ಹಲ್ಲೆಗೆ ಒಳಗಾಗಿದ್ದ ಕಂಡಕ್ಟರ್ ಯೋಗಕ್ಷೇವು ವಿಚಾರಣೆ
ಚಿಂತಾಮಣಿ: ಹಲ್ಲೆಗೆ ಒಳಗಾಗಿದ್ದ ಕೆಎಸ್ಆರ್ಟಿಸಿ ನಿರ್ವಾಹಕನ ಯೋಗಕ್ಷೇವುವನ್ನು ಚಿಕ್ಕಬಳ್ಳಾಪುರ ಘಟಕದ ಅಧಿಕಾರಿ ಸಿ.ಡಿ.ಪ್ರಸಾದ್ ಆಸ್ಪತ್ರೆಗೆ ಭೇಟಿ ವಿಚಾರಿಸಿದರು. ತಾಲೂಕಿನ ಸುಜ್ಜನಹಳ್ಳಿ ಗ್ರಾಮದಲ್ಲಿ ಶನಿವಾರ ಖಾಸಗಿ ವಾಹನ ಮಾಲೀಕ ನಟರಾಜ್ ಎಂಬವರು ವಿನಾಕಾರಣ ಕರ್ತವ್ಯದ ಮೇಲಿದ್ದ ನಿರ್ವಾಹಕ ರವಿ ಮೇಲೆ ಹಲ್ಲೆ ಮಾಡಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಯೋಗಕ್ಷೇವು ವಿಚಾರಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಉಲ್ಲಂಘಿಸಿ ಕರ್ತವ್ಯದ ಮೇಲಿದ್ದ ನಿರ್ರ್ವಾಹಕನ ಮೇಲೆ ಹಲ್ಲೆ ಮಾಡಿದ ಆರೋಪಿಯನ್ನು ಪೊಲೀಸರು ಕೂಡಲೇ ಬಂಧಿಸಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಅಧಿಕಾರಿಗಳಾದ ವಾಜಿದ್, ಕಾರ್ಮಿಕ ಮುಖಂಡ ಮಂಜುನಾಥ್, ಮೋಹನ್, ಬಿ.ಕೆ.ನಾರಾಯಣಪ್ಪ ಇತರೆ ಮುಖಂಡರು ಇದ್ದರು.
ಇಂದು ಮಕ್ಕಳ ಆರೋಗ್ಯ ಉಚಿತತಪಾಸಣಾ ಶಿಬಿರ
ಮಾಲೂರು: ಓ.ಆರ್.ಎಸ್. ದಿನಾಚರಣೆ ಅಂಗವಾಗಿ ಪಟ್ಟಣದ ಹೂರವಲಯದ ಸೆಂಟ್ ಮೇರಿಸ್ ಆಸ್ಪತ್ರೆಯಲ್ಲಿ ಜುಲೈ 29 ರಂದು ಉಚಿತ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಪಟ್ಟಣದ ಹೂರವಲಯದ ಗುಡ್ನಹಳ್ಳಿ ಗ್ರಾಮದ ರಸ್ತೆಯಲ್ಲಿರುವ ಸೆಂಟ್ ಮೇರಿಸ್ ಆಸ್ವತ್ರೆಯಲ್ಲಿ ಕೋಲಾರದ ದೇವರಾಜ್ ಅರಸ್ ಮೆಡಿಕಲ್ ಕಾಲೇಜಿನ ನುರಿತ ಮಕ್ಕಳ ತಜ್ಞರಿಂದ ತಪಾಸಣೆ ಮತ್ತು ಚಿಕಿತ್ಸೆ ನಡೆಯಲಿದೆ. ಪ್ರಮುಖವಾಗಿ ಮಕ್ಕಳ ಬೆಳೆವಣಿಗೆಯಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಅರಿವು ಮೂಡಿಸುವ ಜತೆಯಲ್ಲಿ ವಿಶೇಷವಾಗಿ ಅತಿಸಾರದ ಬಗೆ ಚಿಕಿತ್ಸೆ ನೀಡಲಾಗುತ್ತದೆ. ಮಕ್ಕಳ ತಜ್ಞ ಡಾ. ನವೀನ್ ಕುಮಾರ್ ಮುಂದಾಳತ್ವದಲ್ಲಿ ನಡೆಯಲಿರುವ ಈ ಶಿಬಿರದಲ್ಲಿ ಪಟ್ಟಣದ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ತಮ್ಮ ಮಕ್ಕಳ ಜತೆ ಭಾಗವಹಿಸಬೇಕೆಂದು ಸೆಂಟ್ ಮೇರಿಸ್ ಆಸ್ಪತ್ರೆ ಆಡಳಿತ ಮಂಡಳಿ ಮನವಿ ಮಾಡಿದೆ.
ನೇಣು ಬಿಗಿದು ಮಹಿಳೆ ಆತ್ಮಹತ್ಯೆ
ಶಿಡ್ಲಘಟ್ಟ: ಪಟ್ಟಣದ ನಲ್ಲಿ ಮರದಹಳ್ಳಿಯಲ್ಲಿ ಮಹಿಳೆಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ
ಮಾಡಿಕೊಂಡಿರುವ ಘಟನೆ ಸಂಬವಿಸಿದೆ. ಸುಶೀಲಮ್ಮ ಮೃತಪಟ್ಟ ದುರ್ದೈವಿ. ಸುಶೀಲಮ್ಮ ಮತ್ತು ಆಕೆಯ ಗಂಡ ಇಂದ್ರ ನಲ್ಲಿಮರದಹಳ್ಳಿಯಲ್ಲಿ 1 ವರ್ಷದಿಂದ ವಾಸವಾಗಿದ್ದು ಕೂಲಿ ಕೆಲಸ ಮಾಡುತ್ತಿದ್ದರು. ಸುಶೀಲಮ್ಮನಿಗೆ ಮಕ್ಕಳಿರಲಿಲ್ಲ. ಗಂಡ ಹೊರಗಡೆ ಹೋದ ಸಂದರ್ಭದಲ್ಲಿ ನಿನ್ನೆ ರಾತ್ತಿ ಸುಶೀಲಮ್ಮ ನೇಣು ಬಿಗಿದುಕೊಂಡು ಆತ್ಮಹತ್ಮೆ ಮಾಡಿಕೊಂಡಿದ್ದಾಳೆ. ನೋಡಿದ ಅಕ್ಕಪಕ್ಕದ ಜನರು ಗ್ರಾಮಾಂತರ ಠಾಣೆಗೆ ಸುದ್ದಿ ಮುಟ್ಟಿಸಿದ್ದಾರೆ. ಆತ್ಮಹತ್ಯೆಗೆ ಕಾರಣ ಇನ್ನು ತಿಳಿದುಬಂದಿಲ್ಲ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಂಡು ಗ್ರಾಮಾಂತರ ಠಾಣೆಯ ಪಿ.ಎಸ್.ಐ ಹನುಮಂತಯ್ಯ ತನಿಖೆಯನ್ನು ನಡೆಸುತ್ತಿದ್ದಾರೆ.
ವರದಕ್ಷಿಣೆ ಭೂತಕ್ಕೆ ಗೃಹಿಣಿ ಬಲಿ
ಕೋಲಾರ: ಪತ್ನಿಯನ್ನು ಪತಿ ಮತ್ತು ಆತನ ಮನೆಯವರು ಕೊಲೆ ಮಾಡಿರುವ ಘಟನೆ ಘಟನೆ ತಾಲೂಕಿನ ಪಾರ್ಶಗಾನಹಳ್ಳಿಯಲ್ಲಿ ನಡೆದಿದೆ. ಹೊಸಕೋಟೆ ತಾಲೂಕಿನ ರೇಖಾ ಮದುವೆಯಾಗಿ ಕೇವಲ ಎರಡು ವರ್ಷವಾಗಿದ್ದ ಗೃಹಿಣಿಯೊಬ್ಬರು ವರದಕ್ಷಿಣೆ ಭೂತಕ್ಕೆ ಬಲಿಯಾಗಿರುವ ನತದೃಷ್ಟೆ. ಮೃತಳ ಚಿಕ್ಕಮ್ಮ ವರಲಕ್ಷ್ಮಿ ಕೋಲಾರ ಗ್ರಾಮಾಂತರ ಠಾಣೆಯಲ್ಲಿ ರೇಖಾಳ ಗಂಡ ಪಾರ್ಶಗಾನಹಳ್ಳಿಯ ಕದಿರೇಶ್ ಮತ್ತು ಈತನ ಮನೆಯವರ ವಿರುದ್ಧ ಕೊಲೆ ದೂರು ನೀಡಿದ್ದಾರೆ. ಮದುವೆ ಸಂದರ್ಭದಲ್ಲಿ ಸಾಕಷ್ಟು ಹಣ ನೀಡಲಾಗಿತ್ತು. ಮತ್ತೆ ಹಣಕ್ಕಾಗಿ ಪೀಡಿಸುತ್ತಿದ್ದ ಕದಿರೇಶ್ ಮತ್ತವರ ಮನೆಯವರ ಕಾಟ ತಡೆಯಲಾಗದೆ ರೇಖಾ ತಂದೆ ಮನೆಗೆ ಬಂದಿದ್ದರು. ಶುಕ್ರವಾರ ರೇಖಾಳಿಗೆ ಸಮಾಧಾನ ಹೇಳಿ ಗಂಡನ ಮನೆಗೆ ಕಳುಹಿಸಲಾಗಿತ್ತು. ರಾತ್ರಿ 2ಗಂಟೆ ಸಮಯದಲ್ಲಿ ಗಂಡ ಮತ್ತವರ ಮನೆಯವರು ರೇಖಾಳನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ನಂತರ ಸೀಮೆಎಣ್ಣೆ ಸುರಿದು ಬೆಂಕಿ ಹಾಕಿದ್ದಾರೆಂದು ಆರೋಪಿಸಿದ್ದಾರೆ.