ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕಾಂಗ್ರೆಸ್ ಎಸ್ಟಿ ವಿಭಾಗಕ್ಕೆ ನೇಮಕ

Srinivasa Murthy VN
Updated On : 26 Jul 2013, 12:42 pm

ಕೋಲಾರ:  ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಪಂಗಡಗಳ ವಿಭಾಗದ ರಾಜ್ಯ ಕಾರ್ಯದರ್ಶಿಯಾಗಿ ಕೋಲಾರದ ಎಂ.ಉಮಾಪತಿ ಅವರನ್ನು ನೇಮಕ ಮಾಜಿ ರಾಜ್ಯಾಧ್ಯಕ್ಷ ಅಧ್ಯಕ್ಷ ಟಿ. ಈಶ್ವರ್ ಆದೇಶ ಹೊರಡಿಸಿದ್ದಾರೆ.

ಪಾರಿವಾಳ ಹಾರಾಟ: ವಿಜೇತರಿಗೆ ಬಹುಮಾನ
ಕೋಲಾರ: 
ಕೋಲಾರಮ್ಮ ರೇಸಿಂಗ್ ಫಿಜನ್ ಕ್ಲಬ್ ವತಿಯಿಂದ ಜು.28 ರಂದು ಸಂಜೆ 6.30ಕ್ಕೆ ಪಾರಿವಾಳ ರೇಸಿಂಗ್ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಜು.28 ರಂದು ಭಾನುವಾರ ಸಂಜೆ 6.30 ಗಂಟೆಗೆ ನಗರದ ಬಾಲಾಜಿ ಪ್ರಾರ್ಥನಾ ಮಂದಿರದಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಮಹಾ ಕುಂಭಾಭಿಷೇಕ
ಮುಳಬಾಗಲು: 
ಸೋಮೇಶ್ವರ ದೇವಾಲಯದಲ್ಲಿ ಜು.28 ರವರೆಗೆ ರುದ್ರಾಭಿಷೇಕ ನೆರವೇರಲಿದೆ. ಇದರ ಅಂಗವಾಗಿ ಗುರುವಾರ ದೇವರಿಗೆ ವಿಶೇಷ ಅಲಂಕಾರ, ಪಂಚಾಮೃತಾಭಿಷೇಕ, ಮಂತ್ರ ಪುಷ್ಪ ಕಾರ್ಯಕ್ರಮಗಳು ನಡೆಯಿತು. ತಹಸೀಲ್ದಾರ್ ಡಿ.ವಿ.ರಾಮಮೂರ್ತಿ, ಕಂದಾಯ ನಿರೀಕ್ಷಕ ವೆಂಕಟೇಶ್, ದೇವಾಯಲಯ ಧರ್ಮದರ್ಶಿ ಬಿ.ಎಸ್. ನಾರಾಯಣಪ್ಪ, ಮಾಜಿ ಅಧ್ಯಕ್ಷ ಮುನಿರಾಜು, ಎಸ್.ಜಯರಾಂ, ಲಕ್ಷ್ಮಿನಾರಾಯಣಪ್ಪ, ದೇವಾಲಯ ಪ್ರಧಾನ ಅರ್ಚಕ ರಾಮನಾಥದೀಕ್ಷಿತ್ ಭಾಗವಹಿಸಿದ್ದರು.

ಇಂದು ಪುರಸ್ಕಾರ
ಮುಳಬಾಗಲು: 
ಇಲ್ಲಿನ ಚಾಮರೆಡ್ಡಿಹಳ್ಳಿಯ ದಿ. ಕೃಷ್ಣೇಗೌಡ ಕುಟುಂಬದಿಂದ ತಾಲೂಕಿನ 50 ಶಾಲೆಗಳ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ  26ರಂದು ವಿದ್ಯಾಸಂಸ್ಧೆಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  ಎಸ್ಸೆಸ್ಸಿಲ್ಸಿ ಪ್ರಥಮ, ದ್ವಿತೀಯ ಸ್ಧಾನ ಪಡೆದಿರುವ ಪ್ರತಿ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಪುರಸ್ಕಾರಕ್ಕೆ ಅರ್ಹರು. ಬೆ.10 ಗಂಟೆಗೆ ಮುಖ್ಯ ಶಿಕ್ಷಕರು, ವಿದ್ಯಾರ್ಥಿಗಳು ಸಮಾರಂಭದಲ್ಲಿ ಹಾಜರಿರಲು ಕೋರಿದೆ. ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಕೆ.ರಾಧಾವಲ್ಲಭ ಕಾರ್ಯಕ್ರಮ ಉದ್ಪಾಟಿಸುವರು. ಶಾಸಕ ಕೊತ್ತೂರು ಮಂಜುನಾಥ್ ಅಧ್ಯಕ್ಷತೆ ವಹಿಸುವರು.

ಕುಂದುಕೊರತೆ ಸಭೆ
ಕೆಜಿಎಫ್: 
ನಗರದ ಶ್ರೀವಾಸವಿ ಕಲ್ಯಾಣ ಮಂಟಪದಲ್ಲಿ ಕೆಜಿಎಫ್ ಪೊಲೀಸ್ ಜಿಲ್ಲೆಯ ದಲಿತರ ಕುಂದುಕೊರತೆಗಳ ಸಭೆಯನ್ನು ಜು.27ರಂದು ಬೆಳಗ್ಗೆ 10.30ಕ್ಕೆ ಆಯೋಜಿಸಲಾಗಿದೆ. ಕೆಜಿಎಫ್ ಪೊಲೀಸ್ ರಕ್ಷಣಾಧಿಕಾರಿ ಡಾ.ರೋಹಿಣಿ ಕಟೋಚ್ ಸಫೆಟ್ ಕಾರ್ಯಕ್ರಮ ಉದ್ಘಾಟಿಸಿ, ದಲಿತರ ಕುಂದುಕೊರತೆಗಳ ಬಗ್ಗೆ ವಿಚಾರಿಸಿ ಲಿಖಿತ ದೂರುಗಳನ್ನು ಸ್ವೀಕರಿಸುವರು. ಸಭೆಯಲ್ಲಿ ಉಪರಕ್ಷಣಾಧಿಕಾರಿ ಎಚ್.ಪಿ. ರಾಜಣ್ಣ ಸೇರಿ ನಗರದ ವಿವಿಧ ಠಾಣೆಗಳ ವೃತ್ತ ನಿರೀಕ್ಷಕರು, ಪಿಎಸ್‌ಐಗಳು ಭಾಗವಹಿಸುವರು. ಬಂಗಾರಪೇಟೆ, ಕೆಜಿಎಫ್ ಭಾಗದ ದಲಿತರು ಇಲಾಖೆಗೆ ಸಂಬಂಧಿಸಿದಂತೆ ತಮ್ಮ ದೂರು ಖಿತ ಮೂಲಕ ಸಲ್ಲಿಸಿ ಮುಕ್ತವಾಗಿ ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement