ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮಾಲೂರು ಇಫ್ತಾರ್ ಕೂಟದಲ್ಲಿ ಕೇಂದ್ರ ಸಚಿವ ಮುನಿಯಪ್ಪ

Srinivasa Murthy VN
Updated On : 29 Jul 2013, 12:12 pm

ಮಾಲೂರು: ರಂಜಾನ್ ಹಬ್ಬದ ಪ್ರಯುಕ್ತ ಸ್ಥಳೀಯ ಕಾಂಗ್ರೆಸ್ ಘಟಕ ಮುಸ್ಲಿಂ ಭಾಂಧವರಿಗಾಗಿ ಭಾನುವಾರ ಸಂಜೆ ಇಫ್ತಾರ್ ಕೂಟ ಏರ್ಪಡಿಸಲಾಗಿತ್ತು.
  ಪಟ್ಟಣದ ಕಾಂಗ್ರೆಸ್ ಭವನ ನಿವೇಶನದಲ್ಲಿ ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪ ಇಫ್ತಾರ್ ಕೂಟಕ್ಕೆ ಚಾಲನೆ ನೀಡಿ ಮಾತನಾಡುತ್ತ ದೇಶದಲ್ಲಿ ಸುಭದ್ರವಾಗಿಡಲು ಪ್ರಪಂಚದ ಎರಡನೇ ಅತಿ ದೊಡ್ಡ ಜನಾಂಗವಾದ ಮುಸ್ಲಿಂ ಬಂಧುಗಳೂಡನೆ ಸಹೋದರ ಭಾತೃತ್ವ ಬೆಳೆಸಲು ಇಂತಹ ಇಫ್ತಾರ್ ಕೂಟ ಸಹಕಾರಿಯಾಗುತ್ತದೆ ಎಂದ ಕೇಂದ್ರ ಸಚಿವರು ದೇಶದ ಪ್ರತಿ ಪ್ರಜೆಯಲ್ಲೂ ಭಾರತೀಯತೆ ಬೆಳೆಸೋಣ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್, ಜಿ.ಪಂ. ಸದಸ್ಯ ಮುನಿವೆಂಕಟಪ್ಪ, ಕೃಷ್ಣಮೂರ್ತಿ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಮುನಿರಾಜು, ಚೆನ್ನರಾಯಪ್ಪ, ಕೆ.ಪಿ.ಸಿ.ಸಿ. ಸದಸ್ಯ ರಘುನಾಥ್, ಕಾರ್ಯಕ್ರಮ ಸಂಘಟಕ ಚೆನ್ನಕೇಶವ,ಪುರಸಭೆ ಸದಸ್ಯರಾದ ಸಿ. ಲಕ್ಷ್ಮಿನಾರಾಯಣ್, ಸಿ.ಪಿ. ನಾಗರಾಜ್, ಚಿಕ್ಕತಿರುಪತಿ ಪಂಚಾಯ್ತಿ ಉಪಾಧ್ಯಕ್ಷನಾಗೇಶ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಹನುಮಂತಯ್ಯ, ಅಂಜನಿ ಸೋಮಣ್ಣ, ನಯಿಂ, ಅಪ್ಯರ್ ಪಾಷ, ಜಮೀರ್, ಅಶ್ವಥ್ ರೆಡ್ಡಿ, ಮದುಸೂಧನ್, ರಶೀದ್, ವೆಂಕಟೇಶಪ್ಪ, ಅಶೋಕ್ ಕುಮಾರ್, ಪ್ರವೀಣ್ ಕುಮಾರ್, ಶಬೀರ್ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರಿದ್ದರು.

ಮಾಲೂರು ಪಟಾಲಮ್ಮ ದೇಗುಲದಲ್ಲಿ ವಿಶೇಷ ಪೂಜೆ
ಮಾಲೂರು: ಇಲ್ಲಿನ ಪಟಾಲಮ್ಮ ದೇವಾಲಯದಲ್ಲಿ ಚಾಮುಂಡೇಶ್ವರಿ ಜಯಂತಿ ಪ್ರಯುಕ್ತ ಭಾನುವಾರದಂದು ವಿಶೇಷ ಪೂಜೆ, ಅಲಂಕಾರ ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗಿನಿಂದಲೇ ಹೋಮ-ಹವನಗಳು ನಡೆದವು. ಚಾಮುಂಡೇಶ್ವರಿಗೆ ಹೂವಿನಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ನೂರಾರು ಸಂಖ್ಯೆಯಲ್ಲಿ ಮಹಿಳೆಯರು ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ಸಂಜೆ ಸೌಂದರ್ಯ ಲಹರಿ ಗಾಯನ ತಂಡದವರಿಂದ ದೇವಾಲಯದಲ್ಲಿ ಲಲಿತಾ ಸಹಸ್ರನಾಮ ವಾಚಿಸಿದರು. ದೇವಾಲಯ ಸಮಿತಿಯ ಗೋಪಾಲ್ ಕೃಷ್ಣ, ಮಧುಸೂಧನ್, ರಮೇಶ್, ಕೂಲ್ಮಿ ಕುಟುಂಬದವರು ಭಾಗವಹಿಸಿದ್ದರು.

ಕುಂಬಾರ ನಾಯಕನಿಗೆ ಎಂಎಲ್‌ಸಿ ಸ್ಥಾನ ನೀಡಲು ಆಗ್ರಹ
ಮಾಲೂರು: ಕೇಂದ್ರ ಮಂತ್ರಿ ಕೆ.ಎಚ್. ಮುನಿಯಪ್ಪರವರು ಮುಖ್ಯಮಂತ್ರಿಗಳೊಡನೆ ಚರ್ಚಿಸಿ ಸ್ಥಳೀಯ ಕುಂಬಾರ ಸಮುದಾಯದ ಮುಖಂಡರೊಬ್ಬರನ್ನು ಎಂಎಲ್‌ಸಿ ಮಾಡುವುದಾದರೆ ಪಕ್ಷಾತೀತವಾಗಿ ಬೆಂಬಲ ನೀಡುವುದಾಗಿ ಶಾಸಕ ಮಂಜುನಾಥ್ ಗೌಡ ಹೇಳಿದರು.ಅವರು ಇಲ್ಲಿನ ಕುಂಬಾರ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡುತ್ತಾ ರಾಜ್ಯದಲ್ಲಿ ರಾಜಕೀಯ ಪ್ರಾತಿನಿಧ್ಯವಿಲ್ಲದ ಕುಂಬಾರ ಜನಾಂಗವನ್ನು ರಾಜಕೀಯವಾಗಿ ಮೇಲಕ್ಕೆತ್ತಲು ಕೇಂದ್ರ ಮಂತ್ರಿಗಳು ಮನಸ್ಸು ಮಾಡಿದರೆ ಜೆಡಿಎಸ್ ಶಾಸಕನಾಗಿರುವ ನಾನು ಸ್ಥಳೀಯ ಅಭ್ಯರ್ಥಿಗೆ ಬೆಂಬಲಿಸುವುದಾಗಿ ತಿಳಿಸಿದರು.

ಅನ್ನಭಾಗ್ಯ ಯೋಜನೆಗೆ ಚಾಲನೆ
ಟೇಕಲ್: ಗ್ರಾಮೀಣ ಭಾಗದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಹತ್ವಾಕಾಂಕ್ಷೆ ಯೋಜನೆ ಬಹಳ ಉಪಯುಕ್ತವಾಗಿದೆ ಎಂದು ಕೆಪಿಸಿಸಿ ಸದಸ್ಯ ಹಾಗೂ ಜಿ.ಪಂ. ಮಾಜಿ ಸದಸ್ಯ ಆರ್. ರಾಜಣ್ಣ ಅಭಿಪ್ರಾಯಪಟ್ಟರು. ಅವರು ಟೇಕಲ್‌ನ ಕೆ.ಜಿ.ಹಳ್ಳಿಯ ನ್ಯಾಯಬೆಲೆ ಅಂಗಡಿಯಲ್ಲಿ ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಈ ವೇಳೆ ನ್ಯಾಯಬೆಲೆ ಅಂಗಡಿಯ ಮಾಲೀಕ ಎ. ವೆಂಕಟರಾವ್, ಎಸ್‌ಎಫ್‌ಎಸ್ ಮಾಜಿ ಅಧ್ಯಕ್ಷ ಗೋವಿಂದಸ್ವಾಮಿ, ಗ್ರಾ.ಪಂ. ಮಾಜಿ ಸದಸ್ಯೆ ಮುನಿಯಮ್ಮ, ಹಾಗೂ ಅಪ್ಪು ಅಲಿಯಾಸ್ ನಂದಕುಮಾರ್, ಪ್ರಶಾಂತ್, ಶಾರದರಾಮಮೂರ್ತಿ, ಮತ್ತು ಬೇಬಿ ಚೈತ್ರ ಮುಂತಾದವರು ಉಪಸ್ಥಿತರಿದ್ದರು.

ಮಾರಾಮಾರಿ: ಆರು ಮಂದಿಗೆ ಗಾಯ
ಮೈಸೂರು:  ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪಿನ ಯುವಕರ ನಡುವೆ ಬಾರ್‌ವೊಂದರಲ್ಲಿ ಮಾರಾಮಾರಿ ನಡೆದು, 6 ಮಂದಿ ಗಾಯಗೊಂಡಿರುವ ಘಟನೆ ಸಿದ್ದಪ್ಪ ಚೌಕದಲ್ಲಿ ಭಾನುವಾರ ಸಂಜೆ ಜರುಗಿದೆ. ಅಶೋಕಪುರಂ ಮತ್ತು ಕೆ.ಆರ್. ಮೊಹಲ್ಲಾ ನಿವಾಸಿಗಳಾದ ಅವಿನಾಶ್, ಆನಂದ್, ಭಗವಾನ್, ದುರ್ಗಾಪ್ರಸಾದ್, ಸುರೇಶ್, ರಾಘವೇಂದ್ರ ಎಂಬವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಿದ್ದಪ್ಪ ಚೌಕದ ಬಳಿಯ ತ್ರಿಲೋಕ್ ಬಾರ್‌ನಲ್ಲಿ ಎರಡು ಗುಂಪಿನ ಯುವಕರು ಪ್ರತ್ಯೇಕವಾಗಿ ಮದ್ಯ ಸೇವಿಸುತ್ತಿದ್ದರು. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಪರಸ್ಪರ ಹೊಡೆದುಕೊಂಡಿದ್ದು, ಇಬ್ಬರಿಗೆ ಚಾಕುವಿನಿಂದ ಇರಿದಿದ್ದಾರೆ. ಉಳಿದವ ನಾಲ್ವರು ಗಾಯಗೊಂಡಿದ್ದಾರೆ. ಈ ವಿಚಾರ ತಿಳಿದು ಎರಡು ಗುಂಪಿನ ಕಡೆಯವರು ನೂರಾರು ಮಂದಿ ಸ್ಥಳಕ್ಕೆ ಜಮಾಯಿಸಿದ್ದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement