'ಗ್ರಾಹಕರೊಂದಿಗೆ ಸೌಜನ್ಯದಿಂದ ವರ್ತಿಸಿ'
ಶ್ರೀನಿವಾಸಪುರ: ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಬ್ಯಾಂಕಿನ ಶಾಖೆಗೆ ಬರುವ ಎಲ್ಲಾ ಗ್ರಾಹಕರೊಂದಿಗೆ ಸೌಜನ್ಯದಿಂದ ವರ್ತಿಸಿ ಗೌರವವನ್ನು ನೀಡಿ ಅವರಿಗೆ ಬ್ಯಾಂಕಿನ ಅನುಕೂಲಗಳನ್ನು ಮಾಡಿಕೊಡುವಂತೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ವಾಸು ಸಿಬ್ಬಂದಿಗೆ ಸಲಹೆ ನೀಡಿದ್ದಾರೆ.
ಆವರು ತಾಪಂ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕೃಷಿ ಸಾಲ ಮೇಳಕ್ಕೆ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ರೈತರ ಬ್ಯಾಂಕುಗಳಿಂದ ತೆಗೆದುಕೊಂಡ ಸಾಲವನ್ನು ಪ್ರಾಮಾಣಿಕತೆಯಿಂದ ಮರುಪಾವತಿ ಮಾಡುವಂತೆ ತಿಳಿಸಿದರು ಸಾಲ ಮರುಪಾವತಿ ಮಾಡದಿದ್ದರೆ ಆಪರಾಧವೇನು ಆಲ್ಲ ಎಂದು ಬ್ಯಾಂಕ್ ಸಾಲವನ್ನು ಪಡೆದುಕೊಂಡು ಬಹಳಷ್ಟು ಮಂದಿ ಉದ್ಧಾರವಾಗಿದ್ದಾರೆ ಎಲ್ಲರೂ ಉಳಿತಾಯದ ಅಭ್ಯಾಸವನ್ನು ಮೈಗೂಡಿಸಿಕೊಳ್ಳಬೇಕೆಂಬ ಕಿವಿ ಮಾತನ್ನು ನುಡಿದರು.
ಬೆವರು ಸುರಿಸಿ ಸಂಪಾದನೆ ಮಾಡಿ ಹಣ ಯಾವಾಗಲೂ ನಿಮ್ಮೊಂದಿಗೆ ಇರುತ್ತದೆ ರೈತರಿಗೆ ಸಾಲಗಳನ್ನು ನೀಡಿದಾಗ ಅವರಿಗೆ ಸಾಲದ ಮರುಪಾವತಿಯ ಬಗ್ಗೆ ಲಿಖಿತ ಮೂಲಕ ಎಲ್ಲಾ ವಿವರಗಳನ್ನು ಕೊಡುವಂತೆ ಬ್ಯಾಂಕಿನ ನೌಕರರಿಗೆ ತಿಳಿಸಿದರು.
ಬ್ಯಾಂಕಿನ ಬಗ್ಗೆ ಆಭಿಮಾನನ್ನಿಟ್ಟುಕೊಳ್ಳಬೇಕಾದ ಜವಾಬ್ದಾರಿ ರೈತರಿಗೆ ಬಿಟ್ಟಿದ್ದು ಮತ್ತು ರೈತರ ಮರಣ ಹೊಂದಿದ್ದಾಗ ಮಕ್ಕಳ, ಮೊಮ್ಮಕ್ಕಳ ಮೇಲೆ ಸಾಲ ಇಟ್ಟು ಸಾಯಬೇಡಿ ಮಕ್ಕಳಿಗೆ ಆಸ್ತಿ ಮಾಡಿ ಸಾಯಿರಿ ಎಂಬ ಸಲಹೆಯನ್ನು ಕೂಡ ರೈತರಿಗೆ ನೀಡಿದರು.