ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ಸರ್ಕಾರದ ಹಣ ಅರ್ಹರಿಗೇ ತಲುಪಲಿ'

Srinivasa Murthy VN
Updated On : 1 Jul 2013, 12:14 pm

ಕ.ಪ್ರ.ವಾರ್ತೆ, ಗೌರಿಬಿದನೂರು, ಜೂ.30
ಸರ್ಕಾರದ ಯೋಜನೆಗಳಡಿ ಬಿಡುಗಡೆಯಾಗುವ ಹಣವನ್ನು ಅರ್ಹರಿಗೆ ತಲುಪಿಸುವಲ್ಲಿ ಅಧಿಕಾರಿಗಳು ಕಾಳಜಿ ವಹಿಸಬೇಕು ಎಂದು ತಾ.ಪಂ. ಅಧ್ಯಕ್ಷ ನಿರಂಜನ್ ತಿಳಿಸಿದರು.
ತಾ.ಪಂ. ಆವರಣದ ಸಾಮರ್ಥ್ಯ ಸೌಧದಲ್ಲಿ ಭಾನುವಾರ ನಡೆದ ಭೂಚೇತನ ಕಾರ್ಯಕ್ರಮದಡಿ ಅನುವುಗಾರರಿಗೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು.ಅಧಿಕಾರಿಗಳು ರೈತರ ಮಧ್ಯೆ ವಿಶ್ವಾಸ, ನಂಬಿಕೆ ಇದ್ದಾಗ ಮಾತ್ರ ಸಮಾಜ ಸುಧಾರಣೆ ಸಾಧ್ಯ ಎಂದರು.
ಕೃಷಿಕ ಸಮಾಜದ ತಾಲೂಕು ಶಾಖೆ ಅಧ್ಯಕ್ಷ ರಾಮಕೃಷ್ಣಾರೆಡ್ಡಿ ಮಾತನಾಡಿ, ಈ ಭಾಗದಲ್ಲಿ ಮಳೆ ಕಡಿಮೆ ಆಗಲು ಕಾರಣ ಕಾಡು ನಾಶಪಡಿಸಿರುವುದೇ ಆಗಿದೆ. ಮರ ಕಡಿಯುವುದು ಸುಲಭ. ಆದರೆ, ಮರ ಬೆಳೆಸುವುದಕ್ಕೆ ಸಾಕಷ್ಟು ಸಮಯ ಬೇಕಾಗಿರುತ್ತದೆ. ಸಸಿ ನೆಟ್ಟಿದರೇ ಸಾಲದು, ಅದರ ಪೋಷಣೆ ಕಡೆ ಸಹಾ ಗಮನಹರಿಸಬೇಕು ಎಂದರು.
ತಾ.ಪಂ. ಮಾಜಿ ಉಪಾಧ್ಯಕ್ಷ ಚೇತನ ಮಾತನಾಡಿ, ಮಳೆ ಕಡಿಮೆ ಬೀಳುವ ಪ್ರದೇಶ ನಮ್ಮದಾಗಿ ಇರುವುದರಿಂದ ಕಡಿಮೆ ನೀರಿನಿಂದ ಖುಷ್ಕಿ ಭೂಮಿಯಲ್ಲಿ ಸಾವಯುವ ಗೊಬ್ಬರವನ್ನು ಉಪಯೋಗಿಸಿ ಹೆಚ್ಚು ಇಳುವರಿ ಸಾಧಿಸಲು ರೈತರು ಭೂಚೇತನ ಯೋಜನೆಯನ್ನು ಅನುಷ್ಠಾನಗೊಳಿಸಿ ಆರ್ಥಿಕವಾಗಿ ಮುಂದುವರಿಯಬೇಕೆಂದರು.
ಸಸ್ಯರೋಗದ ಬಗ್ಗೆ ವಿಜ್ಞಾನಿಗಳಾದ ಡಾ.ಕರುಣ ರೈತರಿಗೆ ತರಬೇತಿ ನೀಡಿದರು. ಉತ್ತಮ ಇಳುವರಿಯ ಬೇಸಾಯದ ಬಗ್ಗೆ ಡಾ.ಗೀತಾ, ಕೀಟನಾಶಕಗಳ ವಿಚಾರವನ್ನು ಕಿಮಿನೋವಾ ಕಂಪನಿಯ ವಿಜ್ಞಾನಿ ಡಾ.ಸ್ವಾಮಿ  ತರಬೇತಿ ನೀಡಿದರು.
ಭೂಚೇತನ ಹಾಗೂ ಸುವರ್ಣ ಭೂಮಿ ಯೋಜನೆಗಳ ಬಗ್ಗೆ ಕೃಷಿ ಇಲಾಖೆಯ ಸಹಾಯ ನಿರ್ದೇಶಕರಾದ ಡಾ.ಅನುರೂಪ ತಿಳಿಸಿಕೊಟ್ಟರು. ತಾಲೂಕಿನಲ್ಲಿ 3250 ಎಕರೆ ಪ್ರದೇಶದಲ್ಲಿ ಭೂಚೇತನ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ ಎಂದು ತಿಳಿಸಿದರು.
ತಾ.ಪಂ. ಉಪಾಧ್ಯಕ್ಷರಾದ ಜಲಜಾ ಚಂದ್ರಶೇಖರ್, ಸದಸ್ಯರಾದ ಕೀಮ್ಲಾ ನಾಯಕ್, ರೈತ ವೆಂಕಟಾಚಲ, ಗಂಗಾಧರ್, ಪ್ರಭಾ, ಅಶ್ವತ್ಥಮ್ಮ, ಚೌಡಯ್ಯ ಮುಂತಾದವರು ಉಪಸ್ಥಿತರಾಗಿದ್ದರು. ಕೇಶವರೆಡ್ಡಿ ಸ್ವಾಗತಿಸಿ, ಶೋಭಾ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement