ಸರ್ಕಾರಿ ಜಾಗದಲ್ಲಿ ಬೆಳೆದಿದ್ದ ಮರಗಳಿಗೆ ಸಂಚಕಾರ
ಕೋಲಾರ: ಸರ್ಕಾರಿ ಜಮೀನಿನಲ್ಲಿ ಬೆಳೆದ ಮರಗಳನ್ನು ಅಕ್ರಮವಾಗಿ ಕಡಿದು ಟ್ರ್ಯಾಕ್ಟರ್ನಲ್ಲಿ ಸಾಗಿಸಲು ಮರಗಳ್ಳರು ಮುಂದಾಗಿದ್ದಾರೆಂದು ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ಅರಣ್ಯ ಇಲಾಖೆಯವರು ಸ್ಥಳಕ್ಕೆ ಬಂದು ಟ್ರ್ಯಾಕ್ಟರ್ನಲ್ಲಿ ತುಂಬಿದ್ದ ಮರಗಳನ್ನು ಮುಟ್ಟುಗೋಲು ಹಾಕಿಕೊಂಡಿರುವ ಘಟನೆ ನಡೆದಿದೆ.
ಕೋಲಾರದ ಹಾರೋಹಳ್ಳಿಯಿಂದ ಛತ್ರಕೋಡಿ ಹಳ್ಳಿಯವರೆಗೆ ಇರುವ ಕಾಲುವೆಯ ಬಳಿ ಇರುವ ಖಾಸಗಿ ಕಾಲೇಜು ಈ ಕೃತ್ಯ ನಡೆದಿದೆ. ಕಾಲುವೆಯಲ್ಲಿ ಬೆಳೆದಿದ್ದ ಮರಗಳನ್ನು ಅಕ್ರಮವಾಗಿ ಕಡಿಯುತ್ತಿರುವ ಬಗ್ಗೆ ಕಳೆದ ಜ.17ರಂದೇ ಸಾರ್ವಜನಿಕರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮರಗಳನ್ನು ಕಡಿಯುವುದನ್ನು ತಪ್ಪಿಸಲು ಆಗಿರಲಿಲ್ಲ. ಶನಿವಾರ ಮತ್ತೆ ಸಾರ್ವಜನಿಕರು ಮರಗಳನ್ನು ಸಾಗಾಣೆ ಮಾಡುತ್ತಿರುವ ಬಗ್ಗೆ ಅರಣ್ಯ ಇಲಾಖೆಯವರಿಗೆ ದೂರು ನೀಡಿದ್ದರಿಂದ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಟ್ರ್ಯಾಕ್ಟರ್ನಲ್ಲಿ ತುಂಬಿದ್ದ ಮರಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಅಧಿಕಾರಿಗಳು ಮರಗಳನ್ನು ಕಡಿದಿರುವವರ ವಿರುದ್ಧ ದೂರು ದಾಖಲಿಸಬೇಕು, ನ್ನುಳಿದ ಮರಗಳನ್ನು ಉಳಿಸಿ ಪರಿಸರ ಸಂರಕ್ಷಣೆ ಮಾಡಬೇಕು ಮತ್ತು ವಶಪಡಿಸಿಕೊಂಡಿರುವ ಮರಗಳನ್ನು ಯಾವುದೇ ಕಾರಣಕ್ಕೂ ಹಿಂತಿರುಗಿಸದಂತೆ ಸ್ಥಳೀಯರಾದ ಮುನಿರಾಮಪ್ಪ, ಸುಮನ್, ಸುನೀಲ್, ಸಂತೋಷ್ ಹಾಗೂ ಇತರರು ಒತ್ತಾಯಿಸಿದ್ದಾರೆ.