ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನೆರೆ ಸಂತ್ರಸ್ತರಿಗಾಗಿ ಆರ್‌ಎಸ್‌ಎಸ್ ಧನ ಸಂಗ್ರಹ

Srinivasa Murthy VN
Updated On : 28 Jun 2013, 12:25 pm

ಕ.ಪ್ರ. ವಾರ್ತೆ ಮಾಲೂರು ಜೂ.27
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಕೇದಾರನಾಥ, ಬದರೀನಾಥ್ ಸಹಿತ ಉತ್ತರಾಖಂಡದ ನೆರೆ ಸಂತ್ರಸ್ತರಿಗಾಗಿ ಧನಸಂಗ್ರಹಿ,ದರು.  
ಪಟ್ಟಣದ ಎಲ್ಲ ಭಾಗಗಳಲ್ಲೂ ಎರಡು ದಿನಗಳ ಕಾಲ ಸಂಚರಿಸಿ ರು.50,991 ಧನ ಸಂಗ್ರಹ ಮಾಡಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಸೇವಾ ಪ್ರಮುಖ್ ಗೋವಿಂದರಾಜು ಮಾತನಾಡಿ, ನೆರೆ ಸಂತ್ರಸ್ತರಿಗಾಗಿ ಮಾಡಿದ ನಿಧಿ ಸಂಗ್ರಹಕ್ಕೆ ಉತ್ತಮ ಸ್ಪಂದನೆ ಸಿಕ್ಕಿದ್ದು, ಪಟ್ಟಣದ ಜನತೆಗೆ ಅಭಾರಿಯಾಗಿದ್ದೇವೆ ಎಂದರು.
ಈಗ ಸಂಗ್ರಹವಾಗಿರುವ ಹಣವನ್ನು ಕೆನರಾ ಬ್ಯಾಂಕ್ ಖಾತೆ ನಂ.0789101009327 ರಲ್ಲಿ ಹಾಕಲಾಗಿದೆ ಎಂದು ತಿಳಿಸಿದರು.  ಸಂಘಟನೆ ಸೂರ್ಯನಾರಾಯಣ್‌ರಾವ್ ಮಾತನಾಡಿ, ಪಟ್ಟಣದಲ್ಲಿ ದಾನಿಗಳು ನೀಡಿದ ಬಟ್ಟೆ ಹಾಗೂ ಕಂಬಳಿ ಗಳನ್ನು ನಯವಾಗಿ ತಿರಸ್ಕರಿಸಲಾಗಿದ್ದು, ಉತ್ತರಾಂಚಲದಲ್ಲಿ ನೆರೆ ಸಂತ್ರಸ್ತರಿಗೆ ಬಟ್ಟೆ-ಕಂಬಳಿಗಳಿಕ್ಕಿಂತ ಮೆಡಿಸಿನ್, ಊಟ ಹಾಗೂ ಪ್ರಯಾಣ ವೆಚ್ಚ ಭರಿಸಬೇಕಾಗಿರುವುದರಿಂದ ನಗದು ಹಣವನ್ನು ಪಡೆದು ಸಂತ್ರಸ್ತರ ಖಾತೆಗೆ ಹಾಕಲಾಗುತ್ತಿದೆ. ತಾಲೂಕಿನಲ್ಲಿ ನೆರೆ ಸಂತ್ರಸ್ತರಿಗಾಗಿ ಧನ ಸಹಾಯ ಮಾಡ ಬಯಸುವರು ಕೆನರಾ ಬ್ಯಾಂಕ್ ನಲ್ಲಿರುವ(ಖಾತೆ ನಂ.0789101009327) ನೆರೆ ಸಂತ್ರಸ್ತರ ನಿಧಿಗೆ ಕಳುಹಿಸಬೇಕಾಗಿ ಮನವಿ ಮಾಡಿದ್ದಾರೆ. ಜಿಲ್ಲಾ ಕಾರ್ಯದರ್ಶಿ ಉಮೇಶ್, ತಾಲೂಕು ಕಾರ್ಯದರ್ಶಿ ಶ್ರೀನಿವಾಸ್ ಮೂರ್ತಿ  ಮತ್ತಿತರರು ಉಪಸ್ಥಿತರಿದ್ದರು.

ರಸ್ತೆ ಒತ್ತುವರಿ ಖಂಡಿಸಿ ಗ್ರಾಮಸ್ಥರ ಪ್ರತಿಭಟನೆ
ಕ.ಪ್ರ. ವಾರ್ತೆ ಮಾಲೂರು ಜೂ.27
ಮಾಲೂರು ತಾಲೂಕಿನ ಕಸಬಾ ಹೋಬಳಿಯ ಗಂಗಾಪುರದಲ್ಲಿ ನಿರ್ಮಾಣವಾಗುತ್ತಿರುವ ಪ್ರತಿಷ್ಠಿತ ಐಟಿಸಿ ಕಂಪನಿಯು ಗ್ರಾಮದ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದೆ ಎಂದು ಅಪಾದಿಸಿ  ಗ್ರಾಮಸ್ಥರು ಕಂಪನಿ ಎದುರು ಪ್ರತಿಭಟನೆ ನಡೆಸಿದರು.
ಗ್ರಾಮದ ಸರ್ವೆ ನಂ.88, 32 ರಲ್ಲಿ ಐಟಿಸಿ ಕಂಪನಿ ಸರ್ಕಾರಿ ನಕಾಶೆ ದಾರಿಯನ್ನು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಗ್ರಾಮದ ರಸ್ತೆಯನ್ನು ನುಂಗು ಹಾಕುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಗ್ರಾಮಸ್ಥರು ರಸ್ತೆಯಲ್ಲಿ ಒಡಾಡಲು ತೊಂದರೆಯಾಗಲಿದ್ದು, ಈ ನಿಟ್ಟಿನಲ್ಲಿ  ಕಂಪನಿ ರಸ್ತೆ ಒತ್ತುವರಿ ತೆರವುಗೊಳಿಸಬೇಕು ಎಂದು ಪ್ರತಿಭಟನಾಕಾರರು ಅಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಅಗಮಿಸಿದ ಕಂದಾಯ ಅಧಿಕಾರಿಗಳು, ಸ್ಥಳ ಪರಿಶೀಲನೆ ನಡೆಸಿ ಒತ್ತುವರಿ ಕಾರ್ಯಕ್ಕಾಗಿ ಬಳಸುತ್ತಿದ್ದ ಜೆಸಿಬಿ ತಡೆ ಹಿಡಿದರು.
ಕರ್ನಾಟಕ ರಕ್ಷಣಾಸೇನೆ ಪದಾಧಿಕಾರಿಗಳಾದ ತ.ರಾ.ವೆಂಕಟೇಶ್, ಎಸ್.ರಾಜಣ್ಣ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಿ.ನಾಗರಾಜ್, ಮುನಿಸಿದ್ಧಪ್ಪ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement