ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕೌನ್ಸಿಲರ್‌ಗಳಿಂದಲೇ ಶಿಡ್ಲಘಟ್ಟ ಪುರಸಭೆಗೆ ಮುತ್ತಿಗೆ

Srinivasa Murthy VN
Updated On : 26 Jun 2013, 11:40 am

ಶಿಡ್ಲಘಟ್ಟ: ಪಟ್ಟಣದ ಎಲ್ಲ ವಾರ್ಡ್‌ಗಳಿಗೆ ಸೇರಿದ ಕೌನ್ಸಿಲರ್‌ಗಳಿಂದ ಪುರಸಭೆಗೆ ಮುತ್ತಿಗೆ ಹಾಕಿದ ಪ್ರಕರಣ ನಡೆಯಿತು.
ಎಲ್ಲ ವಾರ್ಡ್‌ಗಳಲ್ಲಿ ಪುರಸಭೆಯ ನಿರ್ಲಕ್ಷ್ಯದಿಂದ ಸ್ಚಚ್ಛತೆಯಿಲ್ಲದೆ ರಸ್ತೆಗಳಲ್ಲಿ, ಚರಂಡಿಗಳಲ್ಲಿ ಕಸ ತುಂಬಿದ್ದು ವಿಲೇವಾರಿ ಮಾಡುವವರಿಲ್ಲದೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಸರಿಯಿಲ್ಲದಿರುವುದರಿಂದ ಜನರು ಆಯಾ ವಾರ್ಡ್‌ನ ಕೌನ್ಸೆಲರ್‌ಗಳ ವಿರುದ್ಧ ಕಿಡಿಕಾರಿದ್ದರು. ಇದರಿಂದ ಆಕ್ರೋಶಗೊಂಡ ಕೌನ್ಸೆಲರ್‌ಗಳು ಪುರಸಭೆಗೆ ಮುತ್ತಿಗೆ ಹಾಕಿದರು.
ಪುರಸಭೆಯಲ್ಲಿ 18 ಕಾರ್ಮಿಕರು ಕಸ ಎತ್ತುವ ಕೆಲಸ ಮಾಡುತ್ತಿದ್ದು ಸದ್ಯಕ್ಕೆ 7 ಜನ ಮಾತ್ರ ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಮಿಕ್ಕವರು ರಿಜಿಸ್ಟಾರ್‌ನಲ್ಲಿ ಸಹಿ ಹಾಕಿ ಬೇರೆ ಕೆಲಸಗಳಲ್ಲಿ ಮಗ್ನರಾಗಿ ತಮ್ಮ ಸ್ವಂತ ಸಂಪಾದನೆಯಲ್ಲಿ ತೊಡಗಿದ್ದಾರೆ. ಕೆಲಸ ಮಾಡದೆ ನಕಲಿ ಬಿಲ್‌ಗಳನ್ನು ಪಾಸ್ ಮಾಡಿಸಿಕೊಳ್ಳುತ್ತಿದ್ದಾರೆಂದು ಎಲ್ಲ ವಾರ್ಡ್‌ನ ಕೌನ್ಸಿಲರ್‌ಗಳು ಆಕ್ರೋಷ ವ್ಯಕ್ತಪಡಿಸಿದರು.
ಕಸ ವಿಲೇವಾರಿಯ ವಿಭಾಗದ ದಿಲೀಪ್ ಹಾಗೂ ಮೇರಿಯವರು ಎಷ್ಟು ಸಲ ದೂರು ಕೊಟ್ಟರೂ ಅದಕ್ಕೆ ಸರಿಯಾಗಿ ಪ್ರತಿಕ್ರಿಯೆ ನೀಡುತ್ತಿಲ್ಲ. ಕಾರ್ಮಿಕರ ಕೈಯಲ್ಲಿ ಸರಿಯಾಗಿ ಕೆಲಸ ಮಾಡುವಂತೆ ಮಾಡುವ ಸಾಮರ್ಥ್ಯ ಅವರಿಗಿಲ್ಲ. ಹಾಗಾಗಿ ಕೂಡಲೇ ಅವರನ್ನು ವಜಾ ಮಾಡಬೇಕೆಂದು, ಅಧಿಕಾರಿಗಳನ್ನು ಆಗ್ರಹಿಸಿದರು.
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಧ್ವಜಾರೋಹಣ ಮಾಡುವ ಸಮಯದಲ್ಲಿ ಪೌರ ಕಾರ್ಮಿಕರು ಸ್ವಚ್ಛತೆಯನ್ನು ಮಾಡಲು ಬಂದಿದ್ದು ಇದು ಅಧಿಕಾರಿ ವರ್ಗಕ್ಕೆ ಶೋಭೆ ತರುವಂತಹದ್ದಲ್ಲ ಎಂದು ಹೇಳಿದರು.
ಪುರಸಭೆಯ ಕಸ ವಿಲೆವಾರಿ ಟೆಂಡರನ್ನು ಎ.ಬಿ.ಆರ್ ಎಂಟರ್‌ಪ್ರೈಸಸ್‌ನ ವರದರಾಜು(ದೊಡ್ಡಬಳ್ಳಾಪುರ) ಎನ್ನುವವರು ಗುತ್ತಿಗೆಯನ್ನು ಪಡೆದಿದ್ದು ಕಸ ಸರಿಯಾಗಿ ವಿಲೆವಾರಿ ಮಾಡುತ್ತಿಲ್ಲ. ಅದಕ್ಕಾಗಿ ಅವರಿಗೆ ನೋಟಿಸ್ ಜಾರಿ ಮಾಡಲಾಗಿದ್ದರೂ ಸ್ಪಂದಿಸಿಲ್ಲ. ಹೀಗಾಗಿ ಮರು ಟೆಂಡರ್ ಕರೆಯಬೇಕೆಂದು ಅಧಿಕಾರಿ ವರ್ಗದವರು ಅಭಿಪ್ರಾಯಪಟ್ಟರು.
ಹನುಮಂತಪ್ಪ ಛಲ: ಪುರಸಭೆಯ ಮುಖ್ಯಾಧಿಕಾರಿ ಹನುಮಂತಪ್ಪನವರು ಮಾತನಾಡಿ ನಾಳೆಯಿಂದಲೇ ಸ್ವಚ್ಛತೆಯ ಬಗ್ಗೆ ಗಮನ ಹರಿಸುವುದಾಗಿ, ತಾನೇ ಕುದ್ದಾಗಿ ನಿಂತು ಕಸವನ್ನು ವಿಲೇವಾರಿ ಮಾಡಿಸುವುದಾಗಿ, 10 ದಿನಗಳಲ್ಲಿ ಉಳಿದ ಕಸವನ್ನು ತೆಗೆಸುವುದಾಗಿ ಹಾಗೂ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನ ಮಾಡುವುದಾಗಿ ಹೇಳಿದರು. ತನ್ನಿಂದಾಗದೆ ಇದ್ದ ಪಕ್ಷದಲ್ಲಿ ಸ್ವತಃ ಶಿಡ್ಲಘಟ್ಟ ಪುರಸಭೆಯನ್ನು ಬಿಟ್ಟು ಹೋಗುವುದಾಗಿ ತಿಳಿಸಿದರು.
ಪುರಸಭೆಯ ಎಲ್ಲ ಕೌನ್ಸೆಲರ್‌ಗಳು, ಪುರಸಭೆಯ ಅಧಿಕಾರಿಗಳು, ವೃತ್ತ ನಿರೀಕ್ಷಕ ಯೋಗಿಂದ್ರನಾಥ್, ಪುರಠಾಣೆ ಪಿ.ಎಸ್.ಐ ಪುರುಷೋತ್ತಮ್, ಗ್ರಾಮಾಂತರ ಠಾಣೆ ಪಿ.ಎಸ್.ಐ ಹನುಮಂತಪ್ಪ, ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement