'ಪತ್ರಿಕಾರಂಗ ಸಮಾಜದ ಸ್ವಾಸ್ಥ್ಯ ಕಾಪಾಡಲಿ'
ಗೌರಿಬಿದನೂರು: ಪ್ರಜಾಪ್ರಭುತ್ವದ ನಾಲ್ಕು ಅಂಗಗಳಲ್ಲಿ ಪತ್ರಿಕಾ ರಂಗವೂ ಒಂದು. ಆದರೆ, ಪತ್ರಿಕಾ ರಂಗವು ದಾರಿತಪ್ಪಿದಲ್ಲಿ ಸಮಾಜದ ಆರೋಗ್ಯವೇ ಕೆಡುತ್ತದೆ ಎಂದು ರಾಜ್ಯ ವಿಧಾಸಭೆ ಉಪಸಭಾಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ ತಿಳಿಸಿದರು.
ಪಟ್ಟಣದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಮತ್ತು ಉಪಸಭಾಧ್ಯಕ್ಷರಾಗಿ ಇತ್ತೀಚೆಗೆ ಅಧಿಕಾರ ಸ್ವೀಕರಿಸಿದ ಹಿನ್ನೆಲೆ ಹಮ್ಮಿಕೊಂಡಿದ್ದ ಅಭಿನಂದನೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅಳರು ಮಾತನಾಡಿದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಯರಾಂ ಮಾತನಾಡಿ, ಪತ್ರಿಕಾ ರಂಗವೂ ಉದ್ಯಮಿಗಳ ಹಿಡಿತಕ್ಕೊಳಗಾಗುತ್ತಿದೆ. ವರದಿಗಾರಿಕೆಯಲ್ಲಿ ಪೈಪೋಟಿ ಇದೆ. ಆದರೆ, ನಕಲಿ ಪತ್ರಕರ್ತರಿಂದಾಗಿ ಪೀತಪತ್ರಿಕೋದ್ಯಮ ಹೆಚ್ಚುತ್ತಿದೆ. ಕಾರ್ಯಕರ್ತರ ಪತ್ರಕರ್ತರು ಈ ದೃಷ್ಟಿಯಿಂದ ಎಚ್ಚರಿಕೆ ವಹಿಸಿ ಕರ್ತವ್ಯ ನಿರ್ವಹಿಸಬೇಕು ಎಂದರು.
ತಾಲೂಕು ದಂಡಾಧಿಕಾರಿ ಹಾಗೂ ತಹಸೀಲ್ದಾರ್ ಡಾ.ಭಾಸ್ಕರ್, ಸಂಘದ ಅಧ್ಯಕ್ಷ ದೇವಿ ಮಂಜುನಾಥ್, ವಿ.ಡಿ.ಗಣೇಶ್ ಮಾತನಾಡಿದರು.
ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಚೀ. ವೀರಶೇಖರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿಜಯಲಕ್ಷ್ಮಿ ಮತ್ತು ಲಕ್ಷ್ಮಿ ಪ್ರಾರ್ಥಿಸಿದರು. ಪಠಾಣ್ ಸೈಫುಲ್ಲಾ ನಿರೂಪಿಸಿದರು. ಎಚ್.ಆರ್. ವೆಂಕಟರಾವ್ ಸ್ವಾಗತಿಸಿ, ವಂದಿಸಿದರು.