ್ ಜೈನ್ ಮನವಿ
ಕೆಜಿಎಫ್:
ರಾಜ್ಯದ ಯುವಕರು, ವಿದ್ಯಾವಂತರು ಮತ್ತು ನಿರುದ್ಯೋಗಿಗಳಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗವಕಾಶವನ್ನು ಕಲ್ಪಿಸಿಕೊಡಬೇಕು ಎಂದು ಕೋಲಾರ ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯ ಹಾಗೂ ರೈಲ್ವೆ ಸಲಹಾ ಸಮಿತಿಯ ಸದಸ್ಯಪ್ರೇಮ್‌ಚಂದ್ ಜೈನ್ ಮತ್ತು ಮುಖಂಡರಾದ ಡೇವಿಡ್, ಜೇವಿಯರ್ ಅವರು ರಾಜ್ಯ ರೈಲ್ವೆ  ಸಚಿವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.  
ಕನ್ನಡಪ್ರಭ ದೊಂದಿಗೆ ಮಾತನಾಡಿದ ಪ್ರೇಮ್‌ಚಂದ್ ಜೈನ್ ಅವರು ಕೇಂದ್ರ ಸರ್ಕಾರದ ಕ್ಯಾಬಿನೆಟ್ ರೈಲ್ವೆ ಸಚಿವರಾಗಿದ್ದ ಲಲಿತ್‌ಮಿಶ್ರಾ, ನಿತೀಶ್‌ಕುಮಾರ್, ರಾಮ್‌ವಿಲಾಸ್‌ಪಾಸ್ವನ್, ಲಾಲೂ ಪ್ರಸಾದ್ ಯಾದವ್ ಅವರುರೈಲ್ವೆ ಇಲಾಖೆಯಲ್ಲಿ ಬಿಹಾರ್ ರಾಜ್ಯದ ಜನರಿಗೆ ಹೆಚ್ಚು ಉದ್ಯೋಗವಕಾಶ ಕಲ್ಪಿಸಿಕೊಡುವ ಕೆಲಸವನ್ನು ಮಾಡಿದ್ದಾರೆ. ಈ ಹಿಂದೆ ಇದ್ದ ರಾಜ್ಯ ರೈಲ್ವೆ ಸಚಿವ ಸಿ.ಕೆ. ಜಾಫರ್ ಶರೀಫ್ ರಾಜ್ಯದ ಜನತೆಗೆ  ಉದ್ಯೋಗವಕಾಶ ಕಲ್ಪಿಸಿಕೊಡುವಲ್ಲಿ ಹಾಗೂ ರಾಜ್ಯಕ್ಕೆ ನೂತನ ರೈಲುಗಳನ್ನು ಹಾಕುವ ಕೆಲಸವನ್ನು ಮಾಡಿದ್ದರು.
ಅದೇ ರೀತಿ ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪ ರಾಜ್ಯ ರೈಲ್ವೆ ಮಂತ್ರಿಯಾಗಿದ್ದಾಗ ಕರ್ನಾಟಕಕ್ಕೆ ಸುಮಾರು 47 ನೂತನ ರೈಲುಗಳು, ಬಂಗಾರಪೇಟೆಯ ಮಾದರಿ ರೈಲ್ವೆ ನಿಲ್ದಾಣ, ಐಟಿಐ ಟೂಲ್ ರೀಂ, ಕೆಜಿಎಫ್‌ನ ಬೆಮೆಲ್ ಕಾರ್ಖಾನೆಗೆ 730 ಕೋಟಿಯ ಮೆಟ್ರೋ ಕಾಮಗಾರಿ, ಶ್ರೀನಿವಾಸಪುರ ತಾಲೂಕಿನ ಯಲ್ದೂರ್‌ನಲ್ಲಿ ರೈಲ್ ಕೋಟ್ ಘಟಕಕ್ಕೆ ಸ್ಥಾಪನೆ  ಸೇರಿದಂತೆ ಹಲವಾರು ಅಭಿವೃದ್ಧಿ ಕೆಲಸವನ್ನು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ನೂತನ ರಾಜ್ಯ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕ ರಾಜ್ಯದ ಯುವಕರಿಗೆ, ವಿದ್ಯಾವಂತರಿಗೆ, ನಿರುದ್ಯೋಗಿಗಳಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗವಕಾಶವನ್ನು ಕಲ್ಪಿಸಿಕೊಡಬೇಕೆಂದು ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು
ರಾಜ್ಯದ ಜನರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು, ರಾಜ್ಯಕ್ಕೆ ಅಗತ್ಯವಿರುವ ಮರ್ಗಗಳಿಗೆ ನೂತನ ರೈಲುಗಳನ್ನು ಹಾಕುವುದು, ಉಳಿದಿರುವ ಸಿಂಗಲ್ ಲೈನ್ ಹಾಗೂ ಡಬಲ್ ಲೈನ್ ಕಾಮಗಾರಿಯನ್ನು 2014ರೊಳಗೆ ಪೂರ್ಣಗಳಿಸಿ ರಾಜ್ಯದ ಅಭಿವೃದ್ಧಿಗೆ ಎಲ್ಲಾ ರೀತಿಯ ಕ್ರಮ ಜರುಗಿಸಲಾಗುತ್ತದೆ ಎಂದು ಆಶ್ವಾಸನೆ ನೀಡಿರುವುದಾಗಿ ತಿಳಿಸಿದರು.

ಮುರಳಿಮೋಹನ್, ಚೌಡಪ್ಪ ಆಯ್ಕೆ
ಕೋಲಾರ:
ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿಗೆ ವಿವಿಧ ಇಲಾಖೆಗಳಿಂದ 9 ಸ್ಥಾನಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಪ್ರೌಢಶಾಲಾ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಸ್.ಚೌಡಪ್ಪ, ಮುರಳೀಮೋಹನ್ ಆಯ್ಕೆಯಾಗಿದ್ದಾರೆ. ಸರ್ಕಾರದ ವಿಮಾ ಇಲಾಖೆಯಿಂದ ತಿಮ್ಮಯ್ಯ, ಬಂದಿಖಾನೆ ಇಲಾಖೆಯಿಂದ ವಿ.ಶ್ರೀರಾಮ್, ಸಮಾಜ ಕಲ್ಯಾಣ ಇಲಾಖೆಯಿಂದ ರವಿ ಆಯ್ಕೆಯಾಗಿದ್ದಾರೆ. ಗೆಲುವು ಪ್ರಕಟಗೊಳ್ಳುತ್ತಿದ್ದಂತೆ ಅಭ್ಯರ್ಥಿಪರ ಬೆಂಬಲಿಗರು ವಿಜಯೋತ್ಸವ ಆಚರಿಸಿದರು. ಪ್ರಾಥಮಿಕ ಶಿಕ್ಷಣ ಇಲಾಖೆ 4 ಸ್ಥಾನಗಳ ಮತ ಎಣಿಕೆ ಮುಂದುವರೆದಿದ್ದು, ಫಲಿತಾಂಶ ತಡ ರಾತ್ರಿ ಪ್ರಕಟ ನಿರೀಕ್ಷೆಯಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement