ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕೋಚಿಮುಲ್ ಅಭಿವೃದ್ಧಿಗೆ 65 ಕೋಟಿ ಬಿಡುಗಡೆ ಮಾಡಲು ಸಿಎಂಗೆ ಮನವಿ

Srinivasa Murthy VN
Updated On : 27 Jul 2013, 12:32 pm

ಕೋಲಾರ:  ಅವಿಭಜಿತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಹಾಲು ಉತ್ಪಾದಕರ ಜೀವನಾಡಿಯಾಗಿರುವ ಕೋಚಿಮುಲ್ ಅಭಿವೃದ್ಧಿಗೆ ತಕ್ಷಣ 56 ಕೋಟಿ ರು.ಅನುದಾನ ಬಿಡುಗಡೆ ಮಾಡುವಂತೆ ಆಡಳಿತ ಮಂಡಳಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದ್ದಾರೆ.
ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಮಂಜುನಾಥ ರೆಡ್ಡಿ ಅವರ ನೇತೃತ್ವದಲ್ಲಿ ಒಕ್ಕೂಟದ ನಿರ್ದೇಶಕರು ಮುಖ್ಯಮಂತ್ರಿ ಹಾಗೂ ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಶಾಸಕರೂ ಆದ ವಿಧಾನಸಭೆಯ ಉಪಾಧ್ಯಕ್ಷ ಶಿವಶಂಕರರೆಡ್ಡಿ ಅವರಿಗೆ ಪ್ರತ್ಯೇಕವಾಗಿ ಭೇಟಿಯಾಗಿ ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಕ್ರಾಸ್ ಬಳಿ ಸ್ಥಾಪಿಸಲು ಉದ್ದೇಶಿಸಿರುವ ಮೆರಾಡೇರಿ ಯೋಜನೆಗೆ 30 ಕೋಟಿ ಹಾಗೂ ಹಾಲಿನ ಪುಡಿ ತಯಾರಿಕಾ ಘಟಕಕ್ಕೆ 35 ಕೋಟಿ ಅನುದಾನ ನೀಡುವಂತೆ ಮನವಿ ಮಾಡಿದರು.
ಮುಖ್ಯಮಂತ್ರಿ ಹಾಗೂ ವಿಧಾನಸಭೆಯ ಉಪಾಧ್ಯಕ್ಷರು ಒಕ್ಕೂಟದ ಆಡಳಿತ ಮಂಡಳಿ ತೃಪ್ತಿಪಡುವ ರೀತಿಯಲ್ಲಿ ಭರವಸೆ ನೀಡಿದ್ದಾರೆಂದು ಒಕ್ಕೂಟದ ನಿರ್ವಾಹಕ ನಿರ್ದೇಶಕ ಎನ್. ಹನುಮೇಶ್ ತಿಳಿಸಿದ್ದಾರೆ.
ಅಧ್ಯಕ್ಷರ ನೇತೃತ್ವದ ನಿಯೋಗದಲ್ಲಿ ಒಕ್ಕೂಟದ ನಿರ್ದೇಶಕರಾದ ಕೆ. ಗುಡಿಯಪ್ಪ, ಕೆ.ವಿ. ನಾಗರಾಜು, ಜಯಸಿಂಹಕೃಷ್ಣಪ್ಪ, ಕೆ.ಎನ್. ನಾಗರಾಜು, ಎ.ವಿ. ಪ್ರಸನ್ನ, ಸಿ. ಮುನಿವೆಂಕಟಪ್ಪ, ಮದ್ದೇರಿ ಎಸ್. ರಾಮೇಗೌಡ , ಎಸ್.ವಿ. ಸುಬ್ಬಾರೆಡ್ಡಿ, ಎನ್.ಅಶ್ವಥಪ್ಪ ಹಾಗೂ ಗಂಗಮ್ಮ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement