ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕ್ರೀಡಾಪಟುಗೆ ಆರ್ಥಿಕ ಸಹಾಯ

Srinivasa Murthy VN
Updated On : 29 Jul 2013, 1:15 am

ಚಿಂತಾಮಣಿ: ವಿದೇಶ ಪ್ರಯಾಣ ಮಾಡಲು ಕ್ರೀಡಾಪಟುಗೆ ಆರ್ಥಿಕ ಸಹಾಯ ಹಸ್ತವನ್ನು ಒಕ್ಕಲಿಗ ಹಿತರಕ್ಷಣಾ ವೇದಿಕೆ ಪದಾಧಿಕಾರಿಗಳು ನೀಡಿ ಮಾನವೀಯತೆ ತೋರಿದ್ದಾರೆ.
ಪಟ್ಟಣದಲ್ಲಿನ ಟ್ಯಾಂಕ್ ಬಂಡ್ ರಸ್ತೆಯ ನಿವಾಸಿ ವಿ. ಮಂಜುನಾಥ್ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಓಟದ ಸ್ಪರ್ಧೆಯಲ್ಲಿ ವಿಜೇತರಾಗಿ ಹಲವಾರು ಪದಕಗಳನ್ನು ಪಡೆದಿದ್ದಾರೆ. ಆದರೆ ಮುಂದಿನ ವಾರ ನಡೆಯಲಿರುವ ಶ್ರೀಲಂಕಾ ದೇಶದಲ್ಲಿ ಓಟದ ಸ್ಪರ್ಧೆಗೆ ಆಯ್ಕೆಯಾಗಿದ್ದು, ಆರ್ಥಿಕ ಪರಿಸ್ಥಿತಿಯಿಂದ ಸಂಕಷ್ಟದಲ್ಲಿದ್ದ ಮಂಜುನಾಥ್ ನೆರವಿಗೆ ಸ್ಪಂದಿಸಿದ ತಾಲೂಕು ವಕ್ಕಲಿಗ ಹಿತರಕ್ಷಣಾ ವೇದಿಕೆ ಪದಾಧಿಕಾರಿಗಳು ಸ್ಪಂದಿಸಿ ಪ್ರಯಾಣ ವೆಚ್ಚವನ್ನು ಬರಿಸಲು ಸುಮಾರು 12 ಸಾವಿರ ರು. ನಗದು ಹಣವನ್ನು ನೀಡಿ ಮಾನವೀಯತೆ  ತೋರಿದ್ದಾರೆ.

ಗೋಸಾಯಿ ಮಠದ ಸ್ವಾಮೀಜಿಗೆ ಶ್ರದ್ಧಾಂಜಲಿ
ಮಾಲೂರು:
ಭರಮಸಾಗರ ಬಳಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ ಬೆಂಗಳೂರಿನ ಶ್ರೀ ಗೋಸಾಯಿ ಮಹಾ ಸಂಸ್ಥಾನದ ಮಠದ ಶ್ರೀ್ರ ಸುರೇಶ್ವರಾನಂದ ಭಾರತೀ ಸ್ವಾಮೀಜಿರವರಿಗೆ ತಾಲೂಕು ಮರಾಠ ಪರಿಷತ್ ಭಾನುವಾರಪಟ್ಟಣದ ಮಾರಿಕಾಂಭ ಮಹಾದ್ವಾರದ ಬಳಿ ಶ್ರದ್ಧಾಂಜಲಿ ಸಭೆ ನಡೆಸಿದರು.  ಒಂದು ನಿಮಿಷ ಮೌನ ಆಚರಿಸಿದ ಸ್ವಾಮಿಗಳ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ನಂತರ ಮಾತನಾಡಿದ ಮರಾಠ ಸಮುದಾಯದ ಮುಖಂಡ ಬಾಬುರಾವ್ ಸಾಳುಂಕೆ ಶ್ರೀಗಳ ಅಕಾಲಿಕ ಮರಣ ಮರಾಠ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ. ಆದಿ ಚುಂಚುನಗಿರಿ ಮಠದ ಶ್ರೀಗಳಾಗಿದ್ದ ದಿ. ಬಾಲಗಂಗಾಧರ ನಾಥ ಸ್ವಾಮೀಜಿಯ ಅತ್ಮೀಯರಾಗಿದ್ದ ಸುರೇಶ್ವರಾನಂದ ಸ್ವಾಮೀಜಿ ರವರು ಮರಾಠ ಸಮುದಾಯದ ಮಾರ್ಗದರ್ಶಕರಾಗಿದ್ದರು. ಅವರ ಸಾವನ್ನು ಭರಿಸುವ ಶಕ್ತಿ ನಮ್ಮ ಸಾಮುದಾಯಕ್ಕೆ ಸಿಗಲಿ ಎಂದರು.

ಪಟಾಲಮ್ಮ ದೇಗುಲದಲ್ಲಿ ಪೂಜೆ
ಮಾಲೂರು
: ಇಲ್ಲಿನ ಪಟಾಲಮ್ಮ ದೇವಾಲಯದಲ್ಲಿ ಚಾಮುಂಡೇಶ್ವರಿ ಜಯಂತಿ ಪ್ರಯುಕ್ತ ಭಾನುವಾರದಂದು ವಿಶೇಷ ಪೂಜೆ, ಅಲಂಕಾರ ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗಿನಿಂದಲೇ ಹೋಮ-ಹವನಗಳು ನಡೆದವು. ಚಾಮುಂಡೇಶ್ವರಿಗೆ ಹೂವಿನಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ನೂರಾರು ಸಂಖ್ಯೆಯಲ್ಲಿ ಮಹಿಳೆಯರು ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ಸಂಜೆ ಸೌಂದರ್ಯ ಲಹರಿ ಗಾಯನ ತಂಡದವರಿಂದ ದೇವಾಲಯದಲ್ಲಿ ಲಲಿತಾ ಸಹಸ್ರನಾಮ ವಾಚಿಸಿದರು. ದೇವಾಲಯ ಸಮಿತಿಯ ಗೋಪಾಲ್ ಕೃಷ್ಣ, ಮಧುಸೂಧನ್, ರಮೇಶ್, ಕೂಲ್ಮಿ ಕುಟುಂಬದವರು ಭಾಗವಹಿಸಿದ್ದರು.

ಬಿಸಿಯೂಟ ನೌಕರರ ವೇತನ ಹೆಚ್ಚಳಕ್ಕೆ ಆಗ್ರಹ
ಕೋಲಾರ:
ಅತ್ಯಂತ ಕಡಿಮೆ ವೇತನ ಪಡೆದು ರಾಜ್ಯ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಬಿಸಿಯೂಟ ನೌಕರರ ವೇತನವನ್ನು ಹೆಚ್ಚಳ ಮಾಡಬೇಕು. ಇಲ್ಲದಿದ್ದರೆ ಮುಂದಿನ ನವೆಂಬರ್ ತಿಂಗಳಲ್ಲಿ ವಿಧಾನಸೌಧ ಮುಂದೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಅಕ್ಷರ ದಾಸೋಹ ನೌಕರರ ಸಂಘದ ರಾಜ್ಯಾಧ್ಯಕ್ಷ ಎಸ್. ವರಲಕ್ಷ್ಮೀ ಎಚ್ಚರಿಕೆ ನೀಡಿದರು. ಅಕ್ಷರ ದಾಸೋಹ ನೌಕರರ ಸಂಘದ ಕೋಲಾರ ಜಿಲ್ಲಾ 2ನೇ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು ಬಿಸಿಯೂಟ ನೌಕರರಿಗೆ ಕೇವಲ 1000 ರು. ವೇತನವನ್ನು ನೀಡಲಾಗುತ್ತಿದೆ. ಈ ವೇತನದಲ್ಲಿ ಬಿಸಿಯೂಟ ನೌಕರರು ಜೀವನ ನಡೆಸಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವ ಕೂಲಿಕಾರರಿಗೆ ದಿನಕ್ಕೆ 175 ರು. ನೀಡಲಾಗುತ್ತಿದೆ. ಆದರೆ ಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ಸಿದ್ಧಪಡಿಸುತ್ತಿರುವ ಬಿಸಿಯೂಟ ನೌಕರರಿಗೆ ಅತ್ಯಂತ ಕಡಿಮೆ ವೇತನ ನೀಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement