'ಜಾಬ್ ಕಾರ್ಡ್ ದುರುಪಯೋಗವಾಗದಿರಲಿ'
ಶ್ರೀನಿವಾಸಪುರ: ನಕಲಿ ರೇಷನ್ ಕಾರ್ಡ್‌ಗಳನ್ನು ನಿಯಂತ್ರಣ ಮಾಡಿ ಅಕ್ರಮದ ಕಾರ್ಡ್‌ಗಳನ್ನು ರದ್ದು ಮಾಡುವಂತೆ ಮತ್ತು ಎಂಜಿಎನ್‌ಆರ್‌ಇಜಿಎ ಯೋಜನೆಯಲ್ಲಿ ಜಾಬ್ ಕಾರ್ಡ್‌ಗಳು ದುರುಪಯೋಗವಾದದಂತೆ ಎಚ್ಚರಿಕೆ ವಹಿಸಬೇಕೆಂದು ಶಾಸಕ ಕೆ.ಆರ್. ರಮೇಶಕುಮಾರ್ ಅಧಿಕಾರಿಗಳಿಗೆ ತಾಕೀತು ನೀಡಿದರು.
ಪಟ್ಟಣದ ಟಿಎಪಿಎಂಎಸ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಅನ್ನ ಭಾಗ್ಯ ಯೋಜನೆಯಡಿ ಅಕ್ಕಿ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನ್ಯಾಯಬೆಲೆ ಅಂಗಡಿಗಳನ್ನು ನಡೆಸುತ್ತಿರುವಂತಹ ಮಾಲೀಕರು ಬಡವರಿಗಾಗಿ ನೀಡವಾಗುತ್ತಿರುವ 30 ಕೆಜಿ ಅಕ್ಕಿ ತೂಕದಲ್ಲಿ ಹೆಚ್ಚು ಕಡಿಮೆ ಮಾಡಬಾರದು ಎಂದು ಎಚ್ಚರಿಕೆ ನೀಡಿದರು.
ಬಿಪಿಎಲ್ ಕಾರ್ಡ್‌ದಾರರಂತೆ ಎಪಿಎಲ್ ಕಾರ್ಡ್‌ದಾರರಿಗೂ ಸಹ ಅಕ್ಕಿ ಕೊಡುವ ಬಗ್ಗೆ ಸರ್ಕಾರ ತೀರ್ಮಾನಿಸಿದೆ. ಗ್ಯಾಸ್ ಸಂಪರ್ಕ ಹೊಂದಿರುವಂತೆ ಎಲ್ಲಾ ಕಾರ್ಡ್‌ದಾರರಿಗೂ ಒಂದು ಅಥವಾ ಎರಡು ಲೀಟರ್ ಸೀಮೆಎಣ್ಣೆ ನೀಡುವ ಬಗ್ಗೆ ಆಹಾರ ಸಚಿವರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ್, ದಿಂಬಾಲ ನಾರಾಯಣಸ್ವಾಮಿ, ಬಿ.ವೆಂಕಟರೆಡ್ಡಿ ಟಿಎಪಿಎಂಎಸ್ ಅಧ್ಯಕ್ಷ ಸಿ.ಎನ್. ಮೋಹನ್‌ಕುಮಾರ್, ಮಾಜಿ ಅಧ್ಯಕ್ಷ ವೆಂಕಟರೆಡ್ಡಿ, ಕೆ.ಎಸ್. ರೆಡ್ಡೆಪ್ಪ, ಕೆ.ಕೆ.ಮಂಜು, ತಹಸೀಲ್ದಾರರರಾದ ಎಚ್.ಜಯ, ಕಾರ್ಯದರ್ಶಿ ನಾಗರಾಜ್ ಉಪಸ್ಥಿತರಿದ್ದರು.
ಪಿಎಲ್‌ಡಿ ಬ್ಯಾಂಕ್ ಸತೀಶ್ ಪ್ರಾರ್ಥನೆ ಮಾಡಿದರು. ಆಟೋ ಜಗದೀಶ್ ಸ್ವಾಗತಿಸಿ ವಂದಿಸಿದರು.