ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಶ್ರೀನಿವಾಸಪುರ: ಕಳ್ಳರಿಬ್ಬರ ಬಂಧನ: ವಶ

Srinivasa Murthy VN
Updated On : 27 Jul 2013, 12:29 pm

ಶ್ರೀನಿವಾಸಪುರ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಳವು ಮಾಡಿದ್ದ ಇಬ್ಬರನ್ನು ಬಂಧಿಸಿ, 50000 ನಗದು, 189 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೋಲಾರ ತಾಲೂಕಿನ ನರಸಾಪುರದ ಶಿವ ಅಲಿಯಾಸ್ ಶಿವರಾಜ್ ಮತ್ತು ಮುನಿಚಂದ್ರ ಬಂಧಿತ ಆರೋಪಿಗಳು. ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ವ್ಯಾಪಿಯ ವಳಗೇರನಹಳ್ಳಿ, ಪಾತಪಲ್ಲಿ, ಬಂಡಪಲ್ಲಿ, ತಾಡಿಗೋಳ್ ಹಾಗೂ ಸಿ.ಹೊಸೂರು ಮತ್ತು ಗೌನಿಪಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯ ತಾಡಿಗೋಳ್ ಕ್ರಾಸ್ನಲ್ಲಿ ಒಟ್ಟು 6 ಕಳವು  ಪ್ರಕರಣ ನಡೆಸಿದ್ದರು.

ನಾಳೆ ಒಕ್ಕಲಿಗ ಸಮುದಾಯದ ಸಭೆ
ಕ.ಪ್ರ.ವಾರ್ತೆ ಕೋಲಾರ ಜು. 26
ಒಕ್ಕಲಿಗ ಸಮುದಾಯದ ಮಹತ್ವದ ಸಭೆಯನ್ನು ಇದೇ ಜುಲೈ 28 ರ ಭಾನುವಾರ ಬೆಳಗ್ಗೆ 10 ಗಂಟೆಗೆ ನಗರದ ಕೋಟೆಯಲ್ಲಿರುವ ಒಕ್ಕಲಿಗರ ವಿದ್ಯಾರ್ಥಿ ನಿಲಯದಲ್ಲಿ ಹಮ್ಮಿಕೊಳ್ಳಲಾಗಿದೆ. ಒಕ್ಕಲಿಗ ಜನಾಂಗದ ಕುಂದು ಕೊರತೆಗಳ ಬಗ್ಗೆ  ಚರ್ಚಿಸಿ ಅದನ್ನು ನಿವಾರಿಸುವ ಸಲುವಾಗಿ, ಮುಂದಿನ ಕಾರ್ಯಕ್ರಮಗಳನ್ನು ರೂಪಿಸಿಸಲು ಈ ಸಭೆಯನ್ನು ಆಯೋಜಿಸಲಾಗಿದೆ. ಜಿಲ್ಲಾದ್ಯಂತವಿರುವ ಎಲ್ಲಾ ಒಕ್ಕಲಿಗ ಸಂಘ ಸಂಸ್ಥೆಗಳು ಪದಾಧಿಕಾರಿಗಳು ಹಾಗೂ ಮುಖಂಡರು, ಜನಪ್ರತಿನಿಧಿಗಳು ಮತ್ತು ಕುಲಬಾಂದವರು ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಲು ಸಂಘದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement