ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬ್ಯಾಂಕ್ ಸೌಲಭ್ಯದಿಂದ ಆರ್ಥಿಕ ಪ್ರಗತಿ ಸಾಧಿಸಿ

Srinivasa Murthy VN
Updated On : 27 Jul 2013, 12:33 pm

ಎಸ್ಬಿಎಂ ಕೃಷಿ ಸಾಲ ಮೇಳದಲ್ಲಿ ರೈತರಿಗೆ ದೀಪುಕುಮಾರ್ ಸಲಹೆ
ಚಿಕ್ಕಬಳ್ಳಾಪುರ: ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಿರುವ ಸ್ಟೇಟ್ಬ್ಯಾಂಕ್ ಆಫ್ ಮೈಸೂರು ಜನಪರ ಅನೇಕ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಬ್ಯಾಂಕ್ ನೀಡುತ್ತಿರುವ ಕೃಷಿ ಸಾಲವನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಬ್ಯಾಂಕಿನ ಡೆಪ್ಯೂಟಿ ಜನರಲ್ ಮ್ಯಾನೇಜರ್ ದೀಪುಕುಮಾರ್ ತಿಳಿಸಿದರು.
ನಗರದ ಸ್ಟೇಟ್ಬ್ಯಾಂಕ್ ಆಫ್ ಮೈಸೂರಿನಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಕೃಷಿ ಸಾಲ ಮೇಳ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ರೈತ ಸಂಗಾತಿ ಯೋಜನೆಯ ಮೂಲಕ ಹಣಕಾಸು ಸಂಸ್ಥೆಗಳನ್ನು ಹೊರತು ಪಡಿಸಿ ಹೊರಗಡೆಯ ಲೇವಾದೇವಿಗಾರರಿಂದ ದುಬಾರಿ ಬಡ್ಡಿಗೆ ಸಾಲ ಪಡೆದಿರುವ ರೈತರಿಗೆ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ, ರೈತರ ಎಲ್ಲಾ ಕೃಷಿ ಉತ್ಪಾದನಾ ಅಗತ್ಯಗಳನ್ನು ಪೂರೈಸಲು ವಾರ್ಷಿಕ ಕೃಷಿ ಸಂಬಂಧಿತ ಖರ್ಚುಗಳಲ್ಲದೆ ವೈದ್ಯಕೀಯ, ವಿದ್ಯಾಭ್ಯಾಸ, ವಿವಾಹ, ಹಬ್ಬ ಹರಿದಿನ ಮತ್ತು ಅನಿರೀಕ್ಷಿತ ಖರ್ಚುಗಳಿಗೆ ಮೂರು ಲಕ್ಷಗಳವರೆಗೆ ಶೇ.7ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ, 3 ವರ್ಷಗಳ ತೃಪ್ತಿಕರ ಬ್ಯಾಂಕ್ ವಹಿವಾಟು ಹೊಂದಿರುವ ರೈತರಿಗಾಗಿ ವಾರ್ಷಿಕ ವರಮಾನದ ಐದು ಪಟ್ಟು ಅಥವಾ ಅಡಮಾನು ಜಮೀನಿನ ಶೇ.50ರ ಮೌಲ್ಯದಲ್ಲಿ ಯಾವುದು ಕಡಿಮೆಯೋ ಆ ಮೊತ್ತ ಗರಿಷ್ಠ 10 ಲಕ್ಷ ರು. ವರೆಗೆ ಸಾಲ ಸೌಲಭ್ಯ ನೀಡಲಾಗುತ್ತಿದೆ. ಅಲ್ಲದೇ ಕೃಷಿ ಕಾರ್ಯಗಳ ಮೇಲ್ವಿಚಾರಣೆ ಮತ್ತು ನಿರ್ವಹಣೆಯ ಉದ್ದೇಶಕ್ಕಾಗಿ ವಿವಿಧ ವಾಹನಗಳ ಖರೀದಿಗೆ, ತತ್ಕ್ಷಣದಿಂದ ಕೃಷಿ ಅಗತ್ಯಗಳ ಈಡೇರಿಕೆಗೆ ಚಿನ್ನಾಭರಣಗಳ ಮೇಲೆ ಸಾಲ ಸೌಲಭ್ಯ ಸೇರಿದಂತೆ ಗ್ರಾಮೀಣ ಭಂಡಾರ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ಸಾಲ ಸೌಲಭ್ಯವನ್ನು ನೀಡಲಾಗುತ್ತಿದೆ. ಈ ಸೌಲಭ್ಯಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು. ಈ ಮೂಲಕ ಕೃಷಿ ಚಟುವಟಿಕೆಗಳಲ್ಲಿ ಪ್ರಗತಿಯನ್ನು ಸಾಧಿಸಿ ಆರ್ಥಿಕವಾಗಿ ಸಬಲರಾಗಬೇಕೆಂದರು.
ಚಿಂತಾಮಣಿಯಲ್ಲಿ 29ಕ್ಕೆ: ಚಿಂತಾಮಣಿ ಶಾಖೆಯಲ್ಲಿ ಜುಲೈ 29 ರಂದು, ಶಿಡ್ಲಘಟ್ಟ ಶಾಖೆಯಲ್ಲಿ ಜುಲೈ 31 ರಂದು, ಗೌರಿಬಿದನೂರು ಶಾಖೆಯಲ್ಲಿ ಆಗಸ್ಟ್ 3 ರಂದು ಹಾಗೂ ಬಾಗೇಪಲ್ಲಿ ಶಾಖೆಯಲ್ಲಿ ಆಗಸ್ಟ್ 5 ರಂದು ಕೃಷಿ ಸಾಲ ಮೇಳವನ್ನು ಆಯೋಜಿಸಲಾಗಿದೆ ಎಂದ ಅವರು, ಕೃಷಿ ಸಾಲ ಮೇಳದಲ್ಲಿ ಸಾಲ ಮಂಜೂರಾತಿ ಪತ್ರ ಹಾಗೂ ತಾತ್ವಿಕ ಸಾಲ ಮಂಜೂರಾತಿ ಪತ್ರವನ್ನು ನೀಡಲಾಗುತ್ತದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬ್ಯಾಂಕಿನ ಎಜಿಎಂ ವಾಸು, ಗುಡಿಬಂಡೆ, ಚಿಕ್ಕಬಳ್ಳಾಪುರ, ಮುದ್ದೇನಹಳ್ಳಿ ಶಾಖೆಯ ವ್ಯವಸ್ಥಾಪಕರು ಸೇರಿದಂತೆ ಮುಂತಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement