ಮಾನವನ ಉಳಿವಿಗೆ ಪರಿಸರ ರಕ್ಷಣೆ ಆಗಬೇಕು; ಪ್ರವಚನಕಾರ ತಳಗವಾರ ಆನಂದ್ ಪ್ರತಿಪಾದನೆ
ಕ.ಪ್ರ. ವಾರ್ತೆ ಚಿಂತಾಮಣಿ ಜೂ.27
ನಮ್ಮ ಪೂರ್ವಜರ ದೃಷ್ಟಿಕೋನ ವಿಶಾಲ. ಅವರ ಗುರಿ ವಿಶ್ವಶಾಂತಿ. ಅವರ ಆದರ್ಶ ಮಾನವೀಯತೆ, ಇತರರ ಒಳಿತಿಗಾಗಿ ಶ್ರಮಿಸುವುದರಲ್ಲಿ ಜೀವನದ ಸಾರ್ಥಕತೆ ಅಡಗಿದೆ ಎಂದು ನಂಬಿದವರು ಎಂದು ಪ್ರವಚನಕಾರ ತಳಗವಾರ ಟಿ.ಎಲ್.ಆನಂದ್ ಅಭಿಪ್ರಾಯಪಟ್ಟರು.
ಇಲ್ಲಿನ ಕೈವಾರ ಯೋಗಿನಾರೇಯಣ ಮಠದಲ್ಲಿ ನಡೆದ ಹುಣ್ಣಿಮೆ ವಿಶೇಷ ಕಾರ್ಯಕ್ರಮದಲ್ಲಿ ಆಧ್ಯಾತ್ಮ ಚಿಂತನೆ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು. ಮಾನವನ ಯೋಗಕ್ಷೇವು ಕುರಿತು ಚಿಂತಿಸುವಾಗ ತನ್ನ ಒಳಿತಿಗಾಗಿ ಪರಿಸರ ಕಾಪಾಡುವುದು ಆತನ ಪರಮ ಜವಾಬ್ದಾರಿಯಾಗಿದೆ. ಪ್ರಕೃತಿಯಲ್ಲಿ ಮಾನವನಿಗೆ ಅಗ್ರಸ್ಥಾನ. ಎಲ್ಲಾ ಜೀವರಾಶಿಗಳಿಗಿಂತಲೂ ಮಿಗಿಲಾದ ಬುದ್ದಿಶಕ್ತಿ. ಇದನ್ನು ಪ್ರಕೃತಿ ಮಾನವನಿಗೆ ದಯಪಾಲಿಸಿದೆ ಎಂಬುದನ್ನು ಅರಿತುಕೊಳ್ಳಬೇಕು. ವಿಚಿತ್ರವೇನೆಂದರೆ ತನ್ನನ್ನು ತಾನು ಅರ್ಥ ಮಾಡಿಕೊಳ್ಳುವುದಕ್ಕಿಂತಲೂ ಹೆಚ್ಚಾಗಿ ಜಗತ್ತಿನ ಮತ್ತು ಹೊರಜಗತ್ತಿನ ವಿಷಯಗಳಲ್ಲಿ ಆಸಕ್ತನಾಗಿದ್ದಾನೆ ಎಂದರು. ಇದೆ ಸಂದರ್ಭದಲ್ಲಿ ಹುಣ್ಣಿಮೆ ವಿಶೇಷ ಕೈಂಕರ್ಯದಲ್ಲಿ ಸದ್ಗುರು ತಾತಯ್ಯ ಉತ್ಸವ ಮೂರ್ತಿಗೆ ವಿಶೇಷ ಅಭಿಷೇಕ ಮತ್ತು ಅಷ್ಟಾವಧಾನ ಸೇವೆ ನೆರವೇರಿಸಿ, ರಥೋತ್ಸವ ನಡೆಸಲಾಯಿತು. ರಥೋತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು.
ನೆಪಮಾತ್ರಕ್ಕೆ ನಡೆದ ಪ್ರಗತಿ ಪರಿಶೀಲನಾ ಸಭೆ
ಕ.ಪ್ರ. ವಾರ್ತೆ ್ಣ ಚಿಂತಾಮಣಿ ್ಣ ಜೂ.27
ಇಲ್ಲಿನ ತಾಲೂಕು ಪಂಚಾಯ್ತಿ ಕಾರ್ಯಾಲಯದಲ್ಲಿ ಗುರುವಾರ ನಡೆದ ವಿವಿಧ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಾಮಕವಾಸ್ತೆ ಮಾತ್ರ ನಡೆಯಿತು.
ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ಬೆಳಿಗ್ಗೆ 11 ಗಂಟೆಗೆ ನಡೆಯಬೇಕಿದ್ದ ವಿವಿಧ ಇಲಾಖೆಯ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆ ಎಂದು ಹೇಳಿದ ಇಒ, ಒಂದು ಗಂಟೆ ತಡವಾಗಿ ಕಾರ್ಯಕ್ರಮ ಪ್ರಾರಂಭಿಸಿದರು. ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳಾದ ಕಾಳಪ್ಪ, ಗೋಪಾಲಕೃಷ್ಣ, ನಾಗರಾಜು, ನರಸಿಂಹಮೂರ್ತಿ, ತಾಜ್ಉನ್ನೀಸಾ ಸೇರಿದಂತೆ ಇನ್ನೂ ಹಲವು ಅಧಿಕಾರಿಗಳುಸೇರಿದ್ದರು.
ಸಭೆಗೆ ಯಾವುದೇ ಕಡತ ತಾರದೆ, ಪೂರ್ವ ಸಿದ್ದತೆಗಳ ಬಗ್ಗೆ ಹೇಳದ ಇಒ ಏಕಾಏಕಿ ಶಿಡ್ಲಘಟ್ಟ ಕ್ಷೇತ್ರದ ಶಾಸಕರ ಅಧ್ಯಕ್ಷತೆ ಕಾರ್ಯಕ್ರಮ ರೂಪಿಸಿ ಅಧಿಕಾರಿಗಳನ್ನು ಬಂದ ಪುಟ್ಟ ಹೋದ ಪುಟ್ಟ ಎನ್ನುವಂತೆ ಕಾಟಾಚಾರಕ್ಕೆ ಕಾರ್ಯಕ್ರಮ ರೂಪಿಸಿದ್ದಾರೆ. ಮುಂದೆ ನಡೆಯುವ ಸಾಮಾನ್ಯ ಸಭೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಡತಗಳ ಜೊತೆ ಸಭೆಗೆ ಬಂದು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ತಾಲೂಕು ದಂಡಾಧಿಕಾರಿ ಎಂ.ಎನ್.ಮಂಜುನಾಥ್, ತಾಪಂ ಸಿಇಒ ಕೆ.ವಿ.ರೆಡ್ಡಪ್ಪ, ಅಧ್ಯಕ್ಷ ಶ್ರೀರಾಮರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.
ಅಪಘಾತ: ತಂದೆ, ಮಗಳು, ಮೊಮ್ಮಗಳು ಸಾವು
ಕೋಲಾರ: ಶ್ರೀನಿವಾಸಪುರ ಮಾರ್ಗದ ವೀರಾಪುರ ಗೇಟ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತವೊಂದರಲ್ಲಿ ಒಂದೇ ಕುಟುಂಬದ ತಂದೆ, ಮಗಳು ಹಾಗೂ ಮೊಮ್ಮಗಳು ಮೃತಪಟ್ಟು ಇತರೆ ಇಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ. ತಾಲೂಕಿನ ಹೊಳೂರು ಗ್ರಾಮದ ವ್ಯಾಪಾರಿ ಪ್ರಕಾಶ್ ಬಾಬು (51), ಮಗಳು ಮಾನಸ (20) ಮತ್ತು ಮೊಮ್ಮಗಳು 15 ದಿನದ ಹಸುಗೂಸು ಮೃತಪಟ್ಟ ದುರ್ದೈವಿಗಳಾಗಿದ್ದು ಪ್ರಕಾಶ್ ಬಾಬು ಅವರ ಪತ್ನಿ ಪುಷ್ಪಮ್ಮ, ಮಗುವಿನ ತಾಯಿ ರಶ್ಮಿ ತೀವ್ರ ಗಾಯಗೊಂಡು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.15 ದಿನಗಳ ಹಸುಗೂಸುವಿನ ಆರೋಗ್ಯ ಸರಿಯಿಲ್ಲದ ಕಾರಣ ಮಗುವಿಗೆ ಚಿಕಿತ್ಸೆ ಕೊಡಿಸಲೆಂದು ಬುಧವಾರ ರಾತ್ರಿ ಮಾರುತಿ ಓಮ್ನಿ ವ್ಯಾನ್ನಲ್ಲಿ ಬರುತ್ತಿದ್ದ ವೇಳೆ ಎದುರಿನಿಂದ ವೇಗವಾಗಿ ಬರುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದಿದ್ದರಿಂದ ಈ ಘಟನೆ ನಡೆದಿದೆ. ಅಪಘಾತದಲ್ಲಿ ಮಾರುತಿ ಓಮ್ನಿ ಕಾರು ನಜ್ಜುಗುಜ್ಜಾಗಿದ್ದು, ಇದರಲ್ಲಿ ಸಿಲುಕಿದ್ದ ಪ್ರಕಾಶ್ ಬಾಬು ಅವರ ಶವವನ್ನು ಪೋಲೀಸರು ಹಾಗೂ ಸಾರ್ವಜನಿಕರು ಪ್ರಯಾಸಪಟ್ಟ ಬಿಡಿಸಿದ್ದಾರೆ. ಕಾರಿನ ಚಾಲಕ ಪರಾರಿಯಾಗಿದ್ದಾನೆ. ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.