ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಪೊಲೀಸ್ ವಸತಿ ಗೃಹಕ್ಕೆ ಭೇಟಿ

Srinivasa Murthy VN
Updated On : 26 Jun 2013, 11:39 am

ಕ.ಪ್ರ. ವಾರ್ತೆ ಟೇಕಲ್ ಜೂ.26
ಇಲ್ಲಿನ ಶಿಥಿಲಾವಸ್ಥೆಯಲ್ಲಿರುವ ಪೊಲೀಸ್ ವಸತಿ ಗೃಹಗಳ ವರದಿ ಕುರಿತು ಶಾಸಕ ಮಂಜುನಾಥಗೌಡರ ಸೂಚನೆ ಮೇರೆಗೆ ಟೇಕಲ್ ಜಿಪಂ ಸದಸ್ಯೆ ರತ್ನಮ್ಮನಂಜೇಗೌಡ, ತಾಪಂ ಮಾಜಿ ಅಧ್ಯಕ್ಷ ಕೆ.ವೈ. ನಂಜೇಗೌಡರು ಬುಧವಾರ ಬೆಳಗ್ಗೆ ಕೆ.ಜಿ. ಹಳ್ಳಿ ಗ್ರಾಪಂ ಹಿಂಭಾಗದ ಪೊಲೀಸ್ ವಸತಿ ಗೃಹಗಳನ್ನು ವೀಕ್ಷಿಸಿದರು.
ಈ ಕುರಿತು ಕನ್ನಡಪ್ರಭದಲ್ಲಿ 'ಶಿಥಿಲಾವಸ್ಥೆಯಲ್ಲಿ ಪೊಲೀಸ್ ವಸತಿ ಗೃಹಗಳು' ಎಂಬ ಶೀರ್ಷಿಕೆಯಡಿ ಜೂ. 25ರಂದು ಸಚಿತ್ರ ವರದಿ ಪ್ರಕಟಗೊಂಡಿತ್ತು. ಈ ಸಂದರ್ಭದಲ್ಲಿ ತಾಪಂ ಮಾಜಿ ಅಧ್ಯಕ್ಷ ಕೆ.ವೈ. ನಂಜೇಗೌಡರು ಮಾತನಾಡಿ, ಶಾಸಕ ಮಂಜುನಾಥಗೌಡರ ಮುಖೇನ ಜಿಲ್ಲಾಡಳಿತದ ಮೇಲೆ ಒತ್ತಡ ತರುವುದಾಗಿ, ಪೊಲೀಸ್ ವಸತಿ ಗೃಹಗಳನ್ನು ಪುನರ್ ನಿರ್ಮಿಸಲು ಸಹಾಯಕವಾಗುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಬಳಿ ಚರ್ಚಿಸಲಾಗುತ್ತದೆ ಎಂದರು.
ಜಿಪಂ ಸದಸ್ಯೆ ರತ್ನಮ್ಮನಂಜೇಗೌಡರು ಪ್ರತಿಕ್ರಿಯಿಸಿ ಕನ್ನಡಪ್ರಭ ಸುದ್ದಿ ನಿಜಕ್ಕೂ 35 ವರ್ಷಗಳ ಹಳೆಯದಾದ ವಸತಿ ಗೃಹಗಳ ಬಗ್ಗೆ ಸಾಮಾಜಿಕ ಕಳಕಳ ತೋರಿಸಿ ಜನಪ್ರತಿನಿಧಿಗಳು ಇತ್ತ ಗಮನಹರಿಸುವಂತೆ ಮಾಡಿದೆ. ಈ ಬಗ್ಗೆ ಶೀಘ್ರ ನೂತನ ಕಟ್ಟಡದ ವ್ಯವಸ್ಥೆ ಮಾಡಲು ಜಿಪಂ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗುತ್ತದೆ ಎಂದರು. ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್.ವಿ. ಚಂದ್ರಶೇಖರ್‌ಗೌಡ, ಟೇಕಲ್ ಗ್ರಾಪಂ ಮಾಜಿ ಅಧ್ಯಕ್ಷ ಎಸ್.ಜಿ. ರಾಮಮೂರ್ತಿ, ರಾಮಕೃಷ್ಣಪ್ಪ, ಕೆ.ಜಿ. ಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಮಂಜುನಾಥ್, ಮುಖಂಡ ಟೇಕಲ್ ಆಂಜಿನಪ್ಪ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement