ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ಸಕಾಲದಲ್ಲಿ ಅರ್ಜಿ ವಿಲೇವಾರಿ ಆಗದಿದ್ದಲ್ಲಿ ಕಟ್ಟುನಿಟ್ಟಿನ ಕ್ರಮ'

Srinivasa Murthy VN
Updated On : 28 Jun 2013, 12:23 pm

ಶಿಡ್ಲಘಟ್ಟ: ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಲೋಕಾಯುಕ್ತ ಅದಾಲತ್ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಲೋಕಾಯುಕ್ತ ಇನ್ಸ್‌ಪೆಕ್ಟರ್ ನಂಜೇಗೌಡ ಮಾತನಾಡಿ, ಬಂದಿರುವ ಅರ್ಜಿಗಳನ್ನು ಪರಿಶೀಲಿಸಲು ಸಮಯ ನಿಗದಿ ಮಾಡಿದ್ದು, ನಿರ್ದಿಷ್ಟ ಸಮಯದೊಳಗೆ ಪರಿಷ್ಕಾರವಾಗದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದರು.
ಹಾಲಿ ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿ ಗ್ರಾಮ ಪಂಚಾಯಿತಿಯಿಂದ ಆಗುತ್ತಿರುವ ಅನ್ಯಾಯ, ಭೂ ದಾಖಲೆಗಳಲ್ಲಿ ಖಾತೆ ಬದಲಾವಣೆ, ಸುಂಕ ವಸೂಲಿ ಅಕ್ರಮ ಸೇರಿದಂತೆ ಮತ್ತಿತರೆ  ವಿಚಾರಗಳ ಬಗ್ಗೆ ದೂರುಗಳು ಬಂದಿದ್ದು, ಹೆಚ್ಚಾಗಿ ಭೂ ದಾಖಲೆಗಳಲ್ಲಿ ಹೆಸರು ಬದಲಾವಣೆ ಬಗ್ಗೆ ಹೆಚ್ಚಿನ ದೂರುಗಳು ಬಂದಿದ್ದು, ಸಂಬಂದಪಟ್ಟ ದಾಖಲೆ ಒದಗಿಸುವ ತನಕ ಖಾತೆ ಬದಲಾವಣೆ ಮಾಡಬಾರದೆಂದು ದಾಖಲೆ ನೋಡಿ ಸರಿಯಾದ ನಿರ್ಣಯ ತೆಗೆದುಕೊಳ್ಳಬೇಕೆಂದು ತಪ್ಪಿದ್ದಲಿ, ಅದರ ಫಲಿತಾಂಶ ಅನುಭವಿಸಬೇಕಾಗುತ್ತದೆ ಎಂದು  ಸಂಬಂಧಿಸಿದ ಸಿಬ್ಬಂದಿಯನ್ನು ಎಚ್ಚರಿಸಿದರು.    ಸಾರ್ವಜನಿಕರು, ಅಧಿಕಾರಿಗಳು ಮಾಡಿರುವ ಅಕ್ರಮ ಆಸ್ತಿ ಹಾಗೂ ಗುಪ್ತ ವಿಷಯಗಳ ಬಗ್ಗೆ ಮಾಹಿತಿ ಒದಗಿಸಿದ್ದಲ್ಲಿ ಅವರ ಹೆಸರನ್ನು ಗುಪ್ತವಾಗಿರಿಸಲಾಗುವುದು ಎಂದು ತಿಳಿಸಿ ದರು.
ತಹಸೀಲ್ದಾರ್ ಹನುಮಂತಪ್ಪ, ರಾಜಸ್ವ ನೀರೀಕ್ಷಕ ಮಂಜುನಾಥ್, ಪುರ ಠಾಣೆ ಪಿಎಸ್‌ಐ ಪುರೋತ್ತಮ್, ಪುರಸಭೆ ಮುಖ್ಯಾಧಿಕಾರಿ ಹನುಮಂತಯ್ಯ  ಸೇರಿದಂತೆ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement