ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬಸ್ ಕಂಡಕ್ಟರ್ ಮೇಲೆ ಹಲ್ಲೆ: ಗ್ರಾಮಸ್ಥರ ಪ್ರತಿಭಟನೆ

Srinivasa Murthy VN
Updated On : 28 Jul 2013, 1:02 am

ಚಿಂತಾಮಣಿ:  ಕೆಎಸ್‌ಆರ್‌ಟಿಸಿ ಕಾರ್ಯನಿರತ ಬಸ್ಸು ನಿರ್ವಾಹಕನ ಮೇಲೆ ಖಾಸಗಿ ವಾಹನ ಮಾಲೀಕನೊಬ್ಬ ಅವಾಚ್ಯ  ಶಬ್ಧಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕಿ ಹಲ್ಲೆ ಮಾಡಿದ ಆರೋಪಿಯನ್ನು ಬಂಧಿಸಲು ಶನಿವಾರ ಸುಜ್ಜನಹಳ್ಳಿ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಪಟ್ಟಣದಿಂದ ದೊಡ್ಡಹಳ್ಳಿ ಮಾರ್ಗವಾಗಿ ಕೆಂಪು ಬಸ್ಸಿನ ನಿರ್ವಾಹಕ ರವಿ ಕಾರ್ಯನಿರತ ಸರ್ಕಾರಿ ಸೇವೆಯಲ್ಲಿ ಇರುವಾಗ ಕೆಎಸ್‌ಆರ್‌ಟಿಸಿ ಬಸ್ಸು ವೇಳೆಯಲ್ಲಿಯೇ ಟಾಟಾ ಎಸಿ ಹಾಗೂ ತ್ರಿಚಕ್ರ ವಾಹನಗಳನ್ನು ಈ ಮಾರ್ಗದಲ್ಲಿ ಅಕ್ರಮವಾಗಿ ಪ್ರಯಾಣಿಕರನ್ನು ತುಂಬಿಸಿಕೊಂಡು ಹೋಗುತ್ತಿದ್ದನ್ನು ಕಳೆದ ಹಲವು ದಿನಗಳ ಹಿಂದೆ ನಿರ್ವಾಹಕ ಸಂಖ್ಯೆ.2770 ರವಿಗೂ ಹಾಗೂ ಮಾಲೀಕ ನಟರಾಜಗೂ ಮಾತು ಮಾತು ಬೆಳೆದಿತ್ತು ಎನ್ನಲಾಗಿದೆ.
ಶನಿವಾರ ಮಧ್ಯಾಹ್ನ ಬಸ್ಸಿನಲ್ಲಿ ಬರುತ್ತಿದ್ದ ಪ್ರಯಾಣಿಕರನ್ನು ಹಾಗೂ ವಿದ್ಯಾರ್ಥಿಗಳನ್ನು ಬಸ್ಸಿನಲ್ಲಿ ಮರಳಿ ಸ್ವಗ್ರಾಮಗಳಿಗೆ ಹೋಗುತ್ತಿರುವಾಗ ಖಾಸಗಿ ವಾಹನಗಳ ಮಾಲೀಕ ನಟರಾಜ್ ಸುಜ್ಜನಹಳ್ಳಿ ಗ್ರಾಮದಲ್ಲಿ ತನ್ನ ದ್ವಿಚಕ್ರ ವಾಹನ ಬಸ್ಸಿಗೆ ಅಡ್ಡಲಾಗಿ ನಿಲ್ಲಿಸಿ ಸೇವೆಯಲ್ಲಿದ್ದ ನಿರ್ವಾಹಕ ರವಿ ಮೇಲೆ ವಿನಾಕಾರಣ ಅವಾಚ್ಯ ಶಬ್ಧಗಳಿಂದ ಬೈದು, ಪ್ರಾಣ ಬೆದರಿಕೆ ಹಾಕಿ ಗೂಸ ನೀಡಿದ ಎನ್ನಲಾಗಿದೆ. ಇದರಿಂದ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ಹಲ್ಲೆ ಮಾಡಿದ ಆರೋಪಿಯ ಧೋರಣೆ ಖಂಡಿಸಿ ನಂತರ ಬಸ್‌ನಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಿಸಿ ರಸ್ತೆ ತಡೆ ನಡೆಸಲು ಮುಂದಾದರು.
ಗ್ರಾಮಸ್ಥರಿಂದ ರಸ್ತೆ ತಡೆ:  ಸುದ್ದಿ ತಿಳಿದ ನಂದನಹೊಸಹಳ್ಳಿ, ದೊಡ್ಡಹಳ್ಳಿ, ಕುರುಮಾರ್ಲಹಳ್ಳಿ, ಕೋಟಗಲ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ವಿನಾಕಾರಣ ಖಾಸಗಿ ವಾಹನಗಳ ಮಾಲೀಕ ನಟರಾಜ್ ದೌರ್ಜನ್ಯದಿಂದ ಸೇವೆಯಲ್ಲಿದ್ದ ನಿರ್ವಾಹಕನ ಮೇಲೆ ಹಲ್ಲೆ ಮಾಡಲಾಗಿದೆ. ಆರೋಪಿಯನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ರಸ್ತೆ ಬಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಸಾರಿಗೆ ಘಟಕದ ವ್ಯವಸ್ಥಾಪಕ ಶಾಂತಕುಮಾರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿ, ಆರೋಪಿ ಮೇಲೆ ಕಾನೂನು ಕ್ರಮ ಜರುಗಿಸಲು ಗ್ರಾಮಾಂತರ ಠಾಣೆಯ ಸಹಾಯಕ ಸಬ್‌ಇನ್‌ಸ್ಪೆಕ್ಟರ್ ಶಂಕರರೆಡ್ಡಿ ಅವರಿಗೆ ದೂರು ನೀಡಿದರು.
ನಂತರ ಪೊಲೀಸರು ಗ್ರಾಮಸ್ಥರಿಗೆ ಸಮಾಧಾನಪಡಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದೆಂದು ಭರವಸೆ ನೀಡಿದರು. ನಂತರ ಪ್ರತಿಭಟನೆಯನ್ನು ಕೈಬಿಡಲಾಯಿತು.
ಮುನಿವೆಂಕಟರೆಡ್ಡಿ, ವೆಂಕಟಪತಿ, ಅಶ್ವತ್ಥರೆಡ್ಡಿ, ಮುನಿವೆಂಕಟಪ್ಪ, ಮುನಿರಾಜು, ಮಂಜು, ಲಕ್ಷ್ಮಣ ರೆಡ್ಡಿ,ನಟರಾಜ್, ಹನುಮಂತ, ವೆಂಕಟರಾಯಪ್ಪ, ಸೀತಾರಾಮರೆಡ್ಡಿ ಸೇರಿದಂತೆ ವಿದ್ಯಾರ್ಥಿಗಳು ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement