ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

' ಗುಣಮಟ್ಟ ಶಿಕ್ಷಣದಿಂದ ಸಮುದಾಯದ ಅಭಿವೃದ್ಧಿ'

Srinivasa Murthy VN
Updated On : 29 Jul 2013, 12:11 pm

ಕ.ಪ್ರ.ವಾರ್ತೆ ಮಾಲೂರು ಜು.28
ಸಮುದಾಯದ ಅಭಿವೃದ್ಧಿ ಗುಣಮಟ್ಟದ ಶಿಕ್ಷಣದಿಂದ ಮಾತ್ರ ಸಾಧ್ಯವಾಗುವುದರಿಂದ ಪೋಷಕರು ತಮ್ಮ ಮಕ್ಕಳನ್ನು ಉನ್ನತ ಶಿಕ್ಷಣ ಪಡೆಯಲು ಉತ್ತೇಜನ ನೀಡಬೇಕು ಎಂದು ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿದರು.
ಅವರು ತಾಲೂಕು ಕುಂಬಾರರ ಸಂಘ ಪಟ್ಟಣದ ಕುಂಭೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಲಾಗಿದ್ದ 2011-12 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ದ್ವೀತಿಯ ಪಿಯುಸಿಯಲ್ಲಿ ಉತ್ತಮ ಅಂಕವನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕುಂಬಾರ ಸಮುದಾಯವು ಮಣ್ಣಿನ ಕಾಯಕ ಮಾಡುತ್ತಿದ್ದು, ಅವರು ಶೈಕ್ಷಣಿಕವಾಗಿ, ರಾಜಕೀಯವಾಗಿ ದೂರವುಳಿದಿದ್ದಾರೆ.ಸಮುದಾಯದ ಮಕ್ಕಳು ಶೈಕ್ಷಣಿಕವಾಗಿ ಅಭಿವೃದ್ಧಿಯಾಗುವ ಜತೆಯಲ್ಲಿ ಸಮುದಾಯದ ಮುಖಂಡರಿಗೆ ರಾಜಕೀಯ ಪ್ರಾತಿನಿಧ್ಯ ಸಿಗಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಉಪ ಚುನಾವಣೆ ನಂತರ ಕುಂಬಾರ ಸಮುದಾಯ ನಿಯೋಗದೂಂದಿಗೆ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಭೇಟಿ ಮಾಡಿ ಕುಂಬಾರ ಜನಾಂಗಕ್ಕೆ ರಾಜಕೀಯವಾಗಿ ಪ್ರಾತಿನಿಧ್ಯ ನೀಡುವಂತೆ ಮನವಿ ಮಾಡುವುದಾಗಿ ತಿಳಿಸಿದರು.
ಕೋಲಾರದ ಕುಂಬಾರರ ವಿದ್ಯಾರ್ಥಿ ನಿಲಯಕ್ಕಾಗಿ ಸಂಸದ ನಿಧಿಯಿಂದ ಈಗಾಗಲೇ 10 ಲಕ್ಷ ರು.ಗಳಲ್ಲಿ 5 ಲಕ್ಷ ರು.ಗಳನ್ನು ನೀಡಲಾಗಿದ್ದು, ಇಲ್ಲಿನ ಪುರಸಭೆ ಕುಂಬಾರ ಸಂಘಕ್ಕೆ ನಿವೇಶನ ನೀಡಿದರೆ ಕಟ್ಟಡ ಕಾಮಗಾರಿಗೆ ಸಹಕಾರ ನೀಡುವುದಾಗಿ ತಿಳಿಸಿದರು.ಸಮುದಾಯ ಮಕ್ಕಳಿಗೆ ನೋಟ್ ಪುಸ್ತಕ, ಬ್ಯಾಗ್ ವಿತರಿಸಲು 25 ಸಾವಿರ ನಗದು ರು.ಗಳನ್ನು ಇದೇ ಸಂಧರ್ಭದಲ್ಲಿ ಕೇಂದ್ರ ಮಂತ್ರಿಗಳು ಸಂಘಟಕರಿಗೆ ನೀಡಿದರು.
ಶಾಸಕ ಮಂಜುನಾಥ್ ಗೌಡ ಮಾತನಾಡಿ ಕುಂಬಾರ ಸಂಘವು ಶಿಕ್ಷಣಕ್ಕೆ ಉತ್ತೇಜಿನ ನೀಡುವಂತಹ  ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಅತಿ ಹಿಂದುಳಿಂದವರಂತೆ ಇರುವ ಕುಂಬಾರ ಜನಾಂಗವು ಕಾಲ ಬದಲಾವಣೆಯ ಜತೆಯಲ್ಲಿ ಸಾಗಬೇಕಾಗಿದ್ದು,ಮಡಿಕೆ ಬದಲು ಇಟ್ಟಿಗೆ-ಹೆಂಚು ಕಾರ್ಖಾನೆ ಸ್ಥಾಪಿಸುವ ಕಡೆ ಗಮನ ನೀಡಬೇಕು. ನಶಿಸಿ ಹೋಗುತ್ತಿರುವ ಮಡಿಕೆ ಉದ್ಯಮಕ್ಕೆ ಯಾವೂದೇ ರೀತಿಯಲ್ಲಿ ರಾಜ್ಯ ಸರ್ಕಾರದ ಸಹಕಾರವಿಲ್ಲದಿರುವುದರಿಂದ ಈ ಬಗ್ಗೆ ಮುಂಬರಲಿರುವ ದಿನಗಳಲ್ಲಿ ವಿಧಾನ ಸಭೆ ಅಧಿವೇಶನದಲ್ಲಿ ಚರ್ಚಿಸಲಾಗುವುದು ಎಂದರು. ತಾಲೂಕಿನಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡಲು ಉತ್ಸಾಹಕ ನಾಗಿದ್ದು,ಸಾರ್ವಜನಿಕರ ಸಹಕಾರ ಬೇಕಾಗಿದೆ ಎಂದರು.
ಇದೇ ಸಂದರ್ಭದಲ್ಲಿ ನೂತನವಾಗಿ ಪುರಸಭೆ ಸದಸ್ಯರಾಗಿ ಆಯ್ಕೆಯಾಗಿರುವ ಜನಾಂಗದ ಸಿ. ಲಕ್ಷ್ಮಿನಾರಾಣ್, ರೇಖಾ ಅವರನ್ನು ಕೇಂದ್ರ ಮಂತ್ರಿಗಳು ಸನ್ಮಾನಿಸಿದರು. ಸಮುದಾಯದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು. ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ವೆಂಕಟಸ್ವಾಮಿ, ಬೆಂಗಳೂರು ಕುಂಬಾರ ಸಂಘದ ಸಂಸ್ಥಾಪಕ ಅಧ್ಯಕ್ಷ ರಾಮಚಂದ್ರಪ್ಪ, ಲೋಕಸೇವಾ ಆಯೋಗದ ಸದಸ್ಯ ಕೃಷ್ಣ ಪ್ರಸಾದ್, ಗಂಗಾಲಯ್ಯ, ಬಿಬಿಎಂಪಿ ನಿವೃತ್ತ ಅಧಿಕಾರಿ ದಕ್ಷಿಣಾ ಮೂರ್ತಿ , ನಾಗರಾಜ್, ಜಿಲ್ಲಾ ಕುಂಬಾರ ಸಂಘದ ಅಧ್ಯಕ್ಷ ತಬಲ ನಾರಾಯಣಪ್ಪ, ಕೋಲಾರ ಘಟಕದ ಅಧ್ಯಕ್ಷ ಕಲ್ಲಂಡೂರು ಶ್ರೀನಿವಾಸ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಲಕ್ಷಯ್ಯ, ನ್ಯಾತಪ್ಪ, ಪುರಸಭೆ ಸದಸ್ಯ ಲಕ್ಷ್ಮಿನಾರಾಯಣ್, ವಕೀಲ ಶ್ರೀನಿವಾಸ್ ಮಾತನಾಡಿದರು. ತಾಲೂಕು ಅಧ್ಯಕ್ಷ ಎ. ರಾಮಪ್ಪ ಅಧ್ಯಕ್ಷತೆ ವಹಿಸಿದ್ದರು. ಮುನಿಕೃಷ್ಣಪ್ಪ, ಚಲಪತಿ, ಎಂ. ಸುರೇಶ್, ಸಿ. ರಾಜೇಂದ್ರ,ಡ ಾ. ನಾಗರಾಜ್, ರಾಮಕೃಷ್ಣ, ಶ್ರೀನಿವಾಸ್, ಪ್ಲಾಸ್ಟಿಕ್ ಮುನಿಸ್ವಾಮಿ, ಟಿ.ಎಂ. ರಾಜೇಂದ್ರ, ಪುರಸನಹಳ್ಳಿ ನಾಗರಾಜ್, ಅಬ್ಬಯ್ಯ, ದಿನ್ನಹಳ್ಳಿ ನಾರಾಯಣಸ್ವಾಮಿ, ಮುನಿರಾಜು, ರಾಮಚಂದ್ರಪ್ಪ ಇದ್ದರು. ಉಪಾನ್ಯಾಸಕ ನಾಗರಾಜ್ ಪ್ರಸ್ತಾವಿಕ ಮಾತುಗಳನ್ನಾಡಿದರು. ಶಿವಶಂಕರ್ ಸ್ವಾಗತಿಸಿದರು. ಸಿ. ರಾಜೇಂದ್ರ ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement