ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಧನಸಹಾಯ

Srinivasa Murthy VN
Updated On : 29 Jul 2013, 12:11 pm

ಗೌರಿಬಿದನೂರು: ವಿದ್ಯಾಭ್ಯಾಸವನ್ನು ಮುಂದುವರೆಸಲು ತೊಂದರೆಯಿರುವಂತಹ ವಿದ್ಯ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡುವ ಮೂಲಕ ಅವರ ಶಿಕ್ಷಣಕ್ಕೆ ನಮ್ಮ ಸೇವಾ ಸಂಸ್ಥೆಯು ಆದ್ಯತೆ ನೀಡುತ್ತಿದೆ ಎಂದು ಅನ್ನಪೂರ್ಣೇಶ್ವರಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಪೋತೇನಹಳ್ಳಿ ರಾಮು ತಿಳಿಸಿದರು. ಅವರು ಟ್ರಸ್ಟ್ ವತಿಯಿಂದ ಬಡವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯದ ಚೆಕ್ ವಿತರಿಸಿ ಮಾತನಾಡುತ್ತಿದ್ದರು. ಆರೋಗ್ಯ, ಶಿಕ್ಷಣಕ್ಕೆ ಸಹಾಯನೀಡುವ ಸಲುವಾಗಿಯೇ ನಮ್ಮ ಟ್ರಸ್ಟ್ ಸೇವೆ ಸಲ್ಲಿಸುತ್ತಿದ್ದು ಈಗಾಗಲೇ ನಮ್ಮಿಂದ ಆರ್ಥಿಕ ಸಹಾಯ ಪಡೆದು ಶಿಕ್ಷಣ ಪಡೆದು ಉದ್ಯೋಗಸ್ಥರಾಗಿರುವವರು ತಮ್ಮ ಮೊದಲ ಸಂಬಳವನ್ನು ಸ್ವಯಂಪ್ರೇರಿತವಾಗಿ ನೀಡುವ ಮೂಲಕ ಬೇರೆ ಮಕ್ಕಳಿಗೆ ಸಹಾಯಕ್ಕೆ ಅನುವು ಮಾಡುತ್ತಿದ್ದಾರೆ, ಗಂಗಸಂದ್ರ ವೆಂಕಟೇಶ್ ಎಂಬಾತನಿಗೆ 17ಸಾವಿರ, ಮಧುಗಿರಿಯ ಪೂಜಿತಗೆ 15ಸಾವಿರ, ಜಯಶ್ರೀಗೆ 15ಸಾವಿರ, ನಾಗಶ್ರೀಗೆ 10ಸಾವಿರ, ಜಯಶ್ರೀಗೆ 30ಸಾವಿರ, ಪುರ ಗ್ರಾಮದ ಮುಬಿನ್ ತಾಜ್‌ಗೆ 4000, ವಿತರಿಸಲಾಗಿದೆ ಎಂದು ಅವರು ವಿವರಿಸಿದ ಅವರು ದಾನಿಗಳಿಂದಲೂ ಹಣವನ್ನು ನೇರವಾಗಿ ವಿದ್ಯಾರ್ಥಿಗಳಿಗೆ ಕೊಡಿಸುತ್ತಿದ್ದು, ಉತ್ತಮ ಶ್ರೇಣಿಯಲ್ಲಿ ಅಂಕಗಳಿಸಿರುವ ವಿದ್ಯಾರ್ಥಿಗಳಿಗೆ ಆದ್ಯತೆ ಮೇಲೆ ಆರ್ಥಿಕ ಸಹಾಯಕ್ಕೆ ಅನುವು ಮಾಡಿಕೊಡಲಾಗುವುದು, ಸ್ವಾಮಿ ಮತ್ತು ಸುರೇಶ್ ಎಂಬುವರು ನೀಡಿದ ಹಣದ ಜೊತೆಗೆ ನಮ್ಮ ಟ್ರಸ್ಟ್‌ನಿಂದ ಉಳಿದ ಹಣ ಜಮಾ ಮಾಡಿ  ವಿದ್ಯಾರ್ಥಿಗಳಿಗೆ ನೇರವಾಗಿ ನೀಡಲಾಯಿತು ಎಂದರು. ಟ್ರಸ್ಟ್ ಖಜಾಂಚಿ ಎನ್.ವಿ. ಶ್ರೀಧರ್, ನಿರ್ದೇಶಕರಾದ ರಮೇಶ್, ಸಾಗಾನಹಳ್ಳಿ ಶಿವಕುಮಾರ್, ತ್ಯಾಗರಾಜ್ ಮುಂತಾದವರು ಉಪಸ್ಥಿತರಿದ್ದರು.

5 ಮನೆ ಕಳ್ಳತನ
ಕೆಜಿಎಫ್: ಕಳೆದ ರಾತ್ರಿ ನಗರದ ಬಿಜಿಎಂಎಲ್ ಚಿನ್ನದ ಗಣಿಗಳ ಕಾಲೋನಿಗಳಲ್ಲಿ 5 ಮನೆಗಳಲ್ಲಿ ಕಳ್ಳತನ ನಡೆದಿದ್ದು, ಕ್ಷೇತ್ರದ ನಾಗರಿಕರು ಭೀತಿಗೊಂಡಿದ್ದಾರೆ. ಉರಿಗಾಂ ಪೊಲೀಸ್ ಠಾಣಾ ವ್ಯಾಪ್ತಿಯ ನ್ಯೂ ಓರಿಯಂಟಲ್ ಲೈನ್ ಮತ್ತು ಹಳೇ ಓರಿಯಂಟಲ್ ಲೈನ್‌ನಲ್ಲಿ   ಬೀಗ ಹಾಕಿದ್ದ 5 ಮನೆಗಳಲ್ಲಿ ಕಳ್ಳರು ಕಳ್ಳತನವೆಸಗಿದ್ದಾರೆ. ಜೈಕಾಂತ್ ಎಂಬುವರು ಬೆಮೆಲ್ ಕಾರ್ಖಾನೆಯಲ್ಲಿ ಗುತ್ತಿಗೆ ಕೆಲಸ ಮಾಡುತ್ತಿದ್ದು ರಾತ್ರಿ ಕೆಲಸಕ್ಕೆ ಹೋಗಿದ್ದರಿಂದ ಕುಟುಂಬದ ಇತರೇ ಸದಸ್ಯರು ಮನೆಗೆ ಬೀಗವನ್ನು ಹಾಕಿಕೊಂಡು ಪಕ್ಕದ ಮನೆಯಲ್ಲಿ ಮಲಗಿದ್ದಾಗ ಮನೆಯ ಬೀಗವನ್ನು ಮುರಿದು ಒಳ ನುಗ್ಗಿದ ಕಳ್ಳರು ಎರಡು ಬೀರುವಿನಲ್ಲಿಟ್ಟಿದ್ದ ಸುಮಾರು 85 ಗ್ರಾಂ ಚಿನ್ನದ ಒಡವೆಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಅದೇ ರೀತಿ ಹಳೇ ಓರಿಯಂಟಲ್ ಲೈನ್ ಮತ್ತು ನ್ಯೂ ಓರಿಯಂಟಲ್ ಲೈನ್‌ನ ನಿವಾಸಿಗಳಾದ ಧನಭಾಗ್ಯಂ, ರಾಜನ್, ಚಂದ್ರನ್ ಮತ್ತು ರಾಜು ಎಂಬುವರ ಮನೆಗಳಿಗೆ ಬೀಗವನ್ನು ಹಾಕಿಕೊಂಡು ಬೇರೆ ಮನೆಗಳಲ್ಲಿ ಮಲಗಿದ್ದು ಮತ್ತು ಕೆಲಸದ ನಿಮಿತ್ತ ಬೇರೆ ಊರುಗಳಿಗೆ ಹೋಗಿದ್ದರು. ಕಳ್ಳರು ಮನೆಯಲ್ಲಿ ಯಾರೂ ಇಲ್ಲದ್ದನ್ನು ಅರಿತು ಬೀಗ ಒಡೆದು ಮನೆಯಲ್ಲಿದ್ದ ಬೀರು, ಪೆಟ್ಟಿಗೆ ಮುಂತಾದವುಗಳನ್ನು ತೆರೆದು ಎಲ್ಲಾ ವಸ್ತುಗಳನ್ನು ಜಾಲಾಡಿ ನಗದು ಮತ್ತು ಚಿನ್ನದ ಒಡವೆಗಳನ್ನು ಹುಡುಕಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿಜಿಎಂಎಲ್ ಚಿನ್ನದ ಗಣಿಗಳ ಕಾಲೋನಿಗಳಲ್ಲಿ ಒಂದಕ್ಕೊಂದು ಅಂಟಿಕೊಂಡಂತೆ ಇರುವ ಮುಂಭಾಗದ ಮನೆಗಳಲ್ಲಿ ಕಳ್ಳತನ ಮಾಡಲು ಬಂದ ಕಳ್ಳರು, ಮನೆಗಳ ಬಾಗಿಲುಗಳಿಗೆ ಹೊರಗಿನಿಂದ ಚಿಲಕವನ್ನು ಹಾಕಿ ಕೃತ್ಯವೆಸಗಿದ್ದಾರೆ. ಬೆಳಗ್ಗೆ ಎದ್ದು ಬಾಗಿಲು ತೆರೆಯಲು ಹೋದಾಗ ಹೊರಗೆ ಚಿಲಕವನ್ನು ಹಾಕಿದ್ದು, ಬಾಗಿಲು ತೆರೆಯುವಂತೆ ಕೂಗಿದ್ದು ಸ್ಥಳಿಯರು ಬಂದು ತೆರೆದ ನಂತರ ಮನೆಗಳಿಗೆ ಕಳ್ಳರು ನುಗ್ಗಿರುವುದು ತಿಳಿದು ಬಂದಿದೆ. ಅಕ್ಕಪಕ್ಕದ ಬಡಾವಣೆಗಳಲ್ಲಿ ಈ ಸರಣಿ ಕಳ್ಳತನ ನಡೆದಿರುವ ವಿಷಯ ತಿಳಿಯುತ್ತಿದ್ದಂತೆ ಕ್ಷೇತ್ರದ ಜನತೆ ಬೀತಿಗೊಂಡಿದ್ದಾರೆ. ಸ್ಥಳಕ್ಕೆ ಎಸ್ಪಿ ಡಾ.ರೋಹಿಣಿ ಕಟೋಚ್ ಸಫೆಟ್, ಉಪರಕ್ಷಣಾಧಿಕಾರಿ ರಾಜಣ್ಣ, ವೃತ್ತನಿರೀಕ್ಷಕ ಪುಟ್ಟಮಾದಯ್ಯ, ಪಿಎಸ್‌ಐ ಮಾರ್ಕಾಂಡಯ್ಯ, ಶ್ವಾನದಳ ಸಿಬ್ಬಂದಿ, ಬೆರಳಚ್ಚು ತಜ್ಞರು ಬೇಟಿ ನೀಡಿ ಪರಿಶೀಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement