ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಲಭ್ಯ ಸವಲತ್ತು ಪಡೆದು ಉದ್ಯೋಗಾವಕಾಶ ಕಲ್ಪಿಸಿಕೊಳ್ಳಿ

Srinivasa Murthy VN
Updated On : 29 Jul 2013, 12:11 pm

ಕೆಜಿಎಫ್: ಸ್ಪೈಡರ್ ಎಲೆಕ್ಟ್ರಿಕಲ್ ಮತ್ತು ಲೇಬರ್ ನೆಟ್ ಬೆಂಗಳೂರು ಸಂಸ್ಥೆ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಎಜುಕೇಷನಲ್ ಟ್ರಸ್ಟ್ ಮತ್ತು ಹಿಲಾಲ್ ಐಟಿಐ ಕೆಜಿಎಫ್ ಸಹಯೋಗದೊಂದಿಗೆ ನಗರದಲ್ಲಿ 2ನೇ ಹಂತದ  ಉಚಿತ ಎಲೆಕ್ಟ್ರಿಶಿಯನ್ ತರಬೇತಿ ಕಾರ್ಯಾಗಾರವನ್ನು ಕಾರ್ಮಿಕ ಇಲಾಖೆ ಅಧಿಕಾರಿ ಜಾಕಿರ್‌ಬಾಬು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು ಕಾರ್ಮಿಕ ಇಲಾಖೆಯಿಂದ ಜನರಿಗೆ ಮತ್ತು ಅಸಂಘಟಿತ ಕಾರ್ಮಿಕರಿಗೆ ದೊರೆಯುವ ಸೌಲತ್ತುಗಳನ್ನು ಪಡೆದುಕೊಂಡು ಉದ್ಯೋಗವಕಾಶ ಕಲ್ಪಿಸಿಕೊಳ್ಳಲು ಇಂದಿನ ಯುವಕರು ಮುಂದಾಗಬೇಕು ಎಂದು ತಿಳಿಸಿದರು.
ಲೇಬರ್ ನೆಟ್ ಮತ್ತು ಸಂಸ್ಥೆಯ ತರಬೇತಿ ಸಂಯೋಜಕರಾದ ಆರ್.ಪಿ. ರೆಡ್ಡಿ ಅವರು ಸಂಸ್ಥೆಗಳ ಕಿರು ಪರಿಚಯ ಹಾಗೂ ಇದರಿಂದ ದೊರೆಯುವ ಸೌಲಭ್ಯಗಳು 2 ತಿಂಗಳ ತರಬೇತಿಯ ನಂತರ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಎಲ್ಲಾ ವಿದ್ಯಾರ್ಥಿಗಳಿಗೆ ಉದ್ಯೋಗ ಒದಗಿಸುವ ಬಗ್ಗೆ ತಿಳಿಸಿದರು.
2ನೇ ಹಂತದ ತರಬೇತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲು ಪರೋಕ್ಷವಾಗಿ ಲೇಬರ್ ನೆಟ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಾಯತ್ರಿ ವಾಸುದೇವನ್ ಮತ್ತು ಯೋಜನಾ ಸಂಯೋಜಕರಾದ ವೆಂಕಟೇಶ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಬಾಲಕಾರ್ಮಿಕ ಪದ್ಧತಿ ಹೆಚ್ಚಾಗುತ್ತಿದೆ ಇದನ್ನು ನಿರ್ಮೂಲನೆ ಮಾಡಿ ಅವರಿಗೆ ವಿದ್ಯಾಭ್ಯಾಸ ಕೊಡಿಸುವ ಕೆಲಸವನ್ನು ಮಾಡಲು ಎಲ್ಲರೂ ಮುಂದಾಗಬೇಕಿದೆ. ಅದೇ ರೀತಿ  ಕೆಲಸವನ್ನು ಹುಡುಕಿಕೊಂಡು ಅಲೆದಾಡುವ 18 ರಿಂದ 28ರ ವಯೋವುತಿಯ ನಿರುದ್ಯೋಗಿಗಳು, ವಿದ್ಯಾರ್ಥಿಗಳು ಯುವಕರು, ಯುವತಿಯರು ಉಚಿತ ಎಲೆಕ್ಟ್ರಿಶಿಯನ್ ತರಬೇತಿ ಪಡೆದು ಉದ್ಯೋಗವಕಾಶ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಡಾ.ಬಿ.ಆರ್. ಅಂಬೇಡ್ಕರ್ ಎಜುಕೇಷನಲ್ ಟ್ರಸ್ಟ್‌ನ ಪ್ರಾಂಶುಪಾಲ ವಿಜಯ್‌ಕುಮಾರ್, ಕಾರ್ಯದರ್ಶಿ ಪುಷ್ಪ, ಜೋಸಫ್,  ಹಿಲಾಲ್ ಐಟಿಐ ಪ್ರಾಂಶುಪಾಲ ಸೈಯದ್‌ಪಾಷಾ, ತರಬೇತಿದಾರ ಅಬ್ದುಲ್ ಅಲೀಮ್, ಹಾಲ್ಮ ಐಟಿಐ ಪ್ರಾಂಶುಪಾಲ ಕುಮಾರ್, ಕಾರಾಗೃಹಾಧಿಕಾರಿ ಕಲೈಅರಸನ್ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement