ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬಾರದ ಮಳೆ: ಟೊಮೇಟೋ ಬೆಳೆ ಕುಂಠಿತ

Srinivasa Murthy VN
Updated On : 28 Jun 2013, 12:25 pm

ಕ.ಪ್ರ. ವಾರ್ತೆ ಕೆ.ಜಿ.ಎಫ್ ಜೂ.27
ಸರ್ಕಾರ ಬರ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿರುವ ಕೋಲಾರ ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ಮಳೆಯಿಲ್ಲದೆ ಬೆಳೆ ಬೆಳೆಯಲು ಪರದಾಡುತ್ತಿರುವ ರೈತರಿಗೆ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತಿವೆ.
 ಮರಳು ದಂಧೆಯಿಂದ ಭೂಮಿಯಲ್ಲಿ ನೀರಿನ ಮಟ್ಟ ಕುಸಿದಿದ್ದು ಸಾವಿರಾರು ಅಡಿಗಳು ಕೊರೆದರೂ ನೀರು ಸಿಗುತ್ತಿಲ್ಲ ಜನರಿಗೆ ಮತ್ತು ಜಾನುವಾರುಗಳಿಗೆ ಕುಡಿಯಲು ನೀರಿಲ್ಲ, ರೈತರಿಗೆ ಸರಿಯಾಗಿ ರಸಗೊಬ್ಬರ ಸಿಗುತ್ತಿಲ್ಲ. ಇದರ ಮಧ್ಯೆ ವಿದ್ಯುತ್ ಕಡಿತದ ತೊಂದರೆ ಇಷ್ಟೆಲ್ಲ ಸಮಸ್ಯೆಗಳಿಗೆ ಎದೆದುಂದದ ರೈತರು ಸಾಲ ಮಾಡಿ ವಿವಿಧ ಬೆಳೆಗಳನ್ನು ಬೆಳೆದು ಈ ದೇಶಕ್ಕೆ ಮತ್ತು ಕರ್ನಾಟಕ ರಾಜ್ಯಕ್ಕೆ ಅನ್ನ ನೀಡುತ್ತಿದ್ದಾರೆ.
ಈ ಬಾರಿ ಮಳೆಯಾಗುವ ನಿರೀಕ್ಷೆಯಲ್ಲಿರುವ ರೈತರಿಗೆ ಮಳೆರಾಯ ಕೈ ಕೊಡುತ್ತಿದ್ದಾನೆ. ರಾಜ್ಯದ ಇತರೆ ಜಿಲ್ಲೆಗಳಲ್ಲಿ ಉತ್ತಮ ಮಳೆ ಆಗಿದೆ. ಆದರೆ ಬರಪೀಡಿತ ಪ್ರದೇಶ ಕೋಲಾರ ಜಿಲ್ಲೆಗೆ ಮಾತ್ರ ವರುಣ ಕೃಪೆ ತೋರುತ್ತಿಲ್ಲ. ಹಲವು ವರ್ಷಗಳಿಂದ ಮಳೆಯಾಗದ ಕಾರಣ ಕೋಲಾರ ಜಿಲ್ಲೆಯಲ್ಲಿ ಟೋಮೆಟೊ ಬೆಳೆ ಕುಂಠಿತಗೊಂಡಿತ್ತು.
ಆದರೆ ಕೆಜಿಎಫ್ ಕ್ಷೇತ್ರದ ಬೇತಮಂಗಲ ವ್ಯಾಪ್ತಿಯ ದೊಡ್ಡಕಾರಿ ಗ್ರಾಮದ ನಾಗೇಶ್ ಎಂಬ ರೈತ ತಮ್ಮ ಹೊಲದಲ್ಲಿ ಅಭಿನಯ ಟೋಮೆಟೊ ಬೀಜದ  ಬಿತ್ತನೆ ಮಾಡಿ ಉತ್ತಮ ಬೆಳೆ ಬೆಳೆದಿದ್ದಾರೆ. ಸುಮಾರು 7 ಅಡಿಗಳ ಉದ್ದ ಬೆಳೆದಿರುವ ಟೋಮೆಟೊ ಬೆಳೆಗೆ ಈ ಬಾರಿ ಉತ್ತಮ ಲಾಭವನ್ನು ಪಡೆಯುವಲ್ಲಿ ನಾಗೇಶ್ ಎಂಬ ರೈತ ಸಫಲರಾಗಿದ್ದಾರೆ.
ಅದೇ ರೀತಿ ತೋಟಗಾರಿಕೆ ಇಲಾಖೆ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ರೈತರ ಹೊಲ ತೋಟಗಳಿಗೆ ಭೇಟಿ ನೀಡಿ ಸರಿಯಾದ ಸಮಯಕ್ಕೆ ಸಿಗುವ ಬೆಲೆ ಮತ್ತು ಗೊಬ್ಬರದ ಮಾಹಿತಿ ಮತ್ತು ವಿವರಣೆಗಳನ್ನು ರೈತರಿಗೆ ನೀಡದೆ ಇರುವ ಕಾರಣದಿಂದ ರೈತನು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗದೆ ಸಾಲಭಾದೆಗೆ ಸಿಲುಕಿ ಆತ್ಮಹತ್ಯೆ ದಾರಿಯನ್ನು ಹಿಡಿಯುವುದು ತಪ್ಪಿಸಬೇಕು ಎಂಬುದು ರೈತ ಸಂಘದ ಮುಖಂಡರ ಒತ್ತಾಯವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement