ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಗೌರಿಬಿದನೂರಲ್ಲಿ ಕುಡಿವ ನೀರಿಗೆ ಹಾಹಾಕಾರ

Srinivasa Murthy VN
Updated On : 12 Nov 2013, 12:21 pm

-ವಿ.ಡಿ. ಗಣೇಶ್
ಕ.ಪ್ರ.ವಾರ್ತೆ ಗೌರಿಬಿದನೂರು ನ. 11
ಕರ್ನಾಟಕ ನಗರ ನೀರುಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ರು. 4.99 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಟ್ಯಾಂಕ್ ಬತ್ತಿಹೋಗಿದ್ದು, ಪಟ್ಟಣದ ಜನತೆಯ ನೀರಿನ ಆಹಾಕಾರ ಮುಗಿಲು ಮುಟ್ಟಿದೆ.
ಪುರಸಭೆಯಿಂದ ಬದಲೀ ವ್ಯವಸ್ಥೆ ರೂಪಿಸದ ಕಾರಣ ನಾಗರಿಕರು ನೀರಿಗಾಗಿ ಪರಿತಪಿಸುತ್ತಿದ್ದು ಪುರಸಭೆ ಕಳುಹಿಸುವ ಟ್ಯಾಂಕರ್ ನೀರಿಗಾಗಿ ಜನ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನದಿ ಪಾತ್ರದ ಒಳಗೆ ಅಂತರ್ಜಲ ಸಮೃದ್ಧವಾಗಿರುವ ಸಂದರ್ಭದಲ್ಲಿ ಈ ಯೋಜನೆ ಉಪಯೋಗವಾಗುತ್ತದೆ. ಈಗ ಇಂದರಿಂದ ಯಾವುದೇ ಉಪಯೋಗವಾಗುತ್ತಿಲ್ಲ. ಕಿಂಡಿ ಅಣೆಕಟ್ಟಿಗೆ ಹತ್ತಿರದಲ್ಲಿಯೇ ನದಿಯಲ್ಲಿ 35ಅಡಿ ಆಳ ಮತ್ತು 45 ಅಡಿ ಅಗಲದ ನೀರನ್ನು ಹಿಂಗಿಸುವ ವಿಧಾನದಿಂದ ನೀರು ಪಟ್ಟಣಕ್ಕೆ ಸಾಕಾಗುವಷ್ಟು ಬರುತ್ತಿತ್ತು. ಮರಳುಗಣಿಗಾರಿಕೆ ಹೆಚ್ಚಾಗಿ ಅಂತರ್ಜಲ ಪಾತಾಳಕ್ಕಿಳಿದಿದ್ದು, ನೀರು ಪೂರೈಕೆ ಸ್ಥಗಿತಗೊಂಡಿದೆ. ಈಗ ಪಟ್ಟಣ ಪೂರ್ತಿಯಾಗಿ ಟ್ಯಾಂಕರ್ ನೀರಿಗಾಗಿ ಕಾಯಬೇಕಾಗಿದೆ, ಕೋಟ್ಯಂತರ ರು.ಗಳಲ್ಲಿ ನಿರ್ಮಿಸಿರುವ ಈ ಯೋಜನೆ ಪ್ರಯೋಜನವಿಲ್ಲದಂತಾಗಿದೆ.
ಅಶುದ್ಧ ನೀರಿನ ಪರಿಣಾಮವಾಗಿ ಪಟ್ಟಣದ ಜನತೆ ರೋಗಗಳಿಗೆ ತುತ್ತಾಗುತ್ತಿದ್ದು, ಇದರ ಅರಿವಿದ್ದರೂ ಉತ್ತಮ ನೀರನ್ನು ಒದಗಿಸುವಲ್ಲಿ ಪುರಸಭೆ ವಿಫಲವಾಗಿದೆ. ಪುರಸಭೆಯ ನೀರು ಸರಬರಾಜು ಕೆಲಸ ಸಿಕ್ಕವರಿಗೆ ಸೀರುಂಡೆಯಂತಾಗಿದ್ದು, ಪುರಸಭೆ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ಕರೆದು ನೀರಿನ ಸಮಸ್ಯೆಗೆ ತಕ್ಷಣ ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆದು ಪಟ್ಟಣಕ್ಕೆ ನೀರು ಪೂರೈಸಿ ಎಂದು ಸೂಚಿಸಿದ್ದರೂ ಪ್ರಯೋಜನ ಶೂನ್ಯವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement