ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ದಲಿತರು ಉತ್ತಮ ನಾಗರಿಕರಾಗಲಿ: ಮುನ್ನಯ್ಯ ಕರೆ

Srinivasa Murthy VN
Updated On : 1 Jul 2013, 12:14 pm

ಕ.ಪ್ರ.ವಾರ್ತೆ, ಶಿಡ್ಲಘಟ್ಟ, ಜೂ.30
ಪ್ರತಿ ತಿಂಗಳ ಕೊನೆ ಭಾನುವಾರ ನಡೆಸುವ ದಲಿತರ ಕುಂದುಕೊರತೆ ಸಭೆಯನ್ನು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿತ್ತು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸಿ.ಎಂ. ಮುನ್ನಯ್ಯ ಮಾತನಾಡಿ, ದಲಿತರಿಗೆ ಮುಖ್ಯವಾಗಿ ಕಾಡುತ್ತಿರುವ ಸಮಸ್ಯೆ ಮದ್ಯಪಾನವಾಗಿದೆ. ಬೆಳಿಗ್ಗೆಯಿಂದ ಸಂಜೆವರೆಗೂ ಕುಡಿತದಲ್ಲಿ ತೊಡಗಿ ಕೆಲಸ ಕಾರ್ಯ ಮಾಡದೇ ಸೋಮಾರಿಗಳಾಗುತ್ತಿದ್ದಾರೆ. ದುಡಿಮೆ ಇಲ್ಲದೇ, ಹೆಂಡತಿ ಮಕ್ಕಳ ಮೇಲೆ ಅವಲಂಬಿತರಾಗುತ್ತಿದ್ದಾರೆ ಎಂದ ಅವರು, ಬಡತನದಿಂದಾಗಿ ಕೆಲವರು ವೇಶ್ಯಾವಾಟಿಕೆಗೂ ಮುಂದಾಗುತ್ತಿದ್ದಾರೆ. ದಲಿತರು ಇನ್ನಾದರೂ ಮನಸ್ಸು ಬದಲಿಸಿ, ಉತ್ತಮ ನಾಗರಿಕರಾಗಲು ಮುಂದಾಗಬೇಕು ಎಂದರು.
ಕೆಲವೆಡೆಯ ದಲಿತರ ಕಾಲೋನಿ, ಹಳ್ಳಿಗಳಲ್ಲಿ ಪರವಾನಗಿ ಇಲ್ಲದೆ ಅಕ್ರಮ ಮದ್ಯ ರಾಜಾರೋಷವಾಗಿ ಮಾರಾಟವಾಗುತ್ತಿದೆ. ಇದರಿಂದ ಸಮಾಜದ ಎಲ್ಲ ವರ್ಗದವರಿಗೂ ತೊಂದರೆಯಾಗುತ್ತಿದೆ.  10 ವರ್ಷದ ಹುಡುಗರಿಂದ ಹಿಡಿದು ಎಲ್ಲರೂ ಕುಡಿತದ ಚಟಕ್ಕೆ ಒಳಗಾಗಿದ್ದಾರೆ.  ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ಅಬಕಾರಿ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಬೇಕು ಎಂದರು.
ಅಬಕಾರಿ ಉಪ ನೀರಿಕ್ಷಕ ನಾರಾಯಣಪ್ಪ ಮಾತನಾಡಿ, ಅಕ್ರಮ ಮದ್ಯ ಮರಾಟಾದ ಬಗ್ಗೆ ಸೂಕ್ತ ಕ್ರಮ ಜರುಗಿಸುವ ಭರವಸೆ ನೀಡಿದರು. ಅಲ್ಲದೆ, ಸರ್ಕಾರದೊಂದಿಗೆ ದಲಿತ ನಾಯಕರು ಸಹಕರಿಸಿ, ಸಮಸ್ಯೆ ನಿವಾರಣೆಗೆ ನೆರವಾಗಲು ಕೋರಿದರು.
ವೃತ್ತ ನಿರೀಕ್ಷಕ ಯೋಗೇಂದ್ರನಾಥ್ ಮಾತನಾಡಿ, ಮುಂದಿನ ತಿಂಗಳು ನಡೆಯುವ ದಲಿತರ ಕುಂದುಕೊರತೆ ಸಭೆ ನಡೆಯುವ ವೇಳೆಗೆ ಸಮಸ್ಯೆಗಳನ್ನು ಗುರುತಿಸಿ, ಬಗೆಹರಿಸಲು ಪ್ರಯತ್ನಿಸಲಾಗುವುದು. ಅಂಕಿ ಅಂಶ ಸಮೇತ ವರದಿ ನೀಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಗ್ರಾಮಾಂತರ ಠಾಣೆ ಪಿಎಸ್‌ಐ ಹನುಮಂತಪ್ಪ, ದಿಬ್ಬೂರಹಳ್ಳಿ ಪಿಎಸ್‌ಐ ಸುರೇಶ್, ಟಿ.ಎಂ. ಸೀತಪ್ಪ, ತಾಲೂಕು ಖಜಾಂಚಿ ಡಿ.ಎಂ. ವೆಂಕಟೇಶ್ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement