ಬಸ್ ನಿಲ್ದಾಣದಲ್ಲಿ ರಸ್ತೆ ಗುಂಡಿಗಳು...
ಗೌರಿಬಿದನೂರು: ತಾಲೂಕಿನ ಮಂಚೇನಹಳ್ಳಿ ಹೋಬಳಿ ಕೇಂದ್ರದ ಬಸ್ ನಿಲ್ದಾಣದ ವಿನಾಯಕ ದೇವಾಲಯ ಮುಂಭಾಗದಲ್ಲಿ ರಸ್ತೆ ಹದಗೆಟ್ಟಿದ್ದು ಚರಂಡಿ ಬಂಡೆಗಳು ಮೇಲೆದ್ದಿವೆ. ಮಳೆ ಬೀಳುತ್ತಿರುವುದರಿಂದ ರಸ್ತೆ ಗುಂಡಿಗಳು ನೀರು ತುಂಬಿ ಹೊಂಡ ಯಾವುದು, ರಸ್ತೆ ಯಾವುದೇ ಎಂದು ತಿಳಿಯಲಾಗುತ್ತಿಲ್ಲ. ಅಪಘಾತಗಳಿಗೆ ಕಾರಣವಾಗುತ್ತಿದೆ. ಬಸ್ ನಿಲ್ದಾಣದ ತಿರುವು ಆಗಿರುವುದರಿಂದ ವಾಹನಗಳು, ದ್ವಿಚಕ್ರ ವಾಹನಗಳು ಸಂಚಾರಕ್ಕೆ ಅಡಚಣೆಯಾಗಿದೆ. ಗುಂಡಿಗಳಲ್ಲಿ ನೀರು ತುಂಬಿರುವುದರಿಂದ ಪಾದಚಾರಿಗಳು ಹಾಗೂ ವಾಹನ ಚಾಲಕರಿಗೆ ಚಲಿಸುವುದಕ್ಕೆ ತೊಡಕಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವಾಗಿ ಸಮಸ್ಯೆಗೆ ಸೂಕ್ತ ಡಾಂಬರೀಕರಣ, ರಸ್ತೆಯ ಮೇಲ್ಭಾಗ ಬಂಡೆಗಳನ್ನು ತೆರವುಗೊಳಿಸುವಂತೆ ಮಂಚೇನಹಳ್ಳಿ ನಾಗರಿಕರು, ದ್ವಿಚಕ್ರ ಸವಾರರು ಒತ್ತಾಯಿಸಿದ್ದರೆ.