ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬೋರ್ವೆಲ್ ಕೊರೆಸಿ ಒಂದೇ ದಿನದಲ್ಲೇ ನೀರು ಪೂರೈಕೆ

Srinivasa Murthy VN
Updated On : 27 Jul 2013, 12:32 pm

ಟೇಕಲ್:  ಇಲ್ಲಿನ ಕೆ.ಜಿ.ಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಊರಗುರ್ಕಿ ಗ್ರಾಮದಲ್ಲಿ ಶಾಸಕರ ಸೂಚನೆ ಮೇರೆಗೆ ತಕ್ಷಣ ತಾ.ಪಂ. ಮಾಜಿ ಅಧ್ಯಕ್ಷ ಕೆ.ವೈ. ನಂಜೇಗೌಡರ ನೇತೃತ್ವದಲ್ಲಿ ಗುರುವಾರ ಕೊಳವೆಬಾವಿ ಕೊರೆಸಿ, ಮೋಟಾರ್ ಪಂಪ್ ಅಳವಡಿಸಿ ನೀರಿನ ಸೌಲಭ್ಯ ಕಲ್ಪಿಸಲಾಯಿತು.
ಸುಮಾರು 2 ವರ್ಷದಿಂದ ಕುಡಿಯುವ ನೀರಿಗೆ ತೀವ್ರ ತೊಂದರೆಯಾಗಿತ್ತು. ಈ ಹಿಂದೆ 2 ಬಾರಿ ಕೊಳವೆಬಾವಿ ಕೊರೆಸಿದರೂ ಪ್ರಯೋಜನವಾಗಿರಲಿಲ್ಲ. ಇದರಿಂದಾಗಿ ಕೊನೆಗೆ ಗ್ರಾ.ಪಂ. ವತಿಯಿಂದ ಟ್ಯಾಂಕರ್ ಮೂಲಕ ನೀರು ತಲುಪಿಸಲಾಗುತ್ತಿತ್ತು. ಇದನ್ನು ಮನಗೊಂಡ ಟೇಕಲ್ ಜಿ.ಪಂ. ಸದಸ್ಯೆ ರತ್ನಮ್ಮ ನಂಜೇಗೌಡರು ಶಾಸಕ ಮಂಜುನಾಥಗೌಡ ಅವರ ಬಳಿ ಜನತೆ ಸಮಸ್ಯೆ ಬಗ್ಗೆ ವಿಷಯ ಪ್ರಸ್ತಾಪಿಸಿದ್ದರು.
ಈ ಹಿನ್ನೆಲೆಯಲ್ಲಿ ಕೈಗೊಂಡ ಬೋರ್ ಕೊರೆಸುವ ಕಾರ್ಯ ಯಶಸ್ವಿಯಾಗಿ, ಉತ್ತಮ ನೀರು ಸಿಕ್ಕಿತು. ಒಂದೇ ದಿನದಲ್ಲಿ ಪಂಪು ಮೋಟಾರ್ ಅಳವಡಿಸಲಾಗಿ ಊರಗುರ್ಕಿ ಗ್ರಾಮದಲ್ಲಿ ಜನತೆಗೆ ಆನಂದಕ್ಕೆ ಪಾರವೆ ಇಲ್ಲದಂತಾಗಿದೆ. ಸುಮಾರು ತಿಂಗಳುಗಳಿಂದ ನೀರಿಲ್ಲದೆ ಪರಿತಪಿಸುತ್ತಿದ್ದ ಗ್ರಾಮದ ಜನತೆ ಶಾಸಕ ಮಂಜುನಾಥಗೌಡ ಟೇಕಲ್ ಜಿಪಂ ವ್ಯಾಪ್ತಿಯ ಸದಸ್ಯೆ ರತ್ನಮ್ಮನಂಜೇಗೌಡ, ಮಾಜಿ ತಾಪಂ ಅಧ್ಯಕ್ಷ ಕೆ.ವೈ. ನಂಜೇಗೌಡರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಗ್ರಾಮಕ್ಕೆ ಭೇಟಿ ನೀಡಿದ ಕೆ.ವೈ. ನಂಜೇಗೌಡರು ಮಾತನಾಡಿ, ಶಾಸಕರ ಸೂಚನೆಯಂತೆ ಮಾಲೂರು ತಾಲೂಕಿನಲ್ಲಿ ಅವರ ಶಾಸಕರಾದ ಮೇಲೆ ಕುಡಿಯುವ ನೀರು ಸಮಸ್ಯೆ ಇರುವ 90ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕೊಳವೆಬಾವಿ ಕೊರೆಸಿದ್ದು 60 ಕೊಳವೆ ಬಾವಿಗಳಲ್ಲಿ ನೀರು ಸಿಕ್ಕಿದ್ದು ಅದಕ್ಕೆ ಪಂಪು ಮೋಟಾರ್ ಅಳವಡಿಸಿಕೊಡಲಾಗುತ್ತಿದೆ ಎಂದರು.
ಕುಡಿಯುವ ನೀರಿನ ಸಮಸ್ಯೆಯಿರುವ ಇನ್ನೂ ಕೆಲವು ಗ್ರಾಮಗಳಿಗೆ ಹಂತ ಹಂತವಾಗಿ ಸಮಸ್ಯೆ ಪರಿಹರಿಸುವುದಾಗಿ ತಿಳಿಸಿದರು.
ಈ ಸಂದರ್ಭ ಕೆ.ಜಿ.ಹಳ್ಳಿ ಗ್ರಾ.ಪಂ. ಪಿಡಿಒ ಎಚ್.ಜಿ. ಗೋವಿಂದೆಗೌಡ, ಮುಖಂಡರಾದ ಶ್ಯಾಮಣ್ಣ ಮತ್ತು ಊರಗುರ್ಕಿ ಗ್ರಾಮಸ್ಥರು ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement