ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

4.80 ಕೋಟಿ ವೆಚ್ಚದ ಹಾಸ್ಟೆಲ್‌ಗೆ ಶಂಕು

Srinivasa Murthy VN
Updated On : 26 Jun 2013, 11:37 am

ಗೌರಿಬಿದನೂರು: ಬಹಳ ವರ್ಷಗಳಿಂದ ಬಹುತೇಕ ವಿದ್ಯಾರ್ಥಿಗಳ ವಸತಿ ನಿಲಯಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿದ್ದವು, ಕೆಲ ಕಟ್ಟಡಗಳಲ್ಲಿ ಗಾಳಿ, ಬೆಳಕು ಶೌಚಾಲಯ ಇನ್ನು ಹಲವು ಮೂಲ ಸೌಕರ್ಯಗಳಿಂದ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದರು. ಇಂಥ ಪರಿಸ್ಥಿತಿಗೆ ಇತಿಶ್ರೀ ಹಾಡಲು ವಿದ್ಯಾರ್ಥಿಗಳ ವಸತಿ ನಿಲಯಗಳ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ ಎಂದು ಶಾಸಕ ಎನ್.ಎಚ್. ಶಿವಶಂಕರರೆಡ್ಡಿ ತಿಳಿಸಿದರು.
ಅವರು ಮಾದನಹಳ್ಳಿ ಕೆರೆ ಅಂಗಳದಲ್ಲಿ ಸುಮಾರು 4.80 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗುವ ಪರಿಶಿಷ್ಟ ಜಾತಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ ಹಾಗೂ ಪರಿಶಿಷ್ಟ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯದ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಿದ್ದರು.
ಮುಖ್ಯ ಅತಿಥಿ ಜಿ.ಪಂ. ಅಧ್ಯಕ್ಷ ಎಸ್.ಎನ್. ಚಿನ್ನಪ್ಪ ಮಾತನಾಡಿ ಶಾಸಕ ಶಿವಶಂಕರರೆಡ್ಡಿ ಅವರ ಚಲ, ಪ್ರಯತ್ನ ಮತ್ತು ಪ್ರಾಮಾಣಿಕತೆ ನಮಗೆಲ್ಲ ಮಾದರಿ ಸದಾ ಕ್ಷೇತ್ರದ ಒಳತಿಗಾಗಿ ಚಿಂತನೆ ಮಾಡುವ ಅವರಿಂದ ತಾಲೂಕು ಇನ್ನಷ್ಟು ಅಭಿವೃದ್ಧಿಯಾಗಲಿದೆ ಎಂದರು.
ಜಿ.ಪಂ. ಉಪಾಧ್ಯಕ್ಷ ರಾಘವೇಂದ್ರ ಹನುಮಾನ್, ತಹಸೀಲ್ದಾರ್ ಭಾಸ್ಕರ್, ಸದಸ್ಯರಾದ ಚಿನ್ನಪ್ಪಯ್ಯ, ಕೇಶವರೆಡ್ಡಿ, ತಾ.ಪಂ. ಅಧ್ಯಕ್ಷ ನಿರಂಜನ್ ಉಪಸ್ಥಿತರಿದ್ದರು.

ಸರ್ಕಾರಿ ಆಸ್ಪತ್ರೆ ನಿರ್ಮಾಣ 1 ಕೋಟಿ ಮಂಜೂರು
ಕ.ಪ್ರ. ವಾರ್ತೆ ಟೇಕಲ್ ಜೂ.26

ಬಹಳ ದಿನಗಳ ಬೇಡಿಕೆಯಂತೆ ಟೇಕಲ್ ಸಮೀಪದ ಹುಳದೇನಹಳ್ಳಿ ಗ್ರಾಮಕ್ಕೆ ನೂತನ ಸರ್ಕಾರಿ ಆಸ್ಪತ್ರೆ ಕಟ್ಟಡ ನಿರ್ಮಿಸಲು ಕೋಲಾರ ಜಿಲ್ಲಾ ಪಂಚಾಯಿತಿ ವತಿಯಿಂದ 1 ಕೋಟಿ ಮಂಜೂರಾಗಿರುವುದಾಗಿ ಟೇಕಲ್ ಕ್ಷೇತ್ರ ಜಿಪಂ ಸದಸ್ಯೆ ರತ್ನಮ್ಮ ನಂಜೇಗೌಡರು ತಿಳಿಸಿದರು.
ಅವರು ಮಂಗಳವಾರ ಹುಳದೇನಹಳ್ಳಿಯ ನೂತನ ಆಸ್ಪತ್ರೆಯ ಸ್ಥಳ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಅಂದಾಜು ವೆಚ್ಚದ ಪಟ್ಟಿ ಮತ್ತು ನಕ್ಷೆ ಪರಿಶೀಲನೆ ನಡೆಸಿ ಜು. 5ರಂದು ಇದರ ಶಂಕುಸ್ಥಾಪನೆಗೆ ಮಾಲೂರು ಶಾಸಕ ಮಂಜುನಾಥಗೌಡರು ಆಗಮಿಸಲಿದ್ದಾರೆ ಎಂದು ತಾಪಂ ಮಾಜಿ ಅಧ್ಯಕ್ಷ ಕೆ.ವೈ. ನಂಜೇಗೌಡರು ತಿಳಿಸಿದರು. ಅದೇ ದಿನ ಓವರ್‌ಹೆಡ್ ಟ್ಯಾಂಕ್, ಕಾಂಕ್ರಿಟ್ ರಸ್ತೆ, ಅಂಗನವಾಡಿ ಕೇಂದ್ರ ಹಾಗೂ ಶಾಲಾ ಕಟ್ಟಡದ ಉದ್ಘಾಟನೆ ಇದೆ ಎಂದು ತಿಳಿಸಿದರು.  ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್‌ಗೌಡ, ಗ್ರಾಪಂ ಅಧ್ಯಕ್ಷ ರವಿ, ಸದಸ್ಯ ಮಂಜುನಾಥ್, ಚಲಪತಿ, ವೆಂಕಟೇಶ್, ಕೂರ್ನಹೊಸಹಳ್ಳಿ ಸಾದಪ್ಪ, ಗುತ್ತಿಗೆದಾರ ಕೃಷ್ಣೇಗೌಡ, ಹರೀಶ್‌ಕುಮಾರ್, ವೈದ್ಯೆ ಡಾ. ಶೃತಿ  ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement