ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸಂಘಟನೆಗೆ ಒತ್ತು ನೀಡಿ: ಶ್ರೀನಿವಾಸ

Srinivasa Murthy VN
Updated On : 28 Jul 2013, 1:04 am

ಮಾಲೂರು:  ಸಂಘಟನೆ ಶಕ್ತಿಯುತವಾಗಿ ಬೆಳೆದಾಗ ಮಾತ್ರ ಸಮಸ್ಯೆಗಳು ತಾನಾಗಿಯೇ ಪರಿಹಾರವಾಗಲಿದೆ ಎಂದು ಬಡ್ತಿ ಮುಖ್ಯಶಿಕ್ಷಕ ಹಾಗೂ ಪದವೀಧರೇತರ ಮುಖ್ಯ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಆರ್.ಶ್ರೀನಿವಾಸ್ ಹೇಳಿದರು.
ತಾಲೂಕು ಸಂಘಟನೆಯ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದ ಅವರು, ಸಂಘದ ಭವಿಷ್ಯ ನಿಂತಿರುವುದು ಸಂಘಟನೆ ಶಕ್ತಿ ಮೇಲೆ ಎಂದರು.
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಗುಂಡಪ್ಪ ಮಾತನಾಡಿ, ತಾಲೂಕಿನ ನೌಕರರ ಸಮಸ್ಯೆಗಳ ಜತೆಗೆ ದಕ್ಷ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ ತಾಲೂಕಿಗೆ ಹೆಸರು ತರಬೇಕೆಂದರು. ಇದೇ ಸಂದರ್ಭ ಮುಖ್ಯ ಶಿಕ್ಷಕರ ತಾಲೂಕು ಅಧ್ಯಕ್ಷರಾಗಿ ಬಹುದ್ದೂರ್ ಸಾಬ್, ಕಾರ್ಯದರ್ಶಿ ಎಂ.ಪಿ.ರಾಜು, ಉಪಾಧ್ಯಕ್ಷರಾಗಿ ಗುರಪ್ಪ, ಮುನಿತಾಯಮ್ಮ, ಸಹ ಕಾರ್ಯದರ್ಶಿಯಾಗಿ ಸಂಪಂಗಿ ರಾಮಯ್ಯ, ಪ್ರಭಾಕರ್, ಸಂಘಟನಾ ಕಾರ್ಯದರ್ಶಿ ಎಂ.ಸರೋಜಮ್ಮ, ಸಿದ್ಧಪ್ಪ, ಮಹಿಳಾ ಸಂಘಟನಾ ಕಾರ್ಯದರ್ಶಿ ಕೈಸರ್ ಬೇಗಂ, ಸರಸ್ವತಮ್ಮ, ಖಂಜಾಚಿಯಾಗಿ ಕಾಳಪ್ಪ, ಕಾನೂನು ಸಲಹೆಗಾರರಾಗಿ ಅಣ್ಣಪ್ಪ, ಪತ್ರಿಕಾ ಕಾರ್ಯದರ್ಶಿ ರಾಮಚಂದ್ರ ಹಾಗೂ ಗೌರವಾಧ್ಯಕ್ಷರಾಗಿ ನಾಗಪ್ಪ ಅವರನ್ನು ಆಯ್ಕೆ ಮಾಡಲಾಯಿತು. ಸ.ನೌ.ಸಂ. ಮಾಜಿ ಅಧ್ಯಕ್ಷ ಎಂ.ಜಯರಾಮ್, ಎಂ.ಮುನಿನಾರಾಯಣ್, ಟಿ.ಕೆ.ಅಶ್ವತ್ಥ್‌ನಾರಾಯಣ ಗೌಡ, ಎಂ.ಶ್ರೀನಿವಾಸ್, ಎ.ಕೆ.ವೆಂಕಟೇಶ್ ಹಾಗೂ ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ್ ಇದ್ದರು.

ಕಡತೂರು ಶಾಲೆಯಲ್ಲಿ ನೋಟ್‌ಬುಕ್ ವಿತರಣೆ
ಮಾಲೂರು:  ಸದೃಢ ಶೈಕ್ಷಣಿಕಮಟ್ಟ ದೇಶದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವ ಮೂಲಕ ಅವರಲ್ಲಿ ಶೈಕ್ಷಣಿಕ ಅರಿವು ಮೂಡಿಸಬೇಕು ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ  ಜಿ.ಅಶೋಕ್‌ಕುಮಾರ್ ಹೇಳಿದರು.
ತಾಲೂಕಿನ ದೊಡ್ಡ ಕಡತೂರು ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಆಶ್ರಯ ಯೋಜನೆ ಟ್ರಸ್ಟ್ ವತಿಯಿಂದ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳನ್ನು ವಿತರಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಮಕ್ಕಳು ಸರ್ಕಾರ ಹಾಗೂ ದಾನಿಗಳು ನೀಡುವ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಪಂಚಾಯ್ತಿ ಸದಸ್ಯರಾದ ಬಾಬು ರೆಡ್ಡಿ, ಹಿರಿಯ ಮುಖಂಡ ಅರಸಪ್ಪ, ಶಾಲಾ ಮುಖ್ಯೋಪಾಧ್ಯಾಯ ನಿರ್ಮಲ್ ಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement