ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕುರುಬ ಸಮಾಜ ಸಂಘಟನೆಗೆ ಒತ್ತು

Srinivasa Murthy VN
Updated On : 12 Nov 2013, 12:21 pm

ಕ.ಪ್ರ.ವಾರ್ತೆ ಚಿಂತಾಮಣಿ ನ. 11
ಕುರುಬ ಸಮಾಜವನ್ನು ಆರ್ಥಿಕ, ಸಾಮಾಜಿಕ
ವಲಯ ಸೇರಿದಂತೆ ಎಲ್ಲಾ ರಂಗಗಳಲ್ಲಿಯೂ ಅಭಿವೃದ್ಧಿ ಪಡಿಸಲು ಹಳ್ಳಿಯಿಂದ ಪಟ್ಟಣ ಪ್ರದೇಶದವರೆಗೂ ಕುರುಬ ಸಂಘ ಸಂಘಟಿಸುತ್ತೇನೆ ಎಂದು ತಾಲೂಕು ಕುರುಬ ಸಂಘದ ನೂತನ ಅಧ್ಯಕ್ಷ ಚಿನ್ನಸಂದ್ರ ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ.
ಪಟ್ಟಣ ಹೊರ ವಲಯದ ಕನಂಪಲ್ಲಿ ಡೈರಿ ಮುಂಭಾಗದಲ್ಲಿರುವ ಕುರುಬ ಸಂಘದಲ್ಲಿ ತಾಲೂಕಿನ ವ್ಯಾಪ್ತಿಯ ಎಲ್ಲಾ ಮುಖಂಡರು ಪದಾಧಿಕಾರಿಗಳು ಸಭೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಿದ ನಂತರ ಕೃತಜ್ಞತೆ ಸಲ್ಲಿಸಿ ಮಾತನಾಡಿದರು.
ರಾಜ್ಯ ಕುರುಬ ಸಮಾಜದ ನಿರ್ದೇಶಕಿ ಸುಮಿತ್ರಮ್ಮ,ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ರಾಮಚಂದ್ರಪ್ಪ, ಮಾಜಿ ನಗರಸಭಾ ಅಧ್ಯಕ್ಷೆ ರಮಾದೇವಿ ಮಂಜುನಾಥ್, ನಗರಸಭಾ ಸದಸ್ಯ ನಟರಾಜ್, ಮುಖಂಡರಾದ ಎ.ಎನ್.ನಾಗರಾಜ್, ಚಂದ್ರಪ್ಪ, ದಿನೇಶ್, ಸಂತೆಕಲ್ಲಹಳ್ಳಿ ರಾಜಣ್ಣ, ತಿಪ್ಪಣ್ಣ, ಪ್ರಕಾಶ್, ಚನ್ನಕೇಶವಪುರ ರಾಜಣ್ಣ, ಚಂದ್ರಪ್ಪ ಕನಂಪಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement