ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಆಧಾರ್ ಕಾರ್ಡಿಗೆ ಪೈಪೋಟಿ

Srinivasa Murthy VN
Updated On : 27 Jul 2013, 12:29 pm

ಕ.ಪ್ರ.ವಾರ್ತೆ ಕೋಲಾರ ಜು. 26
ಸರ್ಕಾರದ ಸವಲತ್ತುಗಳನ್ನು ಪಡೆಯಲು ಪ್ರಮುಖ ದಾಖಲೆಯಾಗಿರುವ ಆಧಾರ್ ಕಾರ್ಡಿಗಾಗಿ ಅರ್ಜಿ ಸಲ್ಲಿಸಲು ಪೈಪೋಟಿ ಉಂಟಾಗಿದೆ.
ಆಧಾರ್ ಕಾರ್ಡು ದೇಶವ್ಯಾಪಿಯ ಗುರುತಿನ ಚೀಟಿಯು ಆಗಿರುವುದರಿಂದ ಸಾರ್ವಜನಿಕರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಆಸಕ್ತಿ ತೋರಿದ್ದಾರೆ.
ಇಷ್ಟು ದಿನ ಅಂಚೆ ಕಚೇರಿಯಲ್ಲಿ ಆಧಾರ್ಕಾರ್ಡಿಗೆ ಅರ್ಜಿ ಸಲ್ಲಿಸಲಾಗುತ್ತಿತ್ತು. ಜನತೆಯ ಬೇಡಿಕೆ ಹಾಗೂ ಕಾರ್ಯದೊತ್ತಡ ಗಮನಿಸಿ ಸರ್ಕಾರ ಖಾಸಗಿ ಏಜೆನ್ಸಿಗಳ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿರುವುದರಿಂದ ನಗರದ ಜನತೆ ಅರ್ಜಿ ಸಲ್ಲಿಸಲು ಪೈಪೋಟಿ ನಡೆಸಿದ್ದಾರೆ.
ನಗರದ ಕಠಾರಿ ಪಾಳ್ಯದ ಬಿಂಧು ಮಾಳ್ಯಂ ಕಲ್ಯಾಣ ಮಂದಿರದಲ್ಲಿ ಆಧಾರ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಸೇವಾ ತಾತ್ಕಾಲಿಕ ಸೇವಾ ಕೇಂದ್ರವನ್ನು ತೆರೆಯಲಾಗಿದ್ದು ಸಾರ್ವಜನಿಕರು ವಾಸ ಸ್ಥಳದ ವಿಳಾಸ, ವಯಸ್ಸಿನ ದೃಢಿಕರಣ ಪತ್ರ, ಪಾನ್ ಕಾರ್ಡು, ಪಡಿತರ ಚೀಟಿಯ ಜೆರಾಕ್ಸ್ ಪ್ರತ್ರಿಗಳನ್ನು ಸಲ್ಲಿಸಲು ನಾ ಮುಂದು ನೀ ಮುಂದು ಎಂದು ಸರದಿ ಸಾಲಿನಲ್ಲಿ ನಿಲ್ಲುವುದಕ್ಕೆ ಪ್ರಯತ್ನಿಸಿದಾಗ ನೂಕುನುಗ್ಗಲು ಉಂಟಾಗಿದ್ದರಿಂದ ಜನತೆಯನ್ನು ನಿಯಂತ್ರಿಸಲು ಖಾಸಗಿ ಏಜೆನ್ಸಿಯ ಕಡೆಯವರು ಪರದಾಡಿದರು.
ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಜನರು ಗಂಟೆಗಟ್ಟಲೆ ಕಾದು ಅರ್ಜಿಗಳನ್ನು ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement