6 ಪ್ರಕರಣಗಳಲ್ಲಿ ಬೇಕಾಗಿದ್ದ ಮೂವರು ಕದೀಮರು ಪೊಲೀಸರ ವಶಕ್ಕೆ
ಕೋಲಾರಛ ನಗರದ ಮಹಾಲಕ್ಷ್ಮೀ ಬಡಾವಣೆ, ಷಾಹಿನ್ಷಾ ನಗರ ಮತ್ತು ಸುಲ್ತಾನ್ನಿಪ್ಪಸಂದ್ರದಲ್ಲಿ ಕಳೆದ 3 ತಿಂಗಳಲ್ಲಿ ನಡೆದಿದ್ದ ಆರು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಮೂವರು ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಷಾಹಿನ್ಷಾ ನಗರದ ಅಕ್ಬರ್ಖಾನ್, ಶಬ್ಬೀರ್ಹುಸೇನ್ ಹಾಗೂ ಜಮೀರ್ ಎಂಬುವರಾಗಿದ್ದು ಇವರು ನೀಡಿದ ಸುಳಿವಿನ ಮೇರೆಗೆ 5.50 ಲಕ್ಷ ರು.ಬೆಲೆಯ ಚಿನ್ನಾಭರಣ ಹಾಗೂ 40 ಸಾವಿರ ರು.ಮೌಲ್ಯದ ಗೃಹೋಪಯೋಗಿ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಕಳ್ಳರು ನ.10ರಂದು ರಾತ್ರಿ ಅನುಮಾನಾಸ್ಪದವಾಗಿ ತಿರುಗುತ್ತಿದ್ದಾಗ ಗಸ್ತಿನಲ್ಲಿದ್ದ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಪ್ರಕರಣಗಳು ಬೆಳಕಿಗೆ ಬಂದಿವೆ. ಆರೋಪಿ ಜಮೀರ್ ಎಂಬುವನೊಂದಿಗೆ ಸೇರಿಕೊಂಡು 6 ಕಡೆ ಕಳ್ಳತನ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲಾ ಎಸ್ಪಿ ಡಾ.ರಾಮ್ನಿವಾಸ್ ಸಪಟ್, ಎಎಸ್ಪಿ ಐ.ಎಂ.ಜಮೀರ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಅಶೋಕ್ಕುಮಾರ್, ಸಿಪಿಐ ಶಿವಕುಮಾರ್, ಪಿಎಸ್ಐಗಳಾದ ಕೆ. ಚಂದ್ರಪ್ಪ, ಸುಧಾಕರರೆಡ್ಡಿ ಹಾಗೂ ಸಿಬ್ಬಂದಿಯನ್ನು ಒಳಗೊಂಡ ತನಿಖಾ ತಂಡವನ್ನು ಆರೋಪಿಗಳ ಬಂಧನಕ್ಕಾಗಿ ರಚಿಸಲಾಗಿತ್ತು.