ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನಗರದಲ್ಲಿ ಬೀಡಾಡಿ ದನಗಳ ಹಾವಳಿ

Srinivasa Murthy VN
Updated On : 26 Jul 2013, 12:39 pm

-ಆರ್. ರಜನೀಕಾಂತ್
ಕೆಜಿಎಫ್: 
  ನಗರಾದ್ಯಂತ ಜಾನುವಾರಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಪ್ರತಿನಿತ್ಯ ಸಾರ್ವಜನಿಕರಿಗೆ ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಬೇಕಿದೆ.
ನಗರದ ಎಂ.ಜಿ. ಮಾರುಕಟ್ಟೆ, ಬಸ್ ನಿಲ್ದಾಣ, ನಗರದ ಪ್ರಮುಖ ರಸ್ತೆಗಳು, ಹೊಟೇಲ್ ಸೇರಿದಂತೆ ಇತರೇ ಸಾರ್ವಜನಿಕರ ಪ್ರದೇಶಗಳಲ್ಲಿ ಗುಂಪು ಗುಂಪಾಗಿ ಹಸುಗಳು ನುಗ್ಗುವುದರಿಂದ ಸಾರ್ವಜನಿಕರಿಗೆ, ವಾಹನ ಸವಾರರು, ಬಸ್ ಚಾಲಕರಿಗೆ, ಪುಟ್‌ಪಾತ್ ವ್ಯಾಪಾರಸ್ಥರು, ಮಾರುಕಟ್ಟೆಯ ಹಣ್ಣು ಮತ್ತು ತರಕಾರಿ ವ್ಯಾಪಾರಸ್ಥರು, ವೃದ್ಧರು, ಮಹಿಳೆಯರು ಮತ್ತು ವಿದ್ಯಾರ್ಥಿಗಳಿಗೆ ನಿತ್ಯ ತೊಂದರೆ ಅನುಭವಿಸುವಂತಾಗಿದೆ.
ಎಂ.ಜಿ. ಮಾರುಕಟ್ಟೆಯೊಳಗೆ ಗುಂಪಾಗಿ ನುಗ್ಗುವ ಎಮ್ಮೆ, ಹಸುಗಳು ತರಕಾರಿ, ಹಣ್ಣು ರಾಶಿಗೆ ಏಕಾಏಕಿ ಬಾಯಿ ಹಾಕುತ್ತವೆ. ಕಸಗಳನ್ನು ಮೇಯಲು ಬರುವ ಜಾನುವಾರುಗಳು ಎಲ್ಲೆಂದರಲ್ಲಿ ಸಗಣಿ, ಮೂತ್ರ ವಿಸರ್ಜಿಸುತ್ತವೆ,. ಇದರಿಂದ ವ್ಯಾಪಾರಸ್ಥರು ಅವನ್ನು ಓಡಿಸಲು ಮುಂದಾದಾಗ ಸಾರ್ವಜನಿಕರ ಮೇಲೆ ದಿಕ್ಕಾಪಾಲಾಗಿ ಓಡುತ್ತವೆ. ಇದರಿಂದ ಮಾರುಕಟ್ಟೆಗೆ ಬರುವ ಮಹಿಳೆಯರು, ಮಕ್ಕಳು, ವೃದ್ಧರು ಅಂಗವಿಕಲರು ಹೆದರಿಕೊಂಡು ಕೆಳಗೆ ಬೀಳುವ ಪ್ರಸಂಗಗಳು ನಡೆದಿವೆ, ನಡೆಯುತ್ತಿವೆ.
ಹತ್ತಾರು ಹಸುಗಳು ಒಮ್ಮೆಗೆ ಬಸ್ ನಿಲ್ದಾಣದೊಳಗೆ ಪ್ರವೇಶಿಸುತ್ತವೆ. ಬಸ್ ನಿಲ್ದಾಣದಲ್ಲಿನ ಹೂವು , ಹಣ್ಣಿನ ಅಂಗಡಿಗಳು, ಹೊಟೇಲ್‌ಗಳ ಮುಂಭಾಗ ಗುಂಪಾಗಿ ಬೀಡುಬಿಡುತ್ತವೆ. ಹಗಲು, ರಾತ್ರಿ ಈ ಬೀಡಾದಿ ದನಗಳಿಂದಾಗಿ ನಿಲ್ದಾಣದಲ್ಲಿ ಬಸ್‌ಗಳು ಸುಲಲಿತವಾಗಿ ಸಂಚರಿಸಲು ತೊಂದರೆಯಾಗುತ್ತಿದೆ. ಚಾಲಕರು ಪದೇ ಪದೇ ಜೋರಾಗಿ ಹಾರನ್ ಮಾಡಿದರೆ ಹೆದರಿ ಪ್ರಯಾಣಿಕರು, ವಾಹನಗಳನ್ನೂ ಲೆಕ್ಕಿಸದೇ ಕಾಲ್ಕೀಳುತ್ತವೆ.
ನಗರದ ಪ್ರಮುಖ ರಸ್ತೆಗಳಾದ ಗೀತಾ ರಸ್ತೆ, ಪ್ರಿರ್ಚಡ್ ರಸ್ತೆ, ಆಂಡರ್‌ಸನ್‌ಪೇಟೆ ರಸ್ತೆ, ಉರಿಗಾಂ ರೇಲ್ವೆ ರಸ್ತೆ, ಉರಿಗಾಂಪೇಟೆ ರಸ್ತೆ, ಅಶೋಕ್‌ನಗರ ರಸ್ತೆಗಳಲ್ಲಿ ಈ ಜಾನುವಾರುಗಳು ಮಲಗುವುದರಿಂದ ವಾಹನ ಸಂಚಾರಕ್ಕೆ ಅಡಚನೆ ಉಂಟು ಮಾಡುತ್ತಿವೆ.
ಈ ಹಿಂದೆ ಕೆಜಿಎಫ್‌ನ ಮೊದಲನೇ ಅಡ್ಡ ರಸ್ತೆಯಲ್ಲಿ ಜಾನುವಾರುಗಳನ್ನು ಕಟ್ಟಿ ಹಾಕಲು ನಗರಸಭೆ ದೊಡ್ಡಿಯಿತ್ತು. ಹಸುಗಳ ಪೋಷಕರು ಅವುಗಳನ್ನು ನಗರದೊಳಗೆ ಮೇಯಲು ಬಿಟ್ಟು ಸಾರ್ವಜನಿಕರಿಗೆ ತೊಂದರೆ ಮಾಡಿದಲ್ಲಿ ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಅವುಗಳನ್ನು ಹಿಡಿದುಕೊಂಡು ಹೋಗಿ ಆ ದೊಡ್ಡಿಯಲ್ಲಿ ಕಟ್ಟಿ ಹಾಕಿ, ಹಸುಗಳ ಮಾಲೀಕರಿಗೆ 500 ದಂಡ ಹಾಕಿದ ರಸೀದಿಯನ್ನು ದೊಡ್ಡಿ ಉಸ್ತುವಾರಿ ಹೊತ್ತವರಿಗೆ ತೋರಿಸಿದರೆ ಅವರ ಹಸುಗಳನ್ನು ಬಿಡುತ್ತಿದ್ದರು.
ದಂಡ ಕಟ್ಟಲು ಹೆದರಿಕೊಂಡು ಹಸುಗಳಿಗೆ ಮೇವುಗಳನ್ನು ತಂದು ಹಾಕಿಕೊಂಡು ತಮ್ಮ ಮನೆಯ ಪಕ್ಕದಲ್ಲೇ ಕಟ್ಟಿ ಹಾಕಿಕೊಳ್ಳುತ್ತಿದ್ದರು. ಆದರೀಗ ಆ ವ್ಯವಸ್ಥೆ ಈಗ ಚಾಲನೆ ಇಲ್ಲದ ಕಾರಣ ಮೂಕ ಪ್ರಾಣಿಗಳಿಗೆ ಮೇವುಗಳನ್ನು ಸರಿಯಾಗಿ ತಂದು ಹಾಕದೆ ಅವುಗಳನ್ನು ಪೋಷಿಸದೆ ಎಲ್ಲೆಂದರಲ್ಲಿ ಮೇಯಲು ಬಿಟ್ಟಿರುವ ಜಾನುವಾರುಗಳನ್ನು ಗೋ ಶಾಲೆಗೆ ಬಿಡಲು ಅಥವಾ ಅವುಗಳ ಮಾಲೀಕರನ್ನು ಕರೆಸಿ ಒಪ್ಪಿಸುವ ಕೆಲಸವನ್ನು ಕೂಡಲೇ ಕೆಜಿಎಫ್ ನಗರಸಭೆ ಆಯುಕ್ತರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳದೆ ಹೋದಲ್ಲಿ ಮುಂದೆ ಆಗಬಹುದಾದ ಅನಾಹುತಗಳಿಗೆ ಅವರೇ ಕಾರಣಕರ್ತರಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂಬುದು ಕೆಜಿಎಫ್ ನಾಗರಿಕರ ಎಚ್ಚರಿಕೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement