ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಜಿಲ್ಲಾ ಸರ್ಕಾರಿ ನೌಕರರ ಸಂಘಕ್ಕೆ ಆಯ್ಕೆ

Srinivasa Murthy VN
Updated On : 24 Jul 2013, 11:58 am

ಕನ್ನಡಪ್ರಭ ವಾರ್ತೆ ಕೋಲಾರ ಜು.24
ಕಳೆದ ಎರಡು ದಿನಗಳ ಹಿಂದೆ ಅತ್ಯಂತ ಬಿರುಸು ಹಾಗೂ ಪೈಪೋಟಿಯಿಂದ ನಡೆದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆಯಲ್ಲಿ 5 ಇಲಾಖೆಗಳಿಂದ 9 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಘಟಾನುಘಟಿಗಳು ಜಯ ಗಳಿಸಿದ್ದಾರೆ.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಚುನಾವಣೆ ನಡೆದಿತ್ತು. ಪ್ರೌಢಶಾಲಾ ವಿಭಾಗದ 2 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ವಿ. ಮುರಳಿಮೋಹನ್ ಹಾಗೂ ಎಸ್. ಚೌಡಪ್ಪ ವಿಜೇತರಾಗಿದ್ದಾರೆ.
ಇವರಿಬ್ಬರೂ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದು ತಮ್ಮ ಸಮೀಪ ಸ್ಪರ್ಧಿಗಳಾದ ಎನ್.ರಾಜಣ್ಣ ಮತ್ತು ಎಸ್. ರವಣಪ್ಪ ಹಾಗೂ ಕೆ.ಎಂ. ಮುನಿಯಪ್ಪನವರನ್ನು ಸೋಲಿಸಿದ್ದಾರೆ.
ಎನ್.ಸಿ.ಸಿ. ಮತ್ತು ಕಾರಾಗೃಹ ಇಲಾಖೆವತಿಯಿಂದ 1 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ವಿ. ಶ್ರೀರಾಮ್ ಅವರು ಸಮೀಪ ಸ್ಪರ್ಧಿ ಮಹಮದ್ ಇನಾಯತ್ ವಿರುದ್ಧ ಜಯ ಗಳಿಸಿದ್ದಾರೆ.
ಸಮಾಜ ಕಲ್ಯಾಣ-ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಇಲಾಖೆ ವತಿಯಿಂದ 1 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಚ್.ಎನ್. ರವಿಕುಮಾರ್ ಅವರು ಎನ್. ಕೃಷ್ಣನ್ ಅವರನ್ನು ಸೋಲಿಸಿದ್ದಾರೆ. ಕರ್ನಾಟಕ ಸರ್ಕಾರ ವಿಮಾ ಇಲಾಖೆ ವತಿಯಿಂದ 1 ಸ್ಥಾನಕ್ಕೆ  ಆರ್. ತಿಮ್ಮಪ್ಪ ಲಾಟರಿಯ ಮೂಲಕ ವಿಜೇತರಾಗಿದ್ದಾರೆ.  ಸಮೀಪ ಸ್ಪರ್ಧಿ ಎಂ.ಬಿ. ನಾಗರಾಜ ಹಾಗೂ ಆರ್. ತಿಮ್ಮಪ್ಪ  ತಲಾ 5 ರಂತೆ ಸಮ ಪ್ರಮಾಣದಲ್ಲಿ  ಮತಗಳು ಪಡೆದಿದ್ದರಿಂದ ಅಂತಿಮವಾಗಿ ಲಾಟರಿ ಮೂಲಕ ಫಲಿತಾಂಶ ಪ್ರಕಟಿಸಿದಾಗ ವಿಜಯಲಕ್ಷ್ಮಿ ತಿಮ್ಮಪ್ಪ ಅವರಿಗೆ ಒಲಿಯಿತು.
ಪ್ರಾಥಮಿಕ ಶಾಲಾ ಶಿಕ್ಷಕರ ವಿಭಾಗದ 4 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜಿಲ್ಲಾ  ನೌಕರರ ಸಂಘ ಬೆಂಬಲಿತ ಎಂ. ನಾಗರಾಜ್, ಎಂ.ಎನ್. ಶ್ರೀನಿವಾಸಮೂರ್ತಿ, ಅನಿಲ್ ಬಣ ಬೆಂಬಲಿತ ಎಂ. ಚಂದ್ರಪ್ಪ , ಆರ್.ಶ್ರೀಧರ್ ಮತಗಳನ್ನು ಪಡೆದು ವಿಜೇತರಾಗಿದ್ದಾರೆ.  
ಉಳಿದ ಅಭ್ಯರ್ಥಿಗಳಾದ ಸಂಘ ಬೆಂಬಲಿತ ವಿ. ಸೋಮಶೇಖರ, ಯುನೆಸ್ ಖಾನ್, ಅನಿಲ್ ಬಣ ಬೆಂಬಲಿತ ಎಸ್. ರಾಜೇಶ್ ಎನ್.ಕೆ. ಬಷೀರ್‌ಜಾನ್, ತೃತೀಯ ರಂಗದ ಹೆಸರಿನಲ್ಲಿ ಸ್ಪರ್ಧಿಸಿದ್ದ ಇಬ್ರಾಹಿಂ ಖಾನ್, ಸಿ. ಮುನಿರಾಜು, ಎಂ. ರತ್ನಮ್ಮ ಎಂ.ಎಸ್. ಶ್ರೀನಿವಾಸ ಪರಾಭವಗೊಂಡಿದ್ದಾರೆ.
ಚುನಾವಣಾಧಿಕಾರಿಯಾಗಿ ನರಸಿಂಹಯ್ಯ, ಸಹಾಯಕ ಚುನಾವಣಾಧಿಕಾರಿಯಾಗಿ ರಾಮಚಂದ್ರಪ್ಪ, ಮತ ಎಣಿಕೆ ಅಧಿಕಾರಿಗಳಾಗಿ ಕೆ.ಎಂ. ಕೊಮ್ಮಣ್ಣ, ಬಿ.ವಿ. ನರಸಿಂಹಮೂರ್ತಿ, ಎಂ. ನಾಗರಾಜ, ವೇಣುಗೋಪಾಲ್, ಗಣೇಶಯ್ಯ, ಶ್ರೀನಿವಾಸಗೌಡ, ವೇಣುಗೋಪಾಲ ಹಾಗೂ ಕೃಷ್ಣಾರೆಡ್ಡಿ ಕಾರ್ಯ ನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement